ಬೆಳಗಾವಿ, ಡಿ.12- ಅಭಿವೃದ್ಧಿ ಹಾಗೂ ಸ್ಥಾನಮಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ತಾರತಮ್ಯವನ್ನು ನಿವಾರಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗು ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅವೇಶದಲ್ಲಿ ಇಂದಿನಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಕುರಿತು ಚರ್ಚೆ ಆರಂಭವಾಯಿತು. ಅದರಲ್ಲಿ ಭಾಗವಹಿಸಿದ್ದ ಯತ್ನಾಳ್ ಅವರು, ಬೆಳಗಾವಿ ಸುವರ್ಣ ಸೌಧ ನಿರ್ಮಾಣ ಆದ ಮೇಲೆ ಇದು 11 ನೇ ಸದನವಾಗಿದೆ. ಉತ್ತರ ಕರ್ನಾಟಕದ ಬಗ್ಗೆ ಮೊದಲ ದಿನವೇ ಇಲ್ಲಿ ಚರ್ಚೆಯಾಗಬೇಕಿತ್ತು, ಆದರೆ ಈವರೆಗೂ ಆಗಲಿಲ್ಲ. ಹಾಗಿದ್ದರೆ ಈ ಭಾಗದಲ್ಲಿ ಸದನ ಮಾಡುವ ಉದ್ದೇಶವೇನು ಎಂದು ಪ್ರಶ್ನಿಸಿದರು.
ಬೆಳಗಾವಿ ಸಮಸ್ಯೆ ಮಹಾರಾಷ್ಟ್ರ ಗಡಿ, ಉತ್ತರಕನ್ನಡ ಅಭಿವೃದ್ಧಿ ಚರ್ಚೆ ಆಗಬೇಕೆಂದು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಸುವರ್ಣ ಸೌಧ ನಿರ್ಮಿಸಿದ್ದಾರೆ. ಆದರೆ ಲಾಭವೇನು, ಸಮಸ್ಯೆಗಳೆ ಚರ್ಚೆಯಾಗುತ್ತಿಲ್ಲ. ನಾನು ಸಮಗ್ರ ಕರ್ನಾಟಕ ದ ಪರವಾಗಿದ್ದೇನೆ, ಕರ್ನಾಟಕ ಪ್ರತ್ಯೇಕತೆಗೆ ಎಂದಿಗೂ ಬೆಂಬಲ ಕೊಟ್ಟಿಲ್ಲ, ಎಲ್ಲರೂ ಒಂದಾಗಿ ಚಾಮರಾಜನಗರದಿಂದ ಬೀದರ್, ಕೋಲಾರದಿಂದ ಕೊಡಗುವರಿಗೂ ಒಂದೇ ಎಂಬ ಭಾವನೆ ಗಟ್ಟಿಗೊಳಿಸಬೇಕು. ಅಭಿವೃದ್ಧಿ ಮತ್ತು ಸ್ಥಾನಮಾನಗಳಲ್ಲಿ ಸಮಾನ ಅವಕಾಶ ನೀಡುವ ಮೂಲಕ ಪ್ರತ್ಯೇಕ ರಾಜ್ಯದ ಕೂಗಿಗೆ ಅವಕಾಶ ನೀಡಬಾರದು ಎಂದರು.
ಬೆಂಗಳೂರಿನಲ್ಲಿ ಒಂದು ಸಚಿವ ಸಂಪುಟ ಸಭೆ ನಡೆದರೆ, ಇನ್ನೊಂದು ಸಭೆ ಸುವರ್ಣ ಸೌಧದಲ್ಲಿ ನಡೆಸಬೇಕು. ವರ್ಷದಲ್ಲಿ 100 ದಿನ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಕಲಾಪ ನಡೆಸಬೇಕು. ಸುವರ್ಣ ಸೌಧಕ್ಕೆ ಕೇವಲ ಲೈಟಿಂಗ್ ಮಾಡಿದರೆ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗುವುದಿಲ್ಲ. ಎರಡನೇ ಹಂತದ ಕಾರ್ಯದರ್ಶಿ ಹುz್ದÉಗಳನ್ನು ಇಲ್ಲಿಗೆ ಸ್ಥಳಾಂತರಿಸಿ. ಸಕ್ಕರೆ ನಿರ್ದೇಶನಾಲಯ ಇಲ್ಲಿದೆ ಆದರೆ ಕಚೇರಿಯಲ್ಲಿ ಮೂವರು ಸಿಬ್ಬಂದಿಗಳಲ್ಲ. ಎಲ್ಲಾ ಹುz್ದÉಗಳು ಮಧ್ಯ ಕರ್ನಾಟಕ, ಹಳೆ ಮೈಸೂರು ಭಾಗಕ್ಕೆ ಸಿಕ್ಕಿವೆ. ಉತ್ತರ ಕರ್ನಾಟಕ ಭಾಗಕ್ಕೆ ಭಾರೀ ಅನ್ಯಾಯವಾಗಿದೆ. ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಸರಿಯಲ್ಲ. ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಇನ್ಷ್ಯೂರೆನ್ಸ್ ಕಂಪೆನಿ ಹೆಸರಲ್ಲಿ ಯಾಮಾರಿಸ್ತಾರೆ ಹುಷಾರ್..!
ಆಹಾರದ ಕೊರತೆ ಇದ್ದಾಗ ಜೈ ಜವಾನ್, ಜೈ ಕಿಸಾನ್ ಎಂದು ಕರೆ ಕೊಟ್ಟ ಲಾಲ್ ಬಹುದ್ದೂರ್ ಶಾಸ್ತ್ರಿ 1964ರಲ್ಲಿ ಆಲಮಟ್ಟಿಗೆ ಶಿಲಾನ್ಯಾಸ ಮಾಡಿದ್ದರು. ಜನರ ಬದುಕು ಸುಧಾರಣೆಗೆ ಇರುವ ಭೌತಿಕ ಸೌಕರ್ಯಗಳನ್ನು ಹೆಚ್ಚಿಸಬೇಕು. ಉತ್ಪಾದನೆಯನ್ನು ವೃದ್ಧಿಸಬೇಕು. ಪ್ರತಿಯೊಂದು ರಾಜ್ಯದ ಧ್ಯೇಯವೇ ಆರ್ಥಿಕ ವರಮಾನವನ್ನು ಹೆಚ್ಚಿಸಿಕೊಳ್ಳುವುದು. ಎಲ್ಲ ಜನಾಂಗಗಳ, ಎಲ್ಲ ಭಾಗಗಳ ಸಮಗ್ರ ಅಭಿವೃದ್ಧಿಯಾಗಬೇಕು. ಜನರ ಆದಾಯ ಹೆಚ್ಚಾಗಬೇಕು ಎಲ್ಲರಿಗೂ ನ್ಯಾಯ ಸಿಗಬೇಕು. ಮೈಸೂರು ಕರ್ನಾಟಕ ಉತ್ತಮ ಅಭಿವೃದ್ಧಿ ಸಾಸಿದೆ. ಮೈಸೂರು ಮಹಾರಾಜರು ನೀರಾವರಿಗೆ ಆದ್ಯತೆ ನೀಡಿದರು, ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು. ನಾಲ್ವಡಿ ಕೃಷ್ಣ ಒಡೆಯರ್ ಮಹಾರಾಜರು ಏಷ್ಯಾ ಖಂಡದಲ್ಲೇ ಮೊದಲ ವಿದ್ಯುತ್ ಘಟಕ ಸ್ಥಾಪಿಸಿದರು. ಆದರೆ ಉತ್ತರ ಕರ್ನಾಟಕ ಭಾಗದ ದುರ್ದೈವ ಕಲ್ಯಾಣ ಕರ್ನಾಟಕ , ಮುಂಬೈ ಕರ್ನಾಟಕ ದಲ್ಲಿ ನವಾಬರ ಆಡಳಿತವಿತ್ತು. ನಿಜಾಂ ಶಾಹಿ, ಆದಿಲ್ ಶಾಹಿ ಸೇರಿದಂತೆ ಹಲವು ರಾಜರು ಗೋರಿಗಳನ್ನು ಅಭಿವೃದ್ಧಿಪಡಿಸಿಕೊಂಡರು. ಆ ರಾಣಿ, ಈ ರಾಣಿ ಎಂದು ಗೋರಿಗಳನ್ನು ಕಟ್ಟಿಕೊಂಡರು. ಕಲಬುರಗಿ, ಬೀದರ್ , ವಿಜಯಪುರ ಸೇರಿದಂತೆ ಎಲ್ಲ ಕಡೆ ಗೋರಿಗಳೇ ಹೆಚ್ಚಾಗಿ ಕಾಣುತ್ತವೆ ಎಂದರು.
ಈ ಹಂತದಲ್ಲಿ ಕಾಂಗ್ರೆಸಿಗರು ಆಕ್ಷೇಪ ವ್ಯಕ್ತಪಡಿಸಿದ್ದಾಗ, ನಿಜಾಮರನ್ನು ಸಮರ್ಥಿಸಿಕೊಳ್ಳುವುದೇ ನಿಮ್ಮ ಉದ್ಯೋಗ ಕುಳಿತುಕೊಳ್ಳಿ ಎಂದು ತಿರುಗೇಟು ನೀಡಿದ ಯತ್ನಾಳ್, ಆ ಭಾಗ ಅಭಿವೃದ್ಧಿಯಾಗಿದೆ, ನಮ್ಮ ಭಾಗ ಅಭಿವೃದ್ಧಿಯಾಗಿಲ್ಲ ಎಂಬ ಹೊಟ್ಟೆ ಕಿಚ್ಚಿಲ್ಲ. ಹಳೆ ಮೈಸೂರು ಭಾಗವನ್ನು ಆದರ್ಶವಾಗಿಟ್ಟುಕೊಂಡು ನಾವು ಬದ್ಧತೆ ಪ್ರದರ್ಶಿಸಬೇಕಿದೆ ಎಂದರು.ಉತ್ತರ ಕರ್ನಾಟಕ ಭಾಗ ಹಿಂದುಳಿಯಲು ನಮ್ಮ ಭಾಗದ ಜನಪ್ರತಿನಿಗಳು ಕಾರಣರಾಗಿದ್ದಾರೆ. ಕಾಲಕಾಲಕ್ಕೆ ಧ್ವನಿ ಎತ್ತಿದ್ದರೆ 100 ರೂಪಾಯಿನಲ್ಲಿ 20 ರೂಪಾಯಿಗಳಾದರೂ ನಮ್ಮ ಭಾಗಕ್ಕೆ ಸಿಗುತ್ತಿತ್ತು. ಅದರೆ ಜನಪ್ರತಿನಿಗಳು ಗಂಭೀರವಾಗಿ ಕೆಲಸ ಮಾಡಲಿಲ್ಲ ಎಂದು ಆರೋಪಿಸಿದರು.
ಎಚ್.ಕೆ ಪಾಟೀಲ್ , ಎಂ. ಬಿ ಪಾಟೀಲ್ , ಬಸವರಾಜ ಬೊಮ್ಮಾಯಿ ಬಿಟ್ಟರೆ ಉಳಿದೆಲ್ಲಾ ನೀರಾವರಿ ಮಂತ್ರಿಗಳು ಹಳೆ ಮೈಸೂರು ಭಾಗದವರೇ ಹೆಚ್ಚಾಗಿದ್ದಾರೆ. ರಮೇಶ ಜಾರಕಿಹೊಳಿಯವರು ಏನೋ ಮಾಡಬೇಕೆಂದು ಹೊರಟರು. ಅವರ ವಿರುದ್ಧ ಕುತಂತ್ರ ರಾಜಕಾರಣ ಮಾಡಿ ಮುಗಿಸಿದರು. ಇಂತಹ ಹಲ್ಕಾ ರಾಜಕಾರಣ ಬೇಕಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹಲ್ಕಾ ಪದ ಬಳಕೆ ಸರಿಯಲ್ಲ. ಅದನ್ನು ಹಿಂಪಡೆಯಿರಿ ಎಂದು ಸಭಾಧ್ಯಕ್ಷ ಪೀಠದಲ್ಲಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿ ಸಲಹೆ ನೀಡಿದರು. ನೀವು ಬೇಕಾದರೆ ಕಡತದಿಂದ ತೆಗೆಯಿರಿ ನಾನು ಹಿಂಪಡೆದುಕೊಳ್ಳುವುದಿಲ್ಲ ಎಂದು ಯತ್ನಾಳ್ ಪಟ್ಟು ಹಿಡಿದರು.
ಎಲ್ಲಾ ಅಭಿವೃದ್ಧಿಯೂ ಬೆಂಗಳೂರು ಕೇಂದ್ರೀಕೃತವಾಗಿದೆ. ಬಿಜಾಪುರ, ಬೀದರ್ ಗಳಿಂದ ಬರುವ ಹುಡುಗರು 120-15 ಸಾವಿರಕ್ಕೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ಕೊಠಡಿಯಲ್ಲಿ 4-5 ಜನ ಇದ್ದುಕೊಂಡು, ತಲಾ 3 ಸಾವಿರ ರೂಪಾಯಿ ಬಾಡಿಗೆ ಹಂಚಿಕೊಳ್ಳುತ್ತಿದ್ದಾರೆ. ಶನಿವಾರ ಬಟ್ಟೆ ಹೊಗೆದು, ಒಂದು ಸಿನಿಮಾ ನೋಡಿದರೆ 12 ಸಾವಿರ ಆಗುತ್ತದೆ. ಇನ್ನು ಆರ್ಥಿಕವಾಗಿ ಉದ್ಧಾರವಾಗುವುದು ಹೇಗೆ ಎಂದು ಪ್ರಶ್ನಿಸಿದರು.ನೆರೆಯ ಮಹಾರಾಷ್ಟ್ರದಲ್ಲಿ 3-4 ನಗರಗಳನ್ನು ನಿರ್ಮಾಣ ಮಾಡಿದ್ದಾರೆ. ಮುಂಬೈ, ಪುಣೆ ಸೇರಿ ಪ್ರತಿ ಜಿಲ್ಲೆಯಲ್ಲೂ ಕೈಗಾರಿಕೆ ಮಾಡಲಾಗುತ್ತಿದೆ. ನಾಗ್ಪುರ ಎಂದು ಮಾಡಿ, ವರ್ಷಕ್ಕೆ ಎರಡು ಬಾರಿ ಅವೇಶನ ನಡೆಸುತ್ತಾರೆ. ಇಲ್ಲಿ 10 ದಿನವೂ ಅವೇಶನ ನಡೆಯುವುದಿಲ್ಲ ಎಂದರು.
ನಮ್ಮ ಅಶೋಕ್ ವಿರುದ್ಧ ಪಕ್ಷ ನಾಯಕರಾಗಿದ್ದಾರೆ, ನಮಗೆ ಬೇಜಾರಿಲ್ಲ, ಅವರು ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಉತ್ತರ ಕರ್ನಾಟಕದ ಜನರಿಗೆ ಗೊತ್ತಾಗಿದೆ.ಯತ್ನಾಳ್ ಬಾಯಿ ಸರಿಯಿದ್ದರೆ ರಾಜ್ಯದ ಮುಖ್ಯಮಂತ್ರಿ ಯಾಗುತ್ತಿದ್ದರು ಎಂದು ಕೆಲವರು ಹೇಳುತ್ತಾರೆ. ನನ್ನ ಬಾಯಿ ಸರಿ ಇರಲಿ, ಬಿಡಲಿ. ಆದರೆ ವಿಜಯಪುರದಲ್ಲಿ ಒಂದು ರಸ್ತೆ ಸರಿ ಇರಲಿಲ್ಲ. ನಾನು ಹೋರಾಟ ಮಾಡಿ ಕುಮಾರಸ್ವಾಮಿಯಿಂದ 1500 ಕೋಟಿ ಪಡೆದುಕೊಂಡಿದ್ದೆ. ನಾವು ಜನರ ಸಲುವಾಗಿ ಮಾತನಾಡಲೇಬೇಕು.
ಉಸಿರಾಯಿತು ಕನ್ನಡ, ಹೆಸರಾಯಿತು ಕರ್ನಾಟಕ ಎಂದು ಕಾರ್ಯಕ್ರಮ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಜನರು ಕನ್ನಡ ಬಳಸುತ್ತಿದ್ದೇವೆ. ಆದರೆ ಪ್ರಾದೇಶಿಕ ಅಸಮಾನತೆ ಬಹಳ ಇದೆ , ಕೈಗಾರಿಕೆ, ಮೂಲಭೂತ ಸೌಕರ್ಯ, ಕೃಷಿ, ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ನಾವು ಹಿಂದೆ ಉಳಿಸಿದ್ದೇವೆ.ಡಾ ನಂಜುಂಡಪ್ಪ ವರದಿ ಪ್ರಕಾರ ಕಳೆದ 25 ವರ್ಷಗಳಿಂದಲೂ ಅಸಮಾನತೆ ನಿರ್ವಹಣೆಯಾಗಿಲ್ಲ. ಭೌಗೊಳಿಕವಾಗಿ ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ 8916 ಚದರ ಕಿಲೋ ಮೀಟರ್ ಹೆಚ್ಚು ವಿಸ್ತೀರ್ಣ ಹೊಂದಿದೆ. ಶೇ.58ರಷ್ಟು ನೀರಿನ ಸಂಪನ್ಮೂಲವಿದೆ. ಆದರೆ ನೀರಾವರಿ ಯೋಜನೆಗಳು ಕುಂಠಿತವಾಗಿವೆ ಎಂದರು.
ಕಳೆದ 30-40 ವರ್ಷಗಳಿಂದ ಯೋಜನೆಗಳು ಮುಗಿದಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆ 16 ಸಾವಿರ ಕೋಟಿ ನಿಗದಿಪಡಿಸಲಾಗಿತ್ತು, ಈಗ 80 ಸಾವಿರ ಕೋಟಿ ದಾಟಿದೆ, ಶೀಘ್ರ ಪೂರ್ಣಗೊಳಿಸಬೇಕು. ಬರಗಾಲದಿಂದ ಮುಕ್ತಿ ಸಿಗಬೇಕೆಂದರೆ ಕೆರೆಗಳಿಗೆ ನೀರು ತುಂಬಿಸಬೇಕು. ಮಹದಾಯಿ, ನವಲಿ ಜಲಾಶಯಗಳನ್ನು ಹೊಸದಾಗಿ ನಿರ್ಮಿಸಿ 31 ಟಿಎಂಸಿ ನೀರು ಸಂಗ್ರಹಿಸಬೇಕು ಎಂದು ಆ