Saturday, November 23, 2024
Homeರಾಜ್ಯಬೆಂಗಳೂರನ್ನು ವರ್ಲ್ಡ್ ಕ್ಲಾಸ್ ವಾಸಯೋಗ್ಯ ನಗರ ಮಾಡ್ತೀವಿ : ಡಿಕೆಶಿ

ಬೆಂಗಳೂರನ್ನು ವರ್ಲ್ಡ್ ಕ್ಲಾಸ್ ವಾಸಯೋಗ್ಯ ನಗರ ಮಾಡ್ತೀವಿ : ಡಿಕೆಶಿ

ಬೆಳಗಾವಿ, ಡಿ.14- ಆರೋಗ್ಯ, ಸಂಚಾರ ಸೇರಿದಂತೆ ರಾಜಧಾನಿ ಬೆಂಗಳೂರನ್ನು ಜಾಗತಿಕ ಮಟ್ಟದ ವಾಸಯೋಗ್ಯ ನಗರವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ತಿಳಿಸಿದ್ದಾರೆ.ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿಲಿಕಾನ್ ಸಿಟಿ ಬೆಂಗಳೂರನ್ನು ಉತ್ತಮ ದರ್ಜೆಯ ನಗರವನ್ನಾಗಿಸಲು ಪಣ ತೊಡಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು. ತ್ಯಾಜ್ಯವಿಲೇವಾರಿ, ಸಂಚಾರ ದಟ್ಟಣೆ, ಸರಗಳ್ಳತನ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಒಂದು ವ್ಯವಸ್ಥಿತ ಯೋಜನೆ ಮೂಲಕ ನಿವಾರಿಸಲಾಗುವುದು ಎಂದರು.

‘ಬ್ರಾಂಡ್ ಬೆಂಗಳೂರು’ ಪರಿಕಲ್ಪನೆ ಹಾಗೂ ಯೋಜನೆಗೆ ಸಂಬಅಸಿದಂತೆ 70,000ಕ್ಕೂ ಹೆಚ್ಚು ಅಭಿಪ್ರಾಯ, ಸಲಹೆಗಳು ನಾಗರಿಕರು ಮತ್ತು ವಿದೇಶಗಳಿಂದಲೂ ಬಂದಿವೆ. ಇದರಲ್ಲಿ ಆರೋಗ್ಯ, ಸಂಚಾರ, ತ್ಯಾಜ್ಯ- ಹೀಗೆ ಹಂಚಿಕೆ ಮಾಡಿ ಹಲವು ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಹೇಳಿದರು.

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-12-2023)

ಬೆಂಗಳೂರಿನಲ್ಲಿ ವಾಹನ ದಟ್ಟಣೆ ತಪ್ಪಿಸಲು ಒಟ್ಟು 25 ಜಂಕ್ಷನ್‍ಗಳನ್ನು ಅಭಿವೃದ್ಧಿಪಡಿಸುವ 27.90 ಕೋಟಿ ರೂ.ಗಳ ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಸುಗಮ ಸಂಚಾರಕ್ಕೆ ಮೂಲಸೌಕರ್ಯಗಳನ್ನು ಒದಗಿಸಲು ‘ಸಮಗ್ರ ಸಂಚಾರ ಯೋಜನೆ’ಗಾಗಿ ಕಾರ್ಯಸಾಧ್ಯತೆ ಯೋಜನೆ ವರದಿ ತಯಾರಿಸಲು ಅಲ್ವಿನಾಕ್ ಸಂಸ್ಥೆಗೆ ವಹಿಸಲಾಗಿದೆ.

ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಪೊಲೀಸ್ ಇಲಾಖೆಯ ಸಹಕಾರ ಪಡೆಯಲಾಗುವುದು ಎಂದು ಅವರು ತಿಳಿಸಿದರು.

ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗಾಗಿ ಕನಿಷ್ಠ ಮೂರು ದಿಕ್ಕುಗಳಲ್ಲಿ ಸುಮಾರು ತಲಾ 100 ಎಕರೆ ಪ್ರದೇಶದಲ್ಲಿ ಎಲ್ಲಾ ಬಗೆಯ ತ್ಯಾಜ್ಯಗಳ ಸಂಸ್ಕರಣಾ ಘಟಕಗಳನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ ನಿಯಮಿತದ ಮೂಲಕ ಸ್ಥಾಪಿಸಲು ಯೋಜಿಸಲಾಗಿದೆ. ಟೆಕ್ ಬೆಂಗಳೂರು ಅಡಿ ಒಂದು ‘ಸೈ ಡೆಕï’ ನಿರ್ಮಿಸಲು ಸ್ಥಳ ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ.

ಸ್ವಚ್ಛ ಬೆಂಗಳೂರು ಅಡಿ ನಗರದ 1344.84 ಕಿ.ಮೀ. ಉದ್ದದ ಆರ್ಟಿರಿಯಲ್ ಮತ್ತು ಸಬï- ಆರ್ಟಿರಿಯಲ್ ರಸ್ತೆಗಳಿಗಾಗಿ ಯಾಂತ್ರಿಕ ಕಸ ಗುಡಿಸುವ ಯಂತ್ರವನ್ನು ಬಳಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವಾರ್ಷಿಕ ಸುಮಾರು 130.00 ಕೋಟಿಗಳ ಯೋಜನಾ ವರದಿಯನ್ನು ಸಿದ್ಧಪಡಿಸಲಾಗಿದೆ ಎಂದು ಡಿಸಿಎಂ ಹೇಳಿದರು.

RELATED ARTICLES

Latest News