ನವದೆಹಲಿ,ಡಿ.15- ಭದ್ರತಾ ಲೋಪದ ಕುರಿತು ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಕೂಗಿದ್ದರಿಂದ ಲೋಕಸಭೆಯನ್ನು ಇಂದು ಮತ್ತೆ ಮುಂದೂಡಲಾಯಿತು. ಚಳಿಗಾಲದ ಕಲಾಪದಲ್ಲಿ ಲೋಕಸಭೆಯ ಹದಿಮೂರು ಸಂಸದರು ಮತ್ತು ರಾಜ್ಯಸಭೆಯ ಒಬ್ಬ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಸಿ ನಿರಂತರ ನಡೆದ ಪ್ರತಿಭಟನೆಯ ನಂತರ ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.
ಪ್ರತಿಪಕ್ಷದ ಸಂಸದರು ಅಮಾನತುಗೊಳಿಸಿರುವುದನ್ನು ಖಂಡಿಸಿದರು, ಪ್ರಶ್ನೆ ಕೇಳುವುದು ಪ್ರತಿಯೊಬ್ಬ ಚುನಾಯಿತ ಜನಪ್ರತಿನಿಯ ಹಕ್ಕು ಎಂದು ವಾದಿಸಿದರು. ಲೋಕಸಭೆಯಿಂದ ಅಮಾ ನತುಗೊಂಡಿರುವ 13 ಸಂಸದರ ಪೈಕಿ ಒಂಬತ್ತು ಮಂದಿ ಕಾಂಗ್ರೆಸ್, ಇಬ್ಬರು ಸಿಪಿಎಂ,
ಒಬ್ಬರು ಸಿಪಿಐ ಮತ್ತು ಒಬ್ಬರು ಡಿಎಂಕೆ ಸದಸ್ಯರಿದ್ದಾರೆ.
ರಾಜ್ಯಸಭೆಯಲ್ಲಿ, ಟಿಎಂಸಿ ಸಂಸದ ಡೆರೆಕ್ ಒ ಬ್ರೇನ್ ಅವರನ್ನು ಚಳಿಗಾಲದ ಅವೇಶನದ ಉಳಿದ ಅವಗೆ ಅಮಾನತುಗೊಳಿಸಲಾಗಿದೆ ಸಮಗ್ರ ದುರ್ನಡತೆ ಮತ್ತು ಕುರ್ಚಿಯನ್ನು ಕ್ಕರಿಸಿದ ಕಾರಣಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದೆ.
ಸಂಸತ್ತಿನ ಚಳಿಗಾಲದ ಅವೇಶನ ಡಿಸೆಂಬರ್ 22 ರಂದು ಮುಕ್ತಾಯಗೊಳ್ಳಲಿದ್ದು, ಅಷ್ಟರಲ್ಲಿ ಸರ್ಕಾರ ಹಲವಾರು ಮಹತ್ವದ ಮಸೂದೆಗಳಿಗೆ ಅನುಮೊದನೆ ಪಡೆದುಕೊಳ್ಳಬೇಕಿದೆ.