Thursday, April 30, 2026
Homeರಾಷ್ಟ್ರೀಯಲೈಂಗಿಕ ಶೋಷಣೆ : ಬಿಜೆಪಿ ಕೌನ್ಸಿಲರ್‌ ಮಗನ ವಿರುದ್ಧ 2 ಅಪ್ರಾಪ್ತ ಬಾಲಕಿಯರ ದೂರು

ಲೈಂಗಿಕ ಶೋಷಣೆ : ಬಿಜೆಪಿ ಕೌನ್ಸಿಲರ್‌ ಮಗನ ವಿರುದ್ಧ 2 ಅಪ್ರಾಪ್ತ ಬಾಲಕಿಯರ ದೂರು

BJP councillor’s son arrested in Goa abuse case of 25-30 minor girls

ಪಣಜಿ, ಮಾ.25 (ಪಿಟಿಐ): ಗೋವಾದ ಬಿಜೆಪಿ ಕೌನ್ಸಿಲರ್‌ ಮಗನ ವಿರುದ್ಧ ದಾಖಲಾದ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಇನ್ನೂ ಇಬ್ಬರು ಅಪ್ರಾಪ್ತ ಬಾಲಕಿಯರು ದೂರು ನೀಡಲು ಮುಂದೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಮಾರ್ಚ್‌ 22ರಂದು ಗೋವಾದ ಕುಷಾವತಿ ಜಿಲ್ಲೆಯ ಕರ್ಚೋರೆಮ್‌ ಪೊಲೀಸ್‌‍ ಠಾಣೆ, ಸ್ಥಳೀಯ ಕೌನ್ಸಿಲರ್‌ ಸುಶಾಂತ್‌ ನಾಯಕ್‌ ಅವರ ಪುತ್ರ ಸೋಹಂ ನಾಯಕ್‌ (20) ಅವರನ್ನು ಬಂಧಿಸಿತು.

ಅಪ್ರಾಪ್ತ ಬಾಲಕಿಯರ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿ ಹಂಚಿಕೊಂಡ ಆರೋಪದಡಿ, ಕಠಿಣ ಕಾಯ್ದೆ ಮತ್ತು ಗೋವಾ ಚಿಲ್ಡ್ರನ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ವಿರುದ್ದ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಮತ್ತು ಇದರ ತನಿಖೆಯನ್ನು ಕ್ರೈಮ್‌ ಬ್ರಾಂಚ್‌ಗೆ ಹಸ್ತಾಂತರಿಸಲಾಗಿದೆ ಎಂದು ಕುಷಾವತಿ ಜಿಲ್ಲೆಯ ಪೊಲೀಸ್‌‍ ಅಧೀಕ್ಷಕ ಸಂತೋಷ್‌ ದೇಸಾಯಿ ಅವರು ತಿಳಿಸಿದ್ದಾರೆ.

ಮಾರ್ಗಾವ್‌ನಲ್ಲಿ ಸುದ್ದಿಗಾರರಿಗೆ ಮಾತನಾಡಿದ ಅವರು ಇಬ್ಬರು ಅಪ್ರಾಪ್ತ ಬಾಲಕಿಯರು ತನಿಖಾಧಿಕಾರಿಗಳ ಮುಂದೆ ಕರ್ಚೋರೆಮ್‌ನಲ್ಲಿ ಹೇಳಿಕೆ ನೀಡಿರುವುದಾಗಿ ತಿಳಿಸಿದ್ದಾರೆ. .ಇಲ್ಲಿವರೆಗೆ ಆರೋಪಿಯ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಇನ್ನಷ್ಟು ಪೀಡಿತರು ಮುಂದೆ ಬರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಕಳೆದ ಮಾರ್ಚ್‌ 21ರಂದು ಸ್ಥಳೀಯ ಅಪ್ರಾಪ್ತ ಬಾಲಕಿಯರ ಅಶ್ಲೀಲ ವೀಡಿಯೊಗಳು ಹರಿದಾಡುತ್ತಿರುವುದು ಬಹಿರಂಗವಾದ ಬಳಿಕ, ಜನರು ಕರ್ಚೋರೆಮ್‌ ಪೊಲೀಸ್‌‍ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಪ್ರಾರಂಭದಲ್ಲಿ ಅಧಿಕೃತ ದೂರು ಇಲ್ಲದ ಕಾರಣ ಪೊಲೀಸರು ಆರೋಪಿಯನ್ನು ಬಂಧಿಸಲಿಲ್ಲ. ಆದರೆ ನಂತರ, ಮಾ.22ರಂದು ಆರೋಪಿಯನ್ನು ಬಂಧಿಸಲಾಯಿತು.

RELATED ARTICLES

Latest News