Saturday, May 2, 2026
Homeರಾಜ್ಯಬೆಳ್ಳಿಯ ದರ ದಲ್ಲಿ ನಿರಂತರ ಇಳಿಕೆ

ಬೆಳ್ಳಿಯ ದರ ದಲ್ಲಿ ನಿರಂತರ ಇಳಿಕೆ

Silver prices continue to fall

ಬೆಂಗಳೂರು,ಮಾ.20- ಯುಗಾದಿ ಹಬ್ಬದ ದಿನವಾದ ನಿನ್ನೆ ಕುಸಿತ ಕಂಡಿದ್ದ ಚಿನ್ನ ಇಂದು ಅಲ್ಪ ಏರಿಕೆಯಾಗಿದ್ದು, ಬೆಳ್ಳಿಯ ದರ ದಲ್ಲಿ ನಿರಂತರ ಇಳಿಕೆ ಮುಂದುವರೆದಿದೆ. ಪ್ರತಿ ಕೆಜಿ ಬೆಳ್ಳಿಗೆ 5 ಸಾವಿರ ರೂ.ನಷ್ಟು ಇಳಿಕೆಯಾಗಿದ್ದು, 2,55,000 ರಷ್ಟಿದೆ.

ಮಾರುಕಟ್ಟೆ ಮಾಹಿತಿ ಪ್ರಕಾರ, 24 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂಗೆ 45 ರೂ. ಏರಿಕೆಯಾಗಿದ್ದು, 15,093 ರೂ.ನಷ್ಟಿದೆ. ಮಾ.18 ರಂದು 66 ರೂ. ನಿನ್ನೆ 714 ರೂ.ನಷ್ಟು ಇಳಿಕೆಯಾಗಿತ್ತು. 22 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂಗೆ 60 ರೂ. ಏರಿಕೆಯಾಗಿದ್ದು, 18,835 ರೂ.ನಷ್ಟಿದೆ.

ನಿನ್ನೆ 665 ರೂ. ಹಾಗೂ ಮೊನ್ನೆ 60 ರೂ.ನಷ್ಟು ಇಳಿಕೆಯಾಗಿತ್ತು. 22 ಕ್ಯಾರೆಟ್‌ನ ಚಿನ್ನ ಪ್ರತಿ ಗ್ರಾಂ 49 ರೂ.ನಷ್ಟು ಏರಿಕೆಯಾಗಿದ್ದು, 11320 ರೂ.ಗೆ ತಲುಪಿದೆ.ಇರಾನ್‌-ಇಸ್ರಾಲ್‌ ನಡುವಿನ ಯುದ್ಧದಿಂದಾಗಿ ಚಿನ್ನ ಮತ್ತು ಬೆಳ್ಳಿ ದರಗಳು ಏರಿಕೆಯಾಗುತ್ತದೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಇದಕ್ಕೆ ತದ್ವಿರುದ್ಧವಾಗಿ ನಿರಂತರ ಇಳಿಕೆಯಾಗುತ್ತಿದೆ.

ಮಾ.12 ರಿಂದ ನಿರಂತರ ಇಳಿಕೆ ಕಂಡಿದ್ದ ಚಿನ್ನ ಮಾ.17 ರಂದು ತುಸು ಏರಿಕೆಯಾಗಿತ್ತು. ಆನಂತರ ಇಂದು ಅಲ್ಪಪ್ರಮಾಣದ ಏರಿಕೆ ಕಂಡಿದೆ.ಒಟ್ಟಾರೆ ಮಾರ್ಚ್‌ ತಿಂಗಳಿನಲ್ಲಿ ಇದುವರೆಗೆ ಏರಿಕೆಗಿಂತ ಇಳಿಕೆ ಹೆಚ್ಚಾಗಿರುವುದು ಕಂಡುಬರುತ್ತಿದೆ. ಮಾ. 12 ರಿಂದ ನಿರಂತರ ಇಳಿಕೆಯಾಗುತ್ತಿರುವ ಬೆಳ್ಳಿ ಮಾ.17 ರಂದು ಪ್ರತಿ ಕೆಜಿಗೆ 5 ಸಾವಿರದಷ್ಟು ಹೆಚ್ಚಾಗಿತ್ತು. ಕಳೆದ ಮೂರು ದಿನಗಳಲ್ಲಿ ಪ್ರತಿ ಕೆಜಿಗೆ 20 ಸಾವಿರ ರೂ.ನಷ್ಟು ಕುಸಿತವಾಗಿದೆ.

ಚಿನಿವಾರ ಪೇಟೆಯಲ್ಲಿ ಚಿನ್ನ, ಬೆಳ್ಳಿ ದರಗಳು ಏರಿಳಿತವಾದರೂ ದೀರ್ಘಾವಧಿಯಲ್ಲಿ ಏರುಗತಿಯಲ್ಲಿರುತ್ತವೆ ಎಂದು ವಿಶ್ಲೇಷಿಸಲಾಗುತ್ತದೆ. ಆದರೆ ಇಸ್ರೇಲ್‌-ಇರಾನ್‌ ಯುದ್ಧವಾದ ನಂತರ ಈ ದರಗಳಲ್ಲಿ ಪದೇಪದೇ ವ್ಯತ್ಯಾಸವಾಗುತ್ತಿದ್ದರೂ ಏರಿಕೆಗಿಂತ ಇಳಿಕೆಯೇ ಹೆಚ್ಚಾಗುತ್ತಿರುವುದು ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. ಆದರೆ ವರ್ತಕರನ್ನು ಚಿಂತೆಗೀಡು ಮಾಡಿದೆ.

RELATED ARTICLES

Latest News