Thursday, April 30, 2026
Homeರಾಜ್ಯ30 ಕೋಟಿ ರೂ.ಗಳ ವೆಚ್ಚದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳ ದುರಸ್ತಿ : ಪ್ರಿಯಾಂಕ್‌ ಖರ್ಗೆ

30 ಕೋಟಿ ರೂ.ಗಳ ವೆಚ್ಚದಲ್ಲಿ ಓವರ್‌ ಹೆಡ್‌ ಟ್ಯಾಂಕ್‌ಗಳ ದುರಸ್ತಿ : ಪ್ರಿಯಾಂಕ್‌ ಖರ್ಗೆ

Overhead tanks to be repaired at a cost of Rs 30 crore: Priyank Kharge

ಬೆಂಗಳೂರು, ಮಾ.18- ರಾಜ್ಯದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಲಾಗಿದ್ದು, ಅವುಗಳ ಸುಧಾರಣೆ ಹಾಗೂ ದುರಸ್ತಿಗಾಗಿ 30 ಕೋಟಿ ರೂ.ಗಳ ವೆಚ್ಚ ಮಾಡುತ್ತಿರುವುದಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರದಲ್ಲಿ ನಂಜನಗೂಡು ಶಾಸಕ ದರ್ಶನ್‌ ಧ್ರುವನಾರಾಯಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕುಡಿಯುವ ನೀರಿನ ಸಮಸ್ಯೆಗಳಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಾಗ ತಮ ಸರ್ಕಾರ ಆರಂಭದಲ್ಲೇ ಓವರ ಹೆಡ್‌ ಟ್ಯಾಂಕ್‌ಗಳ ಆಡಿಟ್‌ ನಡೆಸಿದೆ.

ಅದರ ಪ್ರಕಾರ ನಂಜನಗೂಡಿನಲ್ಲಿ 212 ಓವರ್‌ ಹೆಂಡ್‌ ಟ್ಯಾಂಕ್‌ಗಳಿದ್ದು ಅವುಗಳಲ್ಲಿ 58 ಉತ್ತಮ ಸ್ಥಿತಿಯಲ್ಲಿದೆ. 150 ದುರಸ್ತಿಯಾಗಬೇಕಾಗಿದೆ. 4 ಟ್ಯಾಂಕ್‌ಗಳನ್ನು ತೆರವುಗೊಳಿಸಬೇಕಾಗಿದೆ. ಪ್ರತಿ ಟ್ಯಾಂಕ್‌ಗಳನ್ನು ದುರಸ್ತಿಪಡಿಸಲು ಸರಿಸುಮಾರು 90 ಸಾವಿರದಂತೆ ನಂಜನಗೂಡು ಕ್ಷೇತ್ರಕ್ಕೆ 1.40 ಕೋಟಿ ರೂ. ಒದಗಿಸಲಾಗಿದೆ. ರಾಜ್ಯಾದ್ಯಂತ ಓವರ್‌ ಹೆಡ್‌ ಟ್ಯಾಂಕ್‌ಗಳಿಗೆ 30 ಕೋಟಿ ರೂ. ಮಾಡಲಾಗುತ್ತದೆ ಎಂದು ಹೇಳಿದರು.

RELATED ARTICLES

Latest News