ಸೂರತ್,ಡಿ.17- ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಲಿರುವ ಸೂರತ್ ಡೈಮಂಡ್ ಬೋರ್ಸ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಿದರು. ಇದಕ್ಕೂ ಮೊದಲು, ಗುಜರಾತ್‍ನ ಸೂರತ್ ವಿಮಾನ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡಕ್ಕೆ ಚಾಲನೆ ನೀಡಿದರು.
ಸೂರತ್ ಡೈಮಂಡ್ ಬೋರ್ಸ್ ಅಂತಾರಾಷ್ಟ್ರೀಯ ವಜ್ರ ಮತ್ತು ಆಭರಣ ವ್ಯಾಪಾರಕ್ಕಾಗಿ ವಿಶ್ವದ ಅತಿದೊಡ್ಡ ಮತ್ತು ಆಧುನಿಕ ಕೇಂದ್ರವಾಗಲಿದೆ. ಸೂರತ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವು 1,200 ದೇಶೀಯ ಪ್ರಯಾಣಿಕರು ಮತ್ತು 600 ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಪೀಕ್ ಅವರ್‍ಗಳಲ್ಲಿ ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ. ಈ ಅವಧಿಯಲ್ಲಿ ಅದರ ಸಾಮಥ್ರ್ಯವನ್ನು 3,000 ಪ್ರಯಾಣಿಕರಿಗೆ ಹೆಚ್ಚಿಸುವ ನಿಬಂಧನೆ ಇದೆ. ಇದರೊಂದಿಗೆ ಈ ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ನಿರ್ವಹಣಾ ಸಾಮಥ್ರ್ಯ ಈಗ 55 ಲಕ್ಷ ಪ್ರಯಾಣಿಕರಿಗೆ ಏರಿಕೆಯಾಗಿದೆ.
ಸಂಸತ್‍ನ ಭದ್ರತಾ ಲೋಪ : ಕೊನೆಗೂ ಮೌನ ಮುರಿದ ಮೋದಿ
ಸೂರತ್ ವಿಮಾನ ನಿಲ್ದಾಣದಲ್ಲಿ ನೂತನ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಬಳಿಕ ಸೂರತ್ ಡೈಮಂಡ್ ಬೋರ್ಸ್ ಅನ್ನು ಮೋದಿ ಉದ್ಘಾಟಿಸಲಿದ್ದಾರೆ, ಇದು ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡ ಎಂದು ಹೇಳಲಾಗುತ್ತದೆ. ಪ್ರಧಾನಿ ಮೋದಿ ಸೂರತ್ ವಿಮಾನ ನಿಲ್ದಾಣದಿಂದ ಡೈಮಂಡ್ ಬೋರ್ಸ್‍ಗೆ ರಸ್ತೆ ಮೂಲಕ ತೆರಳಿದ್ದು, ದಾರಿಯಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ನೀಡಲಾಯಿತು. ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಸೂರತ್ ವಿಮಾನ ನಿಲ್ದಾಣದಿಂದ ಡೈಮಂಡ್ ಬೋರ್ಸ್ ವರೆಗಿನ 6 ಸ್ಥಳಗಳಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲಾಯಿತು. ಈ ವೇಳೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಸೂರತ್‍ನಲ್ಲಿ ಏರ್‍ಪೋರ್ಟ್‍ನ ಹೊಸ ಟರ್ಮಿನಲ್ ಕಟ್ಟಡದ ಉದ್ಘಾಟನೆಗೆ ಮುನ್ನ, ಸೂರತ್ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಾಗುವುದು.
ಇದು ಸೂರತ್‍ಗೆ ಪ್ರಮುಖ ಮೂಲಸೌಕರ್ಯದ ಸೌಲಭ್ಯವನ್ನು ಒದಗಿಸುತ್ತದೆ. ‘ಜೀವನ ಸುಲಭ’ವನ್ನು ಉತ್ತೇಜಿಸುತ್ತದೆ ಮತ್ತು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹೆಚ್ಚಿನ ವಾಣಿಜ್ಯೋದ್ಯಮವನ್ನು ಖಾತ್ರಿಪಡಿಸುತ್ತದೆ ಎಂದು ಪ್ರಧಾನಿ ಮೋದಿ ಟ್ವೀಟ್‍ನಲ್ಲಿ ತಿಳಿಸಿದ್ದರು.
ಸಂಸತ್ತಿಗೆ ನುಗ್ಗಿದವರ ಮೊಬೈಲ್ ಬಿಡಿ ಭಾಗಗಳು ರಾಜಸ್ಥಾನದಲ್ಲಿ ಪತ್ತೆ
ಸೂರತ್ ಡೈಮಂಡ್ ಬೋರ್ಸ್ ಡೈಮಂಡ್ ರಿಸರ್ಚ್ ಅಂಡ್ ಟ್ರೇಡ್ (ಡ್ರೀಮ್ ಸಿಟಿ) ನ ಭಾಗವಾಗಿದೆ. ಎಸ್‍ಡಿಬಿ ಕಟ್ಟಡವು 67 ಲಕ್ಷ ಚದರ ಅಡಿಗಳಿಗಿಂತ ಹೆಚ್ಚು ವಿಸ್ತೀರ್ಣವನ್ನು ಹೊಂದಿರುವ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವಾಗಿದೆ. ಇದು ಸೂರತ್ ನಗರದ ಸಮೀಪದ ಖಜೋದ್ ಗ್ರಾಮದಲ್ಲಿ ನೆಲೆಗೊಂಡಿದ್ದು, ಉದ್ಘಾಟನೆಗೂ ಮುನ್ನವೇ ಮುಂಬೈ ಮೂಲದ ಹಲವು ವಜ್ರದ ವ್ಯಾಪಾರಿಗಳು ತಮ್ಮ ಕಚೇರಿಗಳನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಇವುಗಳನ್ನು ಹರಾಜು ನಂತರ ಆಡಳಿತ ಮಂಡಳಿ ಹಂಚಿಕೆ ಮಾಡಿದೆ.