ಗ್ವಾಲಿಯರ್,ಮಾ.27: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಇಂದು ಮುಂಜಾನೆ ಆಟೋ ರಿಕ್ಷಾಗೆ ಕಾರು ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಮೃತರನ್ನು ಇಂದ್ರಜೀತ್ ಶಾಕ್ಯ (55), ಅವರ ಪತ್ನಿ ಲೀಲಾ (52), ಶುಭಮ್ ಅಟೋದಲ್ಲಿ ಪ್ರಯಾಣಿಸುತ್ತಿದ್ದ ಕಶ್ಯಪ್ (30), ಅವರ ಪತ್ನಿ ಶಗುನ್ (25) ಹಾಗೂ ಅವರ ಸಂಬಂಧಿ ಪಿಂಕಿ ಕಶ್ಯಪ್ (60) ಎಂದು ಗುರುತಿಸಲಾಗಿದೆ.ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಪರಶುರಾಮ ಚೌರಾಹಾ ಬಳಿ ೕ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಪ್ರಿಯಾಂಶ್ (5), ಆರವ್ (6) ಎಂಬ ಇಬ್ಬರು ಮಕ್ಕಳನ್ನು ಸೇರಿಸಿ ನಾಲ್ವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅತಿವೇಗ ಹಾಗೂ ಅಜಾಗರೂಕ ಚಾಲನೆಯ ಕಾರಣದಿಂದ ಕಾರನ್ನು ಪೊಲೀಸರು ಹಿಂಬಾಲಿಸುತ್ತಿದ್ದಾಗ ಅದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದೆ ಎಂದು ಗೊತ್ತಾಗಿದೆ.
ರಾಮನವಮಿ ಹಬ್ಬದ ಸಂದರ್ಭದಲ್ಲಿ ಸೀತಾ ಮಾತ ದೇವಾಲಯಕ್ಕೆ ತೆರಳಿ ನಂತರ ಮನೆಗೆ ತೆರಳಲು ಆಟೋದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಗ್ವಾಲಿಯರ್ ವಲಯದ ಐಜಿಪಿ ತಿಳಿಸಿದ್ದಾರೆ. ಕಾರು ಡಿಕ್ಕಿ ಹೊಡೆದ ತೀವ್ರತೆಗೆ ಆಟೋ ರಿಕ್ಷಾ ಮರಕ್ಕೆ ಅಪ್ಪಳಿಸಿ ಭಾರೀ ಜಖಂಗೊಂಡಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ತಕ್ಷಣ ಪೊಲೀಸರು ಸ್ಥಳಕ್ಕೆ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದು, ನಾಲ್ವರನ್ನು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ಘೋಷಿಸಿದರು ನಂತರ ಮತ್ತೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಕಾರು ಚಾಲಕ ಅಮನ್ ಶರ್ಮಾ (26) ಅವರನ್ನು ಬಂಧಿಸಲಾಗಿದೆ ಎಂದು ಐಜಿ ಸಕ್ಸೇನಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಗುರುವಾರ ಸಂಜೆ ಮಧ್ಯಪ್ರದೇಶದ ದಲ್ಲಿ ಬಸ್ ಮತ್ತು ಪಿಕಪ್ ವಾಹನ ಡಿಕ್ಕಿಯಾದ ಪರಿಣಾಮ 10 ಮಂದಿ ಸಾವನ್ನಪ್ಪಿ, 31 ಮಂದಿ ಗಾಯಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
