ಬೆಂಗಳೂರು,ಡಿ.16- ಉದ್ಯಮಿಯೊಂದಿಗೆ ಸಲುಗೆ ಬೆಳೆಸಿಕೊಂಡು ಅವರಿಂದ ಹಣ ಪೀಕಲು ಮಹಿಳೆಯನ್ನು ಮುಂದಿಟ್ಟುಕೊಂಡು ಹನಿಟ್ರಾಪ್ಗೆ ಸಂಚು ರೂಪಿಸಿದ್ದ ದಂಪತಿ ಸೇರಿದಂತೆ ಐದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಖಲೀಂ-ಸಭಾ ದಂಪತಿಹಾಗೂ ಒಬೇದ್, ರಕೀಂ ಹಾಗೂ ಅತಿಕ್ ಬಂಧಿತ ಆರೋಪಿಗಳು. ಈ ಬಗ್ಗೆ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ಯಮಿ ಅತಾವುಲ್ಲಾ ಅವರನ್ನು ತಮ್ಮ ಬಲೆಗೆ ಬೀಳಿಸಿಕೊಂಡು ಲಕ್ಷಾಂತರ ಹಣ ಸುಲಿಗೆ ಮಾಡಬಹುದೆಂದು ಆರೋಪಿಗಳು ಸಂಚು ರೂಪಿಸಿ ಸಭಾಳನ್ನು ಇದಕ್ಕೆ ಗಾಳವಾಗಿ ಬಳಸಿಕೊಳ್ಳುತ್ತಾರೆ.
ಅದರಂತೆ ಉದ್ಯಮಿ ಅತಾವುಲ್ಲಾ ಅವರನ್ನು ಖಲೀಂ ಪರಿಚಯಿಸಿಕೊಂಡು ನನಗೆ ಸಭಾ ಎಂಬುವರ ಪರಿಚಯವಿದೆ. ಅವರು ವಿಧವೆ ಎಂದು ಹೇಳಿ ತನ್ನ ಪತ್ನಿಯ ಮೊಬೈಲ್ ನಂಬರ್ ಕೊಡುತ್ತಾನೆ. ನಂತರದ ದಿನಗಳಲ್ಲಿ ಅತಾವುಲ್ಲಾ-ಸಭಾ ಮೊಬೈಲ್ ಸಂಭಾಷಣೆ ನಡೆಸಿ ಸ್ನೇಹ ಬೆಳೆಸಿಕೊಂಡು ಸಲುಗೆಯಿಂದ ಇರುತ್ತಾರೆ.
ಇತ್ತೀಚೆಗೆ ಸಭಾ ಉದ್ಯಮಿಗೆ ಕರೆ ಮಾಡಿ ರೂಂ ಬುಕ್ ಮಾಡಬೇಕು ಆಧಾರ್ ಕಾರ್ಡ್ ತೆಗೆದುಕೊಂಡು ಆರ್ಆರ್ನಗರದ ಲಾಡ್ಜ್ ಬಳಿ ಬರುವಂತೆ ತಿಳಿಸಿದ್ದಾಳೆ. ಉದ್ಯಮಿ ಅತಾವುಲ್ಲಾ ಲಾಡ್ಜ್ ಬಳಿ ಬಂದು ಬುಕ್ ಮಾಡಿದ್ದ ರೂಮ್ಗೆ ಹೋಗುತ್ತಾರೆ. ಆ ವೇಳೆ ಸಭಾ ಅಲ್ಲಿರುತ್ತಾಳೆ. ಇವರಿಬ್ಬರು ರೂಮ್ನಲ್ಲಿ ಮಾತನಾಡುತ್ತಾ ಕುಳಿತಿದ್ದಾಗ ಮೊದಲೇ ಮಾಡಿಕೊಂಡು ಸಂಚಿನಂತೆ ರಕೀಂ ಏಕಾಏಕಿ ರೂಂಗೆ ನುಗ್ಗಿ ನೀನು ನನ್ನ ಪತ್ನಿಯನ್ನು ಲಾಡ್ಜ್ಗೆ ಕರೆದುಕೊಂಡು ಬಂದಿದ್ದೀಯಾ ಎಂದು ಜಗಳವಾಡಿದ್ದಾನೆ.
ತುಮಕೂರು ನೂತನ ಜಿಲ್ಲಾಧಿಕಾರಿಯಾಗಿ ಶುಭ ಕಲ್ಯಾಣ್ ಅಧಿಕಾರ ಸ್ವೀಕಾರ
ಆ ಸಂದರ್ಭದಲ್ಲಿ ಖಲೀಂ ಹಾಗೂ ಉಳಿದ ಆರೋಪಿಗಳು ರೂಮಿನೊಗೆ ಬಂದು ಪೊಲೀಸರಿಗೆ ಈ ವಿಷಯ ತಿಳಿಸುತ್ತೇವೆ, ನಿಮ್ಮ ಮನೆಯವರಿಗೂ ಹೇಳುತ್ತೇವೆಂದು ಹೆದರಿಸಿ 6 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈ ಬಗ್ಗೆ ಸಿಸಿಬಿ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ತಕ್ಷಣ ಲಾಡ್ಜ್ ಮೇಲೆ ದಾಳಿ ಮಾಡಿ ದಂಪತಿ ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಆಟೋ ರಿಕ್ಷಾ, ಬೈಕ್, 4 ಸಾವಿರ ರೂ, ಹಾಗೂ 6 ಮೊಬೈಲ್ಗಳನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಆರ್ಆರ್ ನಗರ ಠಾಣೆ ಪೆಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಆರ್ಆರ್ನಗರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.