Monday, April 13, 2026
Homeರಾಷ್ಟ್ರೀಯಸದ್ದಿಲ್ಲದೇ ಅಮೆರಿಕಾದಿಂದ ಮಂಗಳೂರಿಗೆ ಬಂತು ಭಾರಿ ಪ್ರಮಾಣದ ಎಲ್‌ಪಿಜಿ ಹೊತ್ತ ಕಾರ್ಗೋ ಶಿಪ್‌

ಸದ್ದಿಲ್ಲದೇ ಅಮೆರಿಕಾದಿಂದ ಮಂಗಳೂರಿಗೆ ಬಂತು ಭಾರಿ ಪ್ರಮಾಣದ ಎಲ್‌ಪಿಜಿ ಹೊತ್ತ ಕಾರ್ಗೋ ಶಿಪ್‌

Cargo ship Pyxis Pioneer carrying LPG from US arrives at Mangalore Port

ಮಂಗಳೂರು, ಮಾ.22 – ಅಂತರರಾಷ್ಟ್ರೀಯ ಮಟ್ಟದಲ್ಲಿ, ಅದರಲ್ಲೂ ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್‌-ಅಮೆರಿಕಾ ಹಾಗೂ ಇರಾನ್‌ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ನಡುವೆಯೇ ಕರ್ನಾಟಕಕ್ಕೆ ಅಮೆರಿಕಾದಿಂದ ಬೃಹತ್ ಪ್ರಮಾಣದ ಎಲ್‌ಪಿಜಿ ಹೊತ್ತ ಕಾರ್ಗೋ ಹಡಗು ಮಂಗಳೂರಿನ ನವಮಂಗಳೂರು ಬಂದರಿಗೆ ಯಶಸ್ವಿಯಾಗಿ ತಲುಪಿದೆ.

ಪಿಕ್ಸಿಸ್ ಪಾಯಿನೀರ್ ಹೆಸರಿನ ಕಾರ್ಗೋ ಶಿಪ್ ಮಂಗಳೂರು ಬಂದರಿಗೆ ಬಂದಿಳಿದಿದೆ. ಅಮೆರಿಕದ ಟೆಕ್ಸಾಸ್‌ನಿಂದ ಅನಿಲ ತುಂಬಿದ ಹಡಗು ಬಂದಿದ್ದು, ವಿದೇಶದಿಂದ ಕರ್ನಾಟಕಕ್ಕೆ ಆಗಮಿಸಿದ ಮೊದಲ ಎಲ್‌ಪಿಜಿ ಹಡಗು ಇದಾಗಿದೆ.

ಕಾರ್ಗೋ ಹಡಗು ಅಮೆರಿಕಾದಿಂದ ಏಜಿಸ್ ಕಂಪನಿಗೆ ಎಲ್‌ಪಿಜಿ ಅನಿಲವನ್ನು ಹೊತ್ತು ತಂದಿದೆ. ಸುಮಾರು 16,714 ಮೆಟ್ರಿಕ್ ಟನ್ ಅನಿಲ ಹೊತ್ತು ತಂದ ಪಿಕ್ಸಿಸ್ ಪಾಯಿನೀರ್ ದೇಶದಲ್ಲಿ ಉಂಟಾಗಿರುವ ಅನಿಲ ಕೊರತೆಗೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಮಾರ್ಚ್ 14ರಂದು ಅಮೆರಿಕದಿಂದ ಹೊರಟಿದ್ದ ಪಿಕ್ಸಿಸ್ ಪಾಯಿನೀರ್ ಇದೀಗ ಸುರಕ್ಷಿತವಾಗಿ ಮಂಗಳೂರಿಗೆ ತಲುಪಿದೆ.

ಅಮೆರಿಕದ ಟೆಕ್ಸಾಸ್ ರಾಜ್ಯದಿಂದ ಹೊರಟಿದ್ದ ಪಿಕ್ಸಿಸ್ ಪಾಯಿನೀರ್ ಹೆಸರಿನ ಬೃಹತ್ ಕಾರ್ಗೋ ಹಡಗು ಸುಮಾರು 16,714 ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಹೊತ್ತು ತಂದಿದೆ. ಮಾರ್ಚ್ 14ರಂದು ಅಮೆರಿಕದಿಂದ ಪ್ರಯಾಣ ಬೆಳೆಸಿದ್ದ ಈ ನೌಕೆಯು ಇಂದು ಮಂಗಳೂರು ಬಂದರನ್ನು ಪ್ರವೇಶಿಸಿದೆ. ಈ ಹಡಗು ಪ್ರಮುಖವಾಗಿ ಏಜಿಸ್ ಕಂಪನಿಗೆ ಸೇರಿದ ಎಲ್‌ಪಿಜಿ ದಾಸ್ತಾನನ್ನು ಹೊತ್ತು ತಂದಿದೆ ಎಂದು ಬಂದರು ಮೂಲಗಳು ಖಚಿತಪಡಿಸಿವೆ.

ಇತ್ತೀಚೆಗೆ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ ನಂತರ, ಪಶ್ಚಿಮ ಏಷ್ಯಾದ ಸಮುದ್ರ ಮಾರ್ಗಗಳಲ್ಲಿ ಸರಕು ಸಾಗಣೆ ಅಸ್ತವ್ಯಸ್ತಗೊಂಡಿತ್ತು. ಹೊರ್ಮುಜ್ ಜಲಸಂಧಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಹಡಗುಗಳ ಸಂಚಾರಕ್ಕೆ ಅಡೆತಡೆ ಉಂಟಾಗಿದ್ದರಿಂದ ಭಾರತಕ್ಕೂ ಇಂಧನ ಪೂರೈಕೆಯ ಆತಂಕವಿತ್ತು. ಈ ಯುದ್ಧದ ಬಿಕ್ಕಟ್ಟು ಆರಂಭವಾದ ಬಳಿಕ ಕರ್ನಾಟಕಕ್ಕೆ ಅತಿ ಹೆಚ್ಚು ಪ್ರಮಾಣದ ಎಲ್‌ಪಿಜಿ ಹೊತ್ತು ತಂದ ಮೊದಲ ಹಡಗು ಇದಾಗಿದೆ.

ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ಅಭಾವ ತಲೆದೋರಿತ್ತು. ಸಕಾಲಕ್ಕೆ ಸಿಲಿಂಡರ್ ವಿತರಣೆಯಾಗದೆ ಗ್ರಾಹಕರು ಪರದಾಡುತ್ತಿದ್ದರು. ಈಗ ಅಮೆರಿಕದಿಂದ ಬಂದಿರುವ ಈ 16,714 ಮೆಟ್ರಿಕ್ ಟನ್ ಗ್ಯಾಸ್‌ನಿಂದಾಗಿ ರಾಜ್ಯದ ಬೇಡಿಕೆಯನ್ನು ಪೂರೈಸಲು ಸುಲಭವಾಗಲಿದೆ. ಬಂದರಿನಲ್ಲಿ ಹಡಗಿನಿಂದ ಎಲ್‌ಪಿಜಿ ಇಳಿಸುವ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲೇ ಇದು ಮಾರುಕಟ್ಟೆಗೆ ವಿತರಣೆಯಾಗಲಿದೆ. ಇದರಿಂದ ಹೋಟೆಲ್ ಉದ್ಯಮ ಹಾಗೂ ಗೃಹ ಬಳಕೆಯ ಸಿಲಿಂಡರ್‌ಗಳ ಕೊರತೆ ನೀಗುವ ನಿರೀಕ್ಷೆ ಇದೆ.

ದೇಶದಾದ್ಯಂತ ಅನಿಲ ಅಭಾವ ಹೆಚ್ಚುತ್ತಿದೆ. ಅರ್ಧಕ್ಕರ್ಧ ಅನಿಲ ಪೂರೈಕೆ ನಿಂತಿರುವ ಪರಿಣಾಮ ಹಲವು ಉದ್ಯಮಗಳು ತತ್ತರಿಸಿವೆ. ಕೋಟಿ ಕೋಟಿ ರೂ. ನಷ್ಟ ಅನುಭವಿಸುತ್ತಿವೆ. ಅನಿಲ ಕೊರತೆ ನೀಗಿಸಲು ಕೇಂದ್ರ ಸರ್ಕಾರ ದೇಶೀಯ ಅನಿಲ ಉತ್ಪಾದನೆ ಹೆಚ್ಚಿಸಿದ್ದರೂ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಕಷ್ಟವಾಗುತ್ತಿದೆ. ಇದೀಗ ಅನಿಲ ಅಭಾವಕ್ಕೆ ಬ್ರೇಕ್ ಬೀಳುವ ಲಕ್ಷಣ ಕಾಣುತ್ತಿದೆ. ಯುದ್ಧ ಸಂಘರ್ಷದ ನಡುವೆಯೇ ಅಮೆರಿಕಾದಿಂದ ಕರ್ನಾಟಕದ ಮಂಗಳೂರು ಬಂದರಿಗೆ ಕಾರ್ಗೋ ಎಲ್‌ಪಿಜಿ ಹಡಗು ಆಗಮಿಸಿದೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಪರಿಸ್ಥಿತಿಯು ಭಾರತದಲ್ಲಿ ಇಂಧನ ಪೂರೈಕೆಯ ಕೊರತೆಗೆ ಕಾರಣವಾಗಿದೆ. ಮನೆಗಳಿಗೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ತಲುಪಿಸಲು ಆದ್ಯತೆ ನೀಡಲಾಗುತ್ತಿರುವುದರಿಂದ, ವಾಣಿಜ್ಯ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ಮಂದಗತಿ ಕಂಡುಬಂದಿದೆ.

ನವ ಮಂಗಳೂರು ಬಂದರು ಪ್ರಾಧಿಕಾರದ ಮಾಹಿತಿ ಪ್ರಕಾರ, 47,236 ಟನ್ ಸಾಮರ್ಥ್ಯದ ಈ ಹಡಗು ಬೆಳಗ್ಗೆ ಸುಮಾರು 6 ಗಂಟೆಗೆ ಬರ್ತ್ ಸಂಖ್ಯೆ 13ಕ್ಕೆ ತಲುಪಿತು. ಫೆ. 14ರಂದು ಟೆಕ್ಸಾಸ್‌ನಿಂದ ಹೊರಟಿದ್ದ ಈ ಹಡಗು ಈಗ ಏಜಿಸ್ ಲಾಜಿಸ್ಟಿಕ್ಸ್ ಲಿಮಿಟೆಡ್‌ಗಾಗಿ ಸುಮಾರು 16,714 ಟನ್ ಇಳಿಸಲು ಯೋಜಿಸಲಾಗಿದೆ. ಹಡಗು ಸೋಮವಾರ ಬೆಳಿಗ್ಗೆ ಹೊರಡಲಿದೆ ಎಂದು ನಿರೀಕ್ಷಿಸಲಾಗಿದೆ.

ಪಶ್ಚಿಮ ಏಷ್ಯಾದಲ್ಲಿ ಸುಮಾರು ಮೂರು ವಾರಗಳಿಂದ ನಡೆಯುತ್ತಿರುವ ಸಂಘರ್ಷದಿಂದ ಭಾರತದ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಹೋಟೆಲ್‌ಗಳಂತಹ ವಾಣಿಜ್ಯ ಉದ್ಯಮಗಳಿಗೆ ಪೂರೈಕೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿ, ಗೃಹ ಬಳಕೆಗಾಗಿ ಆದ್ಯತೆ ನೀಡಲಾಗಿದೆ.

ಇದರ ಮಧ್ಯೆ ಮಾರ್ಚ್ 18ರಂದು ಜಾಗ್ ಲಾಡ್ಕಿ ಎಂಬ ಕಚ್ಚಾ ತೈಲ ಟ್ಯಾಂಕರ್ ಸುಮಾರು 80,800 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಮುಂದ್ರಾ ಬಂದರಿಗೆ ತಂದು ತಲುಪಿಸಿತ್ತು. ಜೊತೆಗೆ ನಂದಾ ದೇವಿ ಮತ್ತು ಶಿವಾಲಿಕ್ ಎಂಬ ಸಾಗಣೆ ಹಡಗುಗಳು ಕ್ರಮವಾಗಿ ವಾಡಿನಾರ್ ಮತ್ತು ಮುಂದ್ರಾ ಬಂದರುಗಳಿಗೆ ತಲುಪಿವೆ.

RELATED ARTICLES

Latest News