ಬೆಂಗಳೂರು,ಮಾ.13-ಶ್ರೀ ಮದ್ದೂರಮ್ಮ ದೇವಿಯ ಜಾತ್ರೆ ಮತ್ತು ಶ್ರೀ ಧರ್ಮರಾಯ ದೇವಿ ಕರಗ ಪಲ್ಲಕ್ಕಿ ಉತ್ಸವದ ಅಂಗವಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ 15 ರ ರಾತ್ರಿ 11 ಗಂಟೆಯವರೆಗೆ ಪರಪ್ಪನ ಅಗ್ರಹಾರ ಮತ್ತು ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಹೆಬ್ಬಗೋಡಿ ಮತ್ತು ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಹುಸ್ಕೂರು ಗ್ರಾಮದ ಶ್ರೀ ಮದ್ದೂರಮ್ಮ ದೇವಿಯ ಜಾತ್ರೆ ಮತ್ತು ಶ್ರೀ ಧರ್ಮರಾಯ ದೇವಿ ಕರಗ ಪಲ್ಲಕ್ಕಿ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ.
ಈ ನಿಟ್ಟಿನಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನದ ಅಮಲಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ತೊಂದರೆ ಮಾಡಬಹುದಾದ ಸಾಧ್ಯತೆ ಇರುವ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗ ದಂತೆ ಅಹಿತಕರ ಘಟನೆಗಳನ್ನು ತಡೆಯುವ ಅವಶ್ಯಕತೆ ಇರುವುದರಿಂದ ಈ ಎರಡು ದಿನ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಅವರು ಈ ಆದೇಶ ಹೊರಡಿಸಿ ದ್ದಾರೆ.
ಪರಪ್ಪನ ಅಗ್ರಹಾರ ಮತ್ತು ಹೆಬ್ಬಗೋಡಿ ಠಾಣಾ ವ್ಯಾಪ್ತಿಗಳಲ್ಲಿನ (ಸ್ಟಾರ್ ಹೋಟೇಲ್‌್ಸ ಮತ್ತು ಕ್ಲಬ್ ಹೊರತು ಪಡಿಸಿ) ಎಲ್ಲಾ ಮದ್ಯದ ಅಂಗಡಿ, ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ವೈನ್‌್ಸ ಸ್ಟೋರ್‌ಗಳನ್ನು ಮುಚ್ಚುವಂತೆ ಮತ್ತು ಮದ್ಯ ಮಾರಾಟ ನಿಷೇಧಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
