Friday, November 22, 2024
Homeರಾಜ್ಯಬಿಜೆಪಿ ಅನಗತ್ಯ ಹೋರಾಟ, ಪರಮೇಶ್ವರ್ ಟೀಕೆ

ಬಿಜೆಪಿ ಅನಗತ್ಯ ಹೋರಾಟ, ಪರಮೇಶ್ವರ್ ಟೀಕೆ

ಬೆಂಗಳೂರು,ಡಿ.17- ಬೆಳಗಾವಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ್ದನ್ನು ಮುಂದಿಟ್ಟು ಕೊಂಡು ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದು ಅನಗತ್ಯವಾದ ರಾಜಕಾರಣ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಆಕ್ಷೇಪಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ನಡೆದ ಘಟನೆಯನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯಕ್ಕಾಗಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಏನು ಹೇಳಬೇಕೊ ಗೊತ್ತಿಲ್ಲ. ವಿರೋಧಪಕ್ಷ ಬಿಜೆಪಿ ವಿಷಯವನ್ನು ಆಯ್ದುಕೊಳ್ಳುವುದರಲ್ಲೇ ಲೋಪವಿದೆ. ಘಟನೆ ನಡೆದಿರುವುದರಲ್ಲಿ ಸರ್ಕಾರದ ಪಾತ್ರ ಏನಿದೆ ಎಂದು ಪ್ರಶ್ನಿಸಿದರು.

ಘಟನೆ ನಡೆಯಬಾರದಿತ್ತು. ದುರದೃಷ್ಟಕರ ವಾಗಿ ನಡೆದಿದೆ. ಊರಿನಲ್ಲಿ ಒಂದು ವರ್ಗದ ಜನ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಘಟನೆ ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಲೋಪ ಏನಿದೆ. ರಾತ್ರಿ 1.30 ಗಂಟೆ ಸುಮಾರಿಗೆ ದುಷ್ಕøತ್ಯವಾಗಿದೆ. ಪೊಲೀಸರಿಗೆ ಮಾಹಿತಿ ದೊರೆಯುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದಾರೆ. ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 7 ಮಂದಿ ಆರೋಪಿಗಳನ್ನು ತಕ್ಷಣ ಬಂಧಿಸಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ. ಅದರಲ್ಲಿ ಹೆಚ್ಚು ಮಂದಿ ಮಹಿಳೆಯರೇ ಇದ್ದಾರೆ. ತಕ್ಷಣ ಪೊಲೀಸರು ಬಾರದೆ ಇದ್ದರೆ ನನಗೆ ಬೇರೆ ರೀತಿಯ ತೊಂದರೆಯಾಗುತ್ತಿದ್ದವು ಎಂದು ಸಂತ್ರಸ್ತರು ಮಾಹಿತಿ ನೀಡಿದ್ದಾರೆ.

ಕೋವಿಡ್ ಹೆಚ್ಚಳ ; ಮುಂಜಾಗ್ರತಾ ಕ್ರಮ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಳಿಗ್ಗೆ ಮಾಹಿತಿ ನನಗೆ ತಿಳಿಯುತ್ತಿದ್ದಂತೆ ನಾನು ಸಂತ್ರಸ್ತೆಯನ್ನು ಭೇಟಿ ಮಾಡಿ ಸರ್ಕಾರ ನಿಮ್ಮ ಜೊತೆ ಇದೆ ಎಂದು ಆತ್ಮಸ್ಥೈರ್ಯ ತುಂಬಿದ್ದೇನೆ. ಘಟನೆಯ ಸ್ಥಳಕ್ಕೂ ಹೋಗಿ ಮನೆ ಒಡೆದಿರುವುದು, ಸಾಮಾನು ಚೆಲ್ಲಾಡಿರುವುದು, ಕಂಬಕ್ಕೆ ಕಟ್ಟಿದ ಸ್ಥಳ ಈ ಎಲ್ಲವನ್ನೂ ವೀಕ್ಷಿಸಿ ಬಂದಿದ್ದೇನೆ. ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದು, ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸುವುದಾಗಿ ತಿಳಿಸಿದ್ದೇವೆ. ಬುಡಕಟ್ಟು ಸಮುದಾಯ ಅಭಿವೃದ್ಧಿ ಆಯೋಗದಿಂದ 2 ಎಕರೆ ಭೂಮಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಪ್ರೀತಿಸಿ ಓಡಿಹೋಗಿದ್ದ ಜೋಡಿಯನ್ನು ಪತ್ತೆ ಹಚ್ಚಲು ತ್ವರಿತ ಕ್ರಮ ಕೈಗೊಂಡಿತ್ತು. ಅಷ್ಟರಲ್ಲಿ ಆ ಜೋಡಿಯೇ ಪೊಲೀಸ್ ಆಯುಕ್ತರ ಬಳಿ ಬಂದಿದೆ. ಅವರಿಗೂ ತೊಂದರೆಯಾಗದಂತೆ ರಕ್ಷಣೆ ನೀಡಿದ್ದೇವೆ ಎಂದು ತಿಳಿಸಿದರು. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ವಿರೋಧಪಕ್ಷವಾಗಿ ಅವರು ಅವರ ಕರ್ತವ್ಯ ಮಾಡುವುದಕ್ಕೆ ನಮ್ಮ ಆಕ್ಷೇಪಣೆಯಿಲ್ಲ. ಆದರೆ ಇದರಲ್ಲಿ ಸರ್ಕಾರದ ವೈಫಲ್ಯ ಎಲ್ಲಿದೆ. ಬಿಜೆಪಿಯವರು ದೆಹಲಿಯಿಂದ ನಿಯೋಗ ಬಂದ ಮೇಲಾದರೂ ಏನಾದರೂ ನೆರವು ನೀಡಿದ್ದಾರೆಯೇ. ಕೇಂದ್ರದ ಬುಡಕಟ್ಟು ಆಯೋಗದಿಂದ ಯಾವುದಾದರೂ ಸಹಾಯ ಮಾಡಿದ್ದಾರೆಯೇ, ರಾಜಕೀಯಕ್ಕಾಗಿ ಬಂದರು. ಇದರಲ್ಲಿ ಸರ್ಕಾರದ ವೈಫಲ್ಯ, ಗೃಹಸಚಿವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರೆ ಏನಾದರೂ ಪ್ರಯೋಜನವಿದೆಯೇ. ಸಂತ್ರಸ್ತರಿಗೆ ಏನು ಉಪಯೋಗವಾಯಿತು ಎಂದು ಪ್ರಶ್ನಿಸಿದರು.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಬಹಿರಂಗಪಡಿಸಿ ಎಂದು ಬಹಳಷ್ಟು ಜನ ಕೇಳುತ್ತಿದ್ದಾರೆ. ಅದನ್ನು ಅನುಷ್ಠಾನಗೊಳಿಸಿ ಎಂದು ಯಾರೂ ಕೇಳುತ್ತಿಲ್ಲ. ವರದಿಯನ್ನು ಆಧರಿಸಿ ತಕ್ಷಣ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ 168 ಕೋಟಿ ರೂ. ಖರ್ಚು ಮಾಡಿರುವ ವರದಿಯನ್ನೇ ಬಹಿರಂಗ ಪಡಿಸಬಾರದು ಎಂದು ಹೇಳಿದರೆ ಅದು ಸರಿಯಲ್ಲ. ವರದಿಯಿಂದ ಯಾರು ಎಷ್ಟು ಜನಸಂಖ್ಯೆಯಲ್ಲಿದ್ದಾರೆ ಎಂದು ತಿಳಿಯಲಿದೆ. ಅದರ ಆಧಾರದ ಮೇಲೆ ಸ್ಥಾನಮಾನಗಳ ಹಂಚಿಕೆಯೂ ಆಗಲಿದೆ. ವರದಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಸಂಸತ್‍ನ ಭದ್ರತಾ ಲೋಪ : ಕೊನೆಗೂ ಮೌನ ಮುರಿದ ಮೋದಿ

ವರದಿ ಜಾರಿಯಿಂದಾಗುವ ಅಡ್ಡಪರಿಣಾಮಗಳ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಸ್ವಾಗತಿಸಬಹುದು. ಆದರೆ ಸರ್ಕಾರ ನಡೆಸುವ ವರದಿಯನ್ನೇ ಬಹಿರಂಗಪಡಿಸಬಾರದು ಎಂಬುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಶಾಲಾ ಮಕ್ಕಳನ್ನು ಶೌಚಾಲಯ ಗುಂಡಿ ಸ್ವಚ್ಛಗೊಳಿಸಲು ಬಳಕೆ ಮಾಡಿರುವುದು ಸರಿಯಲ್ಲ. ಅದಕ್ಕೆ ಸಂಬಂಧಪಟ್ಟ ಶಿಕ್ಷಕರು ಹಾಗೂ ಅಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಾವು ಒತ್ತಾಯಿಸುತ್ತೇವೆ. ಪೊಲೀಸರಿಗೆ ದೂರು ನೀಡಿದರೆ ಮುಂದಿನ ಕ್ರಮ ಜರುಗಿಸುತ್ತೇವೆ ಎಂದರು.

RELATED ARTICLES

Latest News