ಟೆಹ್ರಾನ್,ಮಾ.22 – ತನ್ನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆದರೆ, ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಇಂಧನ, ಐಟಿ ಮತ್ತು ಮುಖ್ಯವಾಗಿ ಉಪ್ಪುನೀರು ಶುದ್ಧೀಕರಣ ಘಟಕಗಳನ್ನು ಗುರಿಯಾಗಿಸಲಾಗುತ್ತದೆ ಎಂದು ಇರಾನ್ ಸೇನೆ ಸ್ಪಷ್ಟವಾಗಿ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್ ನೀಡಿದ 48 ಗಂಟೆಗಳ ಎಚ್ಚರಿಕೆಯ ನಂತರ, ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಹಾರ್ಮುಜ್ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸುತ್ತೇವೆ ಎಂದು ಅಮೆರಿಕ ಎಚ್ಚರಿಕೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ, ಇರಾನ್ ಇನ್ನೂ ಕಠಿಣ ನಿಲುವು ತಾಳಿದೆ.ಈ ಹೇಳಿಕೆ ಯುದ್ಧವು ಈಗ ನೀರು ಎಂಬ ಮೂಲಭೂತ ಸಂಪನೂಲದತ್ತ ತಿರುಗಬಹುದು ಎಂಬ ಆತಂಕವನ್ನು ಹೆಚ್ಚಿಸಿದೆ.
ಗಲ್‌್ಫ ಪ್ರದೇಶದ ದೇಶಗಳಿಗೆ ಈ ಉಪ್ಪುನೀರು ಶುದ್ಧೀಕರಣ ಘಟಕಗಳು ಜೀವನಾಡಿಯಾಗಿವೆ. ಸಮುದ್ರದ ಉಪ್ಪು ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಈ ಘಟಕಗಳ ಮೇಲೆ ಅವಲಂಬನೆ ಬಹಳ ಹೆಚ್ಚು. ಸೌದಿ ಅರೇಬಿಯಾ ತನ್ನ ಕುಡಿಯುವ ನೀರಿನ ಸುಮಾರು 70% ಅನ್ನು ಇವುಗಳಿಂದ ಪಡೆಯುತ್ತದೆ. ಕುವೈತ್, ಓಮನ್ ಮತ್ತು ಯುಎಇ ಕೂಡ ಇದೇ ರೀತಿ ಈ ವ್ಯವಸ್ಥೆಗಳ ಮೇಲೆ ಅವಲಂಬಿತವಾಗಿವೆ.
ಆದ್ದರಿಂದ, ಈ ಘಟಕಗಳ ಮೇಲೆ ದಾಳಿ ನಡೆದರೆ, ಕೆಲವೇ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ನೀರಿನ ಬಿಕ್ಕಟ್ಟು ಉಂಟಾಗುವ ಸಾಧ್ಯತೆ ಇದೆ.ತೈಲ ಪೂರೈಕೆ ನಿಲ್ಲಿಸುವುದಕ್ಕಿಂತ ನೀರಿನ ಸರಬರಾಜು ಅಸ್ತವ್ಯಸ್ತವಾಗುವುದು ಹೆಚ್ಚು ಅಪಾಯಕಾರಿ. ಏಕೆಂದರೆ ನೀರಿಲ್ಲದೆ ಜೀವನವೇ ಸ್ಥಗಿತಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ, ಅಂ ಈಗಾಗಲೇ ಇಂತಹ ದಾಳಿಗಳು ಪ್ರದೇಶದಲ್ಲಿ ಭೀತಿ ಮತ್ತು ಅಸ್ಥಿರತೆಯನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದೆ.
ಇತ್ತೀಚೆಗೆ ಕೆಲವು ಆರೋಪಗಳು ಮತ್ತು ಪ್ರತ್ಯಾರೋಪಗಳು ಈ ಆತಂಕವನ್ನು ಮತ್ತಷ್ಟು ಹೆಚ್ಚಿಸಿವೆ. ಇರಾನ್ ತನ್ನ ಘಟಕಗಳನ್ನು ಗುರಿಯಾಗಿಸಲಾಗಿದೆ ಎಂದು ಹೇಳಿಕೊಂಡರೆ, ಇತರ ಗಲ್‌್ಫ ರಾಷ್ಟ್ರಗಳೂ ಇದೇ ರೀತಿಯ ದಾಳಿಗಳ ಬಗ್ಗೆ ದೂರು ನೀಡಿವೆ. ಆದಾಗ್ಯೂ, ಈ ಆರೋಪಗಳನ್ನು ಅಮೆರಿಕ ತಳ್ಳಿಹಾಕಿದೆ.ಈ ಯುದ್ಧ ಱಱಮೂಲಸೌಕರ್ಯ ಯುದ್ಧೞೞವಾಗಿ ಮಾರ್ಪಟ್ಟರೆ, ಅದರ ಪರಿಣಾಮಗಳು ಭೀಕರವಾಗಬಹುದು ಎಂದು ವಿಶ್ಲೇಷಕರು ಎಚ್ಚರಿಸುತ್ತಿದ್ದಾರೆ.
ನೀರಿನ ಕೊರತೆ ಮಾತ್ರವಲ್ಲ, ಪರಿಸರದ ಮೇಲೂ ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ. ಸಮುದ್ರಕ್ಕೆ ಬಿಡುಗಡೆಯಾಗುವ ರಾಸಾಯನಿಕಗಳು ಜೀವಜಗತ್ತಿಗೆ ಹಾನಿ ಮಾಡಬಹುದು. ಆದರೆ, ಇಂದಿನವರೆಗೆ ಇಂತಹ ದೊಡ್ಡ ಮಟ್ಟದ ದಾಳಿಗಳು ನಡೆದಿಲ್ಲ. ಕೆಲವು ತಜ್ಞರು ಇದನ್ನು ಱಱಕಾರ್ಯತಂತ್ರದ ಸಂಯಮೞೞ ಎಂದು ಕರೆಯುತ್ತಿದ್ದಾರೆ. ಏಕೆಂದರೆ ನೀರಿನ ಮೇಲಿನ ದಾಳಿ ಮಾನವೀಯತೆಯ ವಿರುದ್ಧದ ಕ್ರಮವೆಂದು ಪರಿಗಣಿಸಲಾಗುತ್ತದೆ ಮತ್ತು ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.
