Sunday, April 12, 2026
Homeಅಂತಾರಾಷ್ಟ್ರೀಯ"ಅಮೇರಿಕ ನಮ್ಮ ಪರಮಾಣು ಬಾಂಬ್‌ಗಳನ್ನು ಟಾರ್ಗೆಟ್ ಮಾಡಿದರೆ ನಾವು ಭಾರತದ ಮೇಲೆ ದಾಳಿ ಮಾಡ್ತೀವಿ"

“ಅಮೇರಿಕ ನಮ್ಮ ಪರಮಾಣು ಬಾಂಬ್‌ಗಳನ್ನು ಟಾರ್ಗೆಟ್ ಮಾಡಿದರೆ ನಾವು ಭಾರತದ ಮೇಲೆ ದಾಳಿ ಮಾಡ್ತೀವಿ”

If US targets our nukes, we'll bomb Delhi, Mumbai: Ex-Pak envoy's bizarre remark

ನವದೆಹಲಿ,ಮಾ.22- ಅಮೆರಿಕಾ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಎರಡನೇ ಯೋಚನೆ ಮಾಡದೆ ಭಾರತ, ಮುಂಬೈ, ನವದೆಹಲಿಯ ಮೇಲೆ ದಾಳಿ ಮಾಡಬೇಕಾಗುತ್ತದೆ. ನಾವು ಅದನ್ನು ಬಿಡುವುದಿಲ್ಲ, ನಂತರ ಏನಾಗುತ್ತದೆ ಎಂದು ನೋಡೋಣ ಎಂದು ಭಾರತದಲ್ಲಿನ ಪಾಕಿಸ್ತಾನದ ಮಾಜಿ ಹೈಕಮಿಷನರ್‌ ಅಬ್ದುಲ್‌ ಬಾಸಿತ್‌ ಅವರು ಹೇಳಿದ್ದಾರೆ.

ಯಾರಾದರೂ ನಮನ್ನು ಕೆಟ್ಟ ದಷ್ಟಿಯಿಂದ ನೋಡಿದರೆ ಪಾಕಿಸ್ತಾನಕ್ಕೆ ಭಾರತದ ಮೇಲೆ ಎಲ್ಲಿ ಬೇಕಾದರೂ ದಾಳಿ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ. ನಾವು ಹಾಗೆ ಆಗಬಾರದು ಎಂದು ಬಯಸುತ್ತೇವೆ, ಭಾರತವೂ ಹಾಗೆ ಬಯಸುವುದಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

ಪಾಕಿಸ್ತಾನವು ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದ್ದರೂ, ವಿದೇಶಿ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನವು ಭಾರತವನ್ನು ಗುರಿಯಾಗಿಸಬಹುದು ಎಂಬ ಅನುಮಾನ ಇದೆ. ಈ ಪರಿಸ್ಥಿತಿಯನ್ನು ಅಸಂಭವ ಎಂದು ಪದೇ ಪದೇ ಹೇಳಿಕೊಂಡಿದ್ದಾರೆ.

ಬಾಸಿತ್‌ ಅವರು, 2014 ರಿಂದ 2017 ರವರೆಗೆ ನವದೆಹಲಿಯಲ್ಲಿ ಪಾಕಿಸ್ತಾನದ ಉನ್ನತ ರಾಜತಾಂತ್ರಿಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಭಾರತದೊಂದಿಗೆ ನೇರ ಸಂಪರ್ಕ ಸಾಧಿಸಿದ್ದರಿಂದ, ಅವರ ಹಿಂದಿನ ಪಾತ್ರವು ಪ್ರತಿಕ್ರಿಯೆಗೆ ಹೆಚ್ಚಿನ ಮಹತ್ವ ಇದೆ ಎಂದು ವ್ಯಾಖ್ಯಾನಿಸಲಾಗಿದೆ.

ಅಫ್ಘಾನಿಸ್ತಾನದೊಂದಿಗಿನ ಹೆಚ್ಚುತ್ತಿರುವ ಘರ್ಷಣೆ ಸೇರಿದಂತೆ ಪಾಕಿಸ್ತಾನದೊಂದಿಗಿನ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಗಳು ಬಂದಿವೆ.ಕಾಬೂಲ್‌‍, ಕಂದಹಾರ್‌ ಮತ್ತು ಪಕ್ತಿಕಾದಂತಹ ಪ್ರದೇಶಗಳಲ್ಲಿ ಪಾಕಿಸ್ತಾನಿ ಪಡೆಗಳು ವೈಮಾನಿಕ ದಾಳಿ ನಡೆಸುತ್ತಿವೆ ಎಂದು ಅಫ್ಘಾನ್‌ ಅಧಿಕಾರಿಗಳು ಆರೋಪಿಸಿದ್ದಾರೆ. ಪುನರ್ವಸತಿ ಸೌಲಭ್ಯ ಸೇರಿದಂತೆ ನಾಗರಿಕ ಸ್ಥಳಗಳು ಹಾನಿಗೊಳಗಾಗಿವೆ ಎಂದು ತಾಲಿಬಾನ್‌ ವಕ್ತಾರ ಜಬಿಹುಲ್ಲಾ ಮುಜಾಹಿದ್‌ ಆರೋಪಿಸಿದ್ದಾರೆ.

RELATED ARTICLES

Latest News