Friday, November 22, 2024
Homeಬೆಂಗಳೂರುಪಾನ್ ಬ್ರೋಕರ್ ಮೇಲೆ ಹಲ್ಲೆ ನಡೆಸಿ 60 ಲಕ್ಷ ದರೋಡೆ ಮಾಡಿದ್ದ 5 ಮಂದಿ ಬಂಧನ

ಪಾನ್ ಬ್ರೋಕರ್ ಮೇಲೆ ಹಲ್ಲೆ ನಡೆಸಿ 60 ಲಕ್ಷ ದರೋಡೆ ಮಾಡಿದ್ದ 5 ಮಂದಿ ಬಂಧನ

ಬೆಂಗಳೂರು, ಡಿ.19- ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಪಾನ್‍ಬ್ರೋಕರ್‍ನನ್ನು ಕರೆಸಿಕೊಂಡು ಅವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ 60 ಲಕ್ಷ ರೂ. ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ಐದು ಮಂದಿ ಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರಿಜ್ವಾನ್(24), ಆಶ್ರಫ್(20), ಸತೀಶ್(19), ದಿವಾಕರ್(19) ಮತ್ತು ಮೊಹಮ್ಮದ್ ಇರ್ಪಾನ್(20) ಬಂಧಿತ ದರೋಡೆಕೋರರು.

ಪಾನ್‍ಬ್ರೋಕರ್ ಕೆಲಸ ಮಾಡುವ ಕೆಜಿಎಫ್ ಮೂಲದ ಸಂಕೇತ್ ಎಂಬುವರಿಗೆ ಕಡಿಮೆ ಬೆಲೆಗೆ ಚಿನ್ನ ನೀಡುವುದಾಗಿ ನಂಬಿಸಿ ಆದರ್ಶ್ ಲೇಔಟ್ ಹಳೆಯ ರಿಜಿಸ್ಟರ್ ಕಚೇರಿ ರಸ್ತೆಯಲ್ಲಿರುವ ಸಿದ್ದಪ್ಪಾಜಿ ಉದ್ಯಾನವನ ಬಳಿ ಇರುವ ಗ್ರಂಥಾಲಯದ ಹತ್ತಿರ ಐದು ಮಂದಿ ದರೋಡೆಕೋರರು ಕರೆಸಿಕೊಂಡಿದ್ದಾರೆ. ಸಂಕೇತ್ ಅವರು ಸ್ಥಳಕ್ಕೆ ಬರುತ್ತಿದ್ದಂತೆ ಏಕಾಏಕಿ ಮಚ್ಚಿನಿಂದ ಹಲ್ಲೆ ಮಾಡಿ ಅವರ ಬಳಿ ಇದ್ದ 60 ಲಕ್ಷ ಹಣವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬಸವೇಶ್ವರ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಪ್ರಮುಖ ಆರೋಪಿ, ಕುರುಬರಹಳ್ಳಿಯ ಜೆಸಿ ನಗರ ನಿವಾಸಿ ಮೊಹಮ್ಮದ್ ರಿಜ್ವಾನ್(ಎಂಬಾತನನ್ನು ಬಂಧಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ ಪೊಲೀಸ್ ಬಂಧನಕ್ಕೆ ಪಡೆದು ವಿಚಾರಣೆಗೊಳಪಡಿಸಿ ಸ್ವ-ಇಚ್ಛ ಹೇಳಿಕೆ ಹಾಗೂ ಮಾಹಿತಿ ಮೇರೆಗೆ 50 ಲಕ್ಷ ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಜೆಸ್ಟ್ ಕಾರನ್ನು ವಶಪಡಿಸಿಕೊಂಡು ಉಳಿದವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದರು.

ಗ್ಯಾನವ್ಯಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆ ಪ್ರಶ್ನಿಸಿ ಮುಸ್ಲಿಮರು 5 ಅರ್ಜಿಗಳು ವಜಾ

ರೋಪಿಗಳಾದ ಆಶ್ರಫ್, ಸತೀಶ್ ಮತ್ತು ದಿವಾಕರ್ ಎಂಬುವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಒಟ್ಟು ಒಂದು ಲಕ್ಷ ಹಣ ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಇಂದಿರಾ ನಗರದ ಮಹಮ್ಮದ್ ಇರ್ಪಾನ್‍ಎಂಬಾತನನ್ನು ಬಂಧಿಸಿ ಎರಡು ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತರಾದ ಗಿರೀಶ್ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಉಪವಿಭಾಗದ ಎಸಿಪಿ ಚಂದನ್ ಕುಮಾರ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಚಿಕ್ಕಸ್ವಾಮಿ ಹಾಗೂ ಸಿಬ್ಬಂದಿ ತಂಡ ಆರೋಪಿಗಳಿಂದ 53 ಲಕ್ಷ ಹಣ, ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News