ಬೆಂಗಳೂರು, ಮಾ.14-ಇರಾನ್-ಇಸ್ರೇಲ್ ನಡುವಿನ ಯುದ್ಧ ಪರಿಸ್ಥಿತಿಯ ಪರಿಣಾಮ ಚಿನಿವಾರ ಪೇಟೆಯ ಮೇಲೂ ಆಗಿದ್ದು, ದುಬಾರಿ ಲೋಹಗಳಾದ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ನಿರಂತರ ಇಳಿಕೆಯಾಗಿದೆ.
ಕಳೆದ ಎರಡು ವಾರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತಗಳಾಗಿವೆ. ಏರಿಕೆಗಿಂತ ಇಳಿಕೆಯೇ ಹೆಚ್ಚಾಗಿರುವುದು ಕಂಡುಬಂದಿದೆ. ನಾಗಾಲೋಟದಲ್ಲಿ ಏರಿಕೆಯಾಗುತ್ತಿದ್ದ ಈ ಲೋ ಹಗಳಿಗೆ ಈ ಯುದ್ಧ ಆರಂಭವಾದ ಬಳಿಕ ಬೆಲೆ ಏರಿಕೆಗೆ ಬ್ರೇಕ್ ಬಿದ್ದಂತಾಗಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಇಂದು ಚಿನ್ನ ಮತ್ತು ಬೆಳ್ಳಿ ದರಗಳು ಕಡಿಮೆಯಾಗಿವೆ. 24 ಕ್ಯಾರಟ್‌ನ ಚಿನ್ನ ಒಂದು ಗ್ರಾಂಗೆ 103 ರೂ. ಕಡಿಮೆಯಾಗಿದ್ದು, 15, 966 ರೂ.ನಷ್ಟಿದೆ. 22 ಕ್ಯಾರಟ್‌ನ ಚಿನ್ನ ಒಂದು ಗ್ರಾಂಗೆ 95 ರೂ. ನಷ್ಟು ಇಳಿಕೆಯಾಗಿದ್ದು, 14,635 ರೂ.ಗೆ ನಷ್ಟಿದೆ. 18 ಕ್ಯಾರಟ್‌ನ ಚಿನ್ನ ಒಂದು ಗ್ರಾಂಗೆ 78 ರೂ. ನಷ್ಟು ಕಡಿಮೆಯಾಗಿದ್ದು, 11,974ಗೆ ಇಳಿಕೆಯಾಗಿದೆ.
ಮಾ. 5ರಿಂದಲೂ ಚಿನ್ನದ ದರ ಇಳಿಮುಖವಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. ನಿರಂತರ ಇಳಿಕೆಯಾಗುತ್ತಿದ್ದ ಚಿನ್ನದ ದರವು ಮಾ. 7, 10 ಹಾಗೂ 11 ರಂದು ಮಾತ್ರ ಏರಿಕೆಯಾಗಿತ್ತು. ಮಾ.12ರಿಂದ ಸತತವಾಗಿ ಇಳಿಕೆಯಾಗುತ್ತಾ ಬಂದಿದೆ.
ಅದೇ ರೀತಿ ಬೆಳ್ಳಿ ದರವೂ ಇಳಿಮುಖವಾಗಿದ್ದು, ಇಂದು ಒಂದು ಕೆ.ಜಿ.ಗೆ 5 ಸಾವಿರ ರೂ. ಇಳಿಕೆಯಾಗಿದ್ದು, 2.75 ಲಕ್ಷ ರೂ. ನಷ್ಟಿದೆ. ಮಾ. 5ರಿಂದ ಸ್ಥಿರವಾಗಿದ್ದ ಬೆಳ್ಳಿ ದರವು ಮಾ. 5ರಂದು 5 ಸಾವಿರ ರೂ. ನಷ್ಟು ಕಡಿಮೆಯಾಗಿತ್ತು. ಮಾ.10ರಂದು 10 ಸಾವಿರ ರೂ.ನಷ್ಟು ಏರಿಕೆಯಾಗಿತ್ತು. ಮಾ.12ರಂದು ಮತ್ತೆ 10 ಸಾವಿರ ರೂ. ನಷ್ಟು ಇಳಿಕೆಯಾಗಿದ್ದ ಬೆಳ್ಳಿ ದರವು ಇಂದು ಮತ್ತೆ ಇಳಿಕೆಯಾಗಿದೆ.
ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಸದ್ಯಕ್ಕೆ ಇಳಿಮುಖವಾಗಿದ್ದರೂ ದೀರ್ಘಾವಧಿಯಲ್ಲಿ ಏರುಗತಿಯಲ್ಲಿ ಇರುತ್ತವೆ ಎಂಬುದು ವರ್ತಕರ ಅಭಿಪ್ರಾಯವಾಗಿದೆ.
