Friday, November 22, 2024
Homeಅಂತಾರಾಷ್ಟ್ರೀಯ | Internationalಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಪಾಕ್ ಚುನಾವಣೆ ದಿನಾಂಕ ಘೋಷಣೆ

ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಪಾಕ್ ಚುನಾವಣೆ ದಿನಾಂಕ ಘೋಷಣೆ

ಇಸ್ಲಾಮಾಬಾದ್, ಡಿ.16 (ಪಿಟಿಐ) ಬಹು ನಿರೀಕ್ಷಿತ ಚುನಾವಣೆಯನ್ನು ವಿಳಂಬಗೊಳಿಸಬಹುದಾದ ಕೆಳ ನ್ಯಾಯಾಲಯದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕೆಲವೇ ಗಂಟೆಗಳ ನಂತರ ಫೆಬ್ರವರಿ 8 ರಂದು ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಚುನಾವಣಾ ವೇಳಾಪಟ್ಟಿಯನ್ನು ಶುಕ್ರವಾರ ರಾತ್ರಿ ಪಾಕಿಸ್ತಾನದ ಚುನಾವಣಾ ಆಯೋಗವು ಬಿಡುಗಡೆ ಮಾಡಿದೆ, ಚುನಾವಣೆಗಳನ್ನು ಮೇಲ್ವಿಚಾರಣೆ ಮಾಡಲು ಅಧಿಕಾರಶಾಹಿಯಿಂದ ಅಧಿಕಾರಿಗಳ ನೇಮಕಾತಿಯನ್ನು ಅಮಾನತುಗೊಳಿಸುವ ಲಾಹೋರ್ ಹೈಕೋರ್ಟ್ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕೆಲವೇ ಗಂಟೆಗಳಲ್ಲಿ ಚುನಾವಣೆ ಘೋಷಣೆಯಾಗಿದೆ.

ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ -ಎ-ಇನ್ಸಾಫ್ (ಪಿಟಿಐ) ಸಲ್ಲಿಸಿದ ಅರ್ಜಿಯ ಮೇಲೆ ನ್ಯಾಯಾಲಯ ಈ ತೀರ್ಪು ನೀಡಿದೆ. ಎಲ್‍ಎಚ್‍ಸಿಯ ಆದೇಶದ ಕಾರಣ, ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ಮತ್ತು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸಿಕಂದರ್ ಸುಲ್ತಾನ್ ರಾಜಾ ಅವರು ಶುಕ್ರವಾರ ಹಿರಿಯ ಅಕಾರಿಗಳನ್ನು ಭೇಟಿ ಮಾಡಿ ಎಲ್ಲವೂ ಯೋಜನೆಯ ಪ್ರಕಾರ ನಡೆದಿದೆ ಎಂದು ಖಚಿತಪಡಿಸಿಕೊಂಡರು.

ವಿವರವಾದ ಚರ್ಚೆಗಳ ನಂತರ, ಆಯೋಗವು ಎಲ್‍ಎಚ್‍ಸಿಯ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು. ಸುಪ್ರೀಂ ಕೋರ್ಟ್ ಕೆಲವು ಗಂಟೆಗಳ ಹಿಂದೆ ಮನವಿಯನ್ನು ಅಂಗೀಕರಿಸಿತು, ಪ್ರಕ್ರಿಯೆಯನ್ನು ಮತ್ತೆ ಹಳಿಗೆ ತಂದಿತು.

ಅಭ್ಯರ್ಥಿಗಳಿಂದ ನಾಮಪತ್ರಗಳನ್ನು ಡಿಸೆಂಬರ್ 20-22 ರವರೆಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದು. ನಾಮನಿರ್ದೇಶಿತ ಅಭ್ಯರ್ಥಿಗಳ ಹೆಸರನ್ನು ಡಿಸೆಂಬರ್ 23 ರಂದು ಪ್ರಕಟಿಸಲಾಗುವುದು ಮತ್ತು ಅವರ ದಾಖಲೆಗಳ ಪರಿಶೀಲನೆಯು ಡಿಸೆಂಬರ್ 24-30 ರವರೆಗೆ ನಡೆಯಲಿದೆ.

ಟ್ರಕ್‍ಗೆ ಕಾರು ಡಿಕ್ಕಿ, 6 ಮಂದಿ ದುರ್ಮರಣ

ನಾಮಪತ್ರಗಳನ್ನು ತಿರಸ್ಕರಿಸುವ ಅಥವಾ ಸ್ವೀಕರಿಸುವ ಕುರಿತಾದ ಆರ್‍ಒ ನಿರ್ಧಾರಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಜನವರಿ 3 ಕೊನೆಯ ದಿನಾಂಕವಾಗಿರುತ್ತದೆ ಮತ್ತು ಮೇಲ್ಮನವಿ ನ್ಯಾಯಮಂಡಳಿಯಿಂದ ಅಭ್ಯರ್ಥಿಗಳ ಮೇಲ್ಮನವಿಗಳನ್ನು ನಿರ್ಧರಿಸುವ ಅಂತಿಮ ದಿನಾಂಕ ಜನವರಿ 10 ಆಗಿರುತ್ತದೆ.

ಅಭ್ಯರ್ಥಿಗಳ ಪರಿಷ್ಕøತ ಪಟ್ಟಿಯನ್ನು ಜನವರಿ 11 ರಂದು ಪ್ರಕಟಿಸಲಾಗುವುದು ಮತ್ತು ಒಬ್ಬರ ಉಮೇದುವಾರಿಕೆಯನ್ನು ಹಿಂಪಡೆಯಲು ಜನವರಿ 12 ಕೊನೆಯ ದಿನಾಂಕವಾಗಿದೆ. ಜನವರಿ 13 ರಂದು ರಾಜಕೀಯ ಪಕ್ಷಗಳಿಗೆ ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಲಾಗುವುದು ಮತ್ತು ಚುನಾವಣೆ ಫೆಬ್ರವರಿ 8 ರಂದು ನಡೆಯಲಿದೆ.

ಚುನಾವಣಾ ಕಾರ್ಯಕ್ರಮವು ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳಲ್ಲಿ ಮಹಿಳೆಯರು ಮತ್ತು ಮುಸ್ಲಿಮೇತರರಿಗೆ ಮೀಸಲಾದ ಸ್ಥಾನಗಳಿಗೂ ಅನ್ವಯಿಸುತ್ತದೆ ಎಂದು ಸೂಚಿಸಲಾಗಿದೆ. ಮೊದಲು ಮಹಿಳೆಯರು ಮತ್ತು ಮುಸ್ಲಿಮೇತರರಿಗೆ ಮೀಸಲಾದ ಸೀಟುಗಳಿಗೆ ಪ್ರತ್ಯೇಕ ಆದ್ಯತೆಯ ಪಟ್ಟಿಯನ್ನು ಭರ್ತಿ ಮಾಡುವ ಕೊನೆಯ ದಿನಾಂಕ ಡಿಸೆಂಬರ್ 22 ಆಗಿದೆ ಎಂದು ಅಸೂಚನೆಯಲ್ಲಿ ತಿಳಿಸಲಾಗಿದೆ.

RELATED ARTICLES

Latest News