Homeರಾಜ್ಯಚಿನ್ನದ ಬೆಲೆಯಲ್ಲಿ ಅಲ್ಪ ಚೇತರಿಕೆ, ಬೆಳ್ಳಿ ಕುಸಿತ

ಚಿನ್ನದ ಬೆಲೆಯಲ್ಲಿ ಅಲ್ಪ ಚೇತರಿಕೆ, ಬೆಳ್ಳಿ ಕುಸಿತ

Gold prices see slight recovery, silver declines

ಬೆಂಗಳೂರು,ಮಾ.27- ಚಿನ್ನದ ದರದಲ್ಲಿ ಅಲ್ಪ ಏರಿಕೆ ಕಂಡಿದ್ದರೆ, ಬೆಳ್ಳಿಯ ದರದಲ್ಲಿ ಕುಸಿತ ಮುಂದುವರೆದಿದೆ.ಚಿನ್ನ-ಬೆಳ್ಳಿ ದರಗಳಲ್ಲಿ ಏರಿಳಿತ ಕಂಡುಬರುತ್ತಿದ್ದರೂ ಮಾರ್ಚ್‌ ತಿಂಗಳ ಆರಂಭದಿಂದ ಇಳಿಕೆಯ ಪ್ರಮಾಣವೇ ಹೆಚ್ಚಾಗಿರುವುದು ಇದುವರೆಗೂ ಕಂಡುಬಂದಿದೆ.

ಭಾರೀ ಕುಸಿತ ಕಂಡಿದ್ದ ಚಿನ್ನದ ದರದಲ್ಲಿ ಮಾ.25 ರಂದು ಚೇತರಿಕೆ ಕಂಡಿತ್ತು. ಮತ್ತೆ ಇಂದು ಅಲ್ಪ ಹೆಚ್ಚಳವಾಗಿದೆ.ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, 24 ಕ್ಯಾರೆಟ್‌ನ ಚಿನ್ನ ಪ್ರತೀ ಗ್ರಾಂಗೆ 16 ರೂ. ಏರಿಕೆಯಾಗಿ 14,471 ರೂ.ನಷ್ಟಿದೆ. 22 ಕ್ಯಾರೆಟ್‌ನ ಚಿನ್ನ ಪ್ರತೀ ಗ್ರಾಂಗೆ 15 ರೂ.ನಷ್ಟು ಏರಿಕೆಯಾಗಿ 13,265 ರೂ.ಗೆ ತಲುಪಿದೆ. 18 ಕ್ಯಾರೆಟ್‌ನ ಚಿನ್ನ 12 ರೂ. ಏರಿಕೆಯಾಗಿದ್ದು, 10,853 ರೂ.ನಷ್ಟಿದೆ.

ಮಾ.25 ರಂದು 24 ಕ್ಯಾರೆಟ್‌ನ ಚಿನ್ನ ಪ್ರತೀ ಗ್ರಾಂ 376 ರೂ. ಹಾಗೂ 22 ಕ್ಯಾರೆಟ್‌ನ ಚಿನ್ನ ಪ್ರತೀ ಗ್ರಾಂಗೆ 345 ರೂ.ಗಳಷ್ಟು ಏರಿಕೆಯಾಗಿತ್ತು. ಮತ್ತೆ ನಿನ್ನೆ ಕ್ರಮವಾಗಿ 24 ಕ್ಯಾರೆಟ್‌ ಚಿನ್ನ 212 ರೂ. ಹಾಗೂ 22 ಕ್ಯಾರೆಟ್‌ ಚಿನ್ನ 195 ರೂ.ನಷ್ಟು ಪ್ರತೀ ಗ್ರಾಂಗೆ ಕಡಿಮೆಯಾಗಿತ್ತು.
ಮಾ.18 ರಿಂದಲೂ ಚಿನ್ನದ ದರದಲ್ಲಿ ನಿರಂತರ ಇಳಿಕೆಯಾಗಿರುವುದು ಮಾರುಕಟ್ಟೆ ಮಾಹಿತಿಯಿಂದ ಕಂಡುಬಂದಿದೆ.

ಕಳೆದ ಮೂರು ದಿನಗಳಿಂದ ಏರಿಕೆಯಾಗಿದ್ದ ಬೆಳ್ಳಿದರ ಇಂದು ಮತ್ತೆ ಕುಸಿತ ಕಂಡಿದೆ.
ಇಂದು ಪ್ರತೀ ಕೆ ಜಿ ಗೆ 10 ಸಾವಿರ ರೂ.ಗಳಷ್ಟು ಇಳಿಕೆಯಾಗಿದ್ದು, 2,40,000 ರೂ.ಗಳಷ್ಟಿದೆ. ನಿನ್ನೆ ಕೆ ಜಿ ಗೆ 100 ರೂ.ನಷ್ಟು ಹೆಚ್ಚಾಗಿತ್ತು. ಮಾ.25 ರಂದು 15,000 ರೂ. ಹಾಗೂ ಮಾ.24 ರಂದು 5,000 ರೂ.ನಷ್ಟು ಹೆಚ್ಚಳವಾಗಿ ಮತ್ತೆ ಬೆಲೆ ಏರಿಕೆ ಸುಳಿವನ್ನು ನೀಡಿತ್ತು.
ಮಾ.18 ರಿಂದಲೂ ನಿರಂತರವಾಗಿ ಇಳಿಕೆಯಾಗಿದ್ದ ಬೆಳ್ಳಿಯ ದರ ಕಳೆದ ಮೂರು ದಿನಗಳ ನಿರಂತರ ಏರಿಕೆ ಕಂಡು ಮತ್ತೆ ಕುಸಿತದ ಹಾದಿ ಹಿಡಿದಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗುತ್ತಿರುವ ಬಿಕ್ಕಟ್ಟಿನಿಂದಾಗಿ ಚಿನಿವಾರ ಪೇಟೆಯಲ್ಲಿ ಕುಸಿತ ಕಂಡುಬಂದಿತ್ತು. ಇದರ ಪರಿಣಾಮ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಭಾರೀ ಇಳಿಕೆಯಾಗಿ ಆಭರಣ ಪ್ರಿಯರು ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಹೂಡಿಕೆದಾರರಿಗೆ ನಷ್ಟ ಉಂಟಾಗಿತ್ತು.
ಈ ವಾರದಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತವಾಗುತ್ತಿದ್ದು, ಬೆಲೆ ಸ್ಥಿರವಾಗಿ ಮುಂದುವರೆಯಲಿದೆಯೇ ಅಥವಾ ಕುಸಿತ ಕಾಣಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES
spot_img

Latest News