ಲಾಸ್ ಏಂಜಲೀಸ್, ಮಾ. 16 ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿರುವ ಹಾಲಿವುಡ್ ಸ್ಟುಡಿಯೋದ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಒನ್ ಬ್ಯಾಟಲ್ ಆಫ್ಟರ್ ಅನದರ್ ಸಿನಿಮಾ ಅತ್ಯುತ್ತಮ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಭಾಜನವಾಯಿತು.
ಈ ಸಿನಿಮಾದಲ್ಲಿ ಟೈಟಾನಿಕ್ ಖ್ಯಾತಿಯ ಲಿಯನಾರ್ಡೋ ಡಿಕ್ಯಾಪ್ರರಿಯೋ ಹೀರೋ. ಪೌಲ್ ಥಾಮಸ್ ಆ್ಯಂಡ್ರಿಸನ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದದಾರೆ. ಅವರಿಗೆ ಅತ್ಯುತ್ತಮ ನಿರ್ದೇಶನ ಪ್ರಶಸ್ತಿ ಕೂಡ ಸಿಕ್ಕಿದೆ.
ಈ ಚಿತ್ರ ಒಟ್ಟೂ ಆರು ಅವಾರ್ಡ್ ಗೆದ್ದಿದ್ದು, ಜಿಯೋ ಹಾಟ್‌ಸ್ಟಾರ್ ಅಲ್ಲಿ ವೀಕ್ಷಣೆಗೆ ಲಭ್ಯವಿದೆ. ಜೆಸ್ಸಿ ಬಕ್ಲಿ ಅವರು ಹ್ಯಾಮ್ನೆಟ್ ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ಅವಾರ್ಡ್ ಪಡೆದರು. ಸಿನ್ನರ್ಸ್ ಸಿನಿಮಾ ನಟನೆಗೆ ಮೈಕಲ್ ಬಿ ಜೋರ್ಡನ್ ಅವರು ಅತ್ಯುತ್ತಮ ನಟ ಅವಾರ್ಡ್ ಪಡೆದರು.
ಅತ್ಯುತ್ತಮ ಸಿನಿಮಾ: ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ನಟಿ: ಜೆಸ್ಸಿ ಬಕ್ಲಿ (ಹ್ಯಾಮ್ನೆಟ್)
ಅತ್ಯುತ್ತಮ ನಟ: ಮೈಕಲ್ ಬಿ ಜೋರ್ಡನ್ (ಸಿನ್ನರ್ಸ್)
ಅತ್ಯುತ್ತಮ ಒರಿಜಿನಲ್ ಸಾಂಗ್: ಗೋಲ್ಡನ್
ಅತ್ಯುತ್ತಮ ಛಾಯಾಗ್ರಹಣ: ಸಿನ್ನರ್ಸ್
ಅತ್ಯುತ್ತಮ ಸಿನಿಮಾ ಎಡಿಟಿಂಗ್: ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ಸೌಂಡ್ ಸಿನಿಮಾ: ಎಫ್1
ಅತ್ಯುತ್ತಮ ಸಂಗೀತ ಸಂಯೋಜನೆ: ಸಿನ್ನರ್ಸ್
ಅತ್ಯುತ್ತಮ ಡಾಕ್ಯುಮೆಂಟರಿ ಶಾರ್ಟ್ ಫಿಲ್ : ಆಲ್ ದಿ ಎಂಪ್ಟಿ ರೂಂ
ಅತ್ಯುತ್ತಮ ವಿಶ್ಯುವಲ್ ಎಫೆಕ್ಟ್: ಅವತಾರ್; ಫೈಯರ್ ಆ್ಯಂಡ್ ಆ್ಯಶ್
ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ಗಿಲ್ಲೆರ್ಮೊ ಡೆಲ್ ಟೊರೊ ಅವರ ಫ್ರಾಂಕೆನ್‌ಸ್ಟೈನ್ ತನ್ನ ಅದ್ದೂರಿ ಕರಕುಶಲತೆ, ವೇಷಭೂಷಣ ವಿನ್ಯಾಸ, ಮೇಕಪ್ ಮತ್ತು ಕೇಶವಿನ್ಯಾಸ ಮತ್ತು ನಿರ್ಮಾಣ ವಿನ್ಯಾಸಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ವೆಪನ್‌್ಸ ಎಂಬ ಹಾರರ್ ಥ್ರಿಲ್ಲರ್ ಚಿತ್ರದ ಅಭಿನಯಕ್ಕಾಗಿ ಆಮಿ ಮ್ಯಾಡಿಗನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದರು, 75 ವರ್ಷ ವಯಸ್ಸಿನ ನಟಿ 1986 ರಲ್ಲಿ ಟ್ವೈಸ್ ಇನ್ ಎ ಲೈಫ್‌ಟೈಮ್ ಗಾಗಿ ಮೊದಲ ಬಾರಿಗೆ ನಾಮನಿರ್ದೇಶನಗೊಂಡ 40 ವರ್ಷಗಳ ನಂತರ ಈ ಪ್ರಶಸ್ತಿ ಬಂದಿದೆ.
ಹಾಲಿವುಡ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಇದು ಹಾಲಿವುಡ್ ಚಿತ್ರರಂಗದ ಪಾಲಿಗೆ ವಿಶೇಷ ಎನಿಸಿಕೊಂಡಿದೆ. ಭಾರತದ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಇಲ್ಲಿ ಭಾಗಿ ಆಗಿದ್ದರು. ಈ ವೇಳೆ ವಿವಿಧ ಸಿನಿಮಾಗಳಿಗೆ ಅವಾರ್ಡ್ ನೀಡಲಾಯಿತು.
ಸಿನ್ನರ್ಸ್ ಸಿನಿಮಾ ಬರೋಬ್ಬರಿ 16 ವಿಭಾಗಗಳಲ್ಲಿ ನಾಮಿನೇಟ್ ಆಗಿತ್ತು. ಆಸ್ಕರ್ ಅವಾರ್ಡ್ ಇತಿಹಾಸದಲ್ಲಿ ಚಿತ್ರವೊಂದು ಇಷ್ಟು ನಾಮಿನೇಟ್ ಆಗಿದ್ದು ಇದೇ ಮೊದಲು. ಆಲ್ ಅಬೌಟ್ ಈವ್ ಸಿನಿಮಾ 14 ವಿಭಾಗಗಳಲ್ಲಿ ನಾಮಿನೇಟ್ ಆಗಿ ದಾಖಲೆ ಮಾಡಿತ್ತು. ಸಿನ್ನರ್ಸ್ ಸಿನಿಮಾ ಕೆಲವು ವಿಭಾಗಗಳಲ್ಲಿ ಅವಾರ್ಡ್ ಪಡೆಯಲು ಯಶಸ್ವಿ ಆಗಿದೆ.
