Saturday, May 2, 2026
Homeಅಂತಾರಾಷ್ಟ್ರೀಯನೇಪಾಳದ ಪ್ರಧಾನಿಯಾಗಿ ಬಲೆಂದ್ರ ಶಾ-ಬಾಲೆನ್‌ ನೇಮಕ

ನೇಪಾಳದ ಪ್ರಧಾನಿಯಾಗಿ ಬಲೆಂದ್ರ ಶಾ-ಬಾಲೆನ್‌ ನೇಮಕ

Balendra Shah to Take Oath as Nepal Prime Minister Today

ಕಠಂಡು, ಮಾ.27- ನೇಪಾಳದ ಪ್ರಧಾನಿಯಾಗಿ ಬಲೆಂದ್ರ ಶಾ-ಬಾಲೆನ್‌ ಅವರನ್ನು ಇಂದು ನೇಮಕ ಮಾಡಲಾಗಿದೆ. ಇದರಿಂದ ಹಿಮಾಲಯ ರಾಷ್ಟ್ರದ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಪ್ರಧಾನಿಯಾದ ನಾಯಕ ಎಂಬ ದಾಖಲೆಯನ್ನು ಬಾಲೆನ್‌ ನಿರ್ಮಿಸಿದ್ದಾರೆ.

ರಾಷ್ಟ್ರಪತಿ ರಾಮಚಂದ್ರ ಪೌಡೆಲ್‌ ಅವರು ನೇಪಾಳ ಸಂವಿಧಾನದ ವಿಧಿ 76(1) ಅನ್ವಯ ರಾಷ್ಟ್ರಿಯ ಸ್ವತಂತ್ರ ಪಾರ್ಟಿ (ಆರ್‌ಎಸ್‌‍ಪಿ) ಸಂಸದೀಯ ಪಕ್ಷದ ನಾಯಕ ಬಾಲೆನ್‌ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

35 ವರ್ಷದ ರ್ಯಾಪರ್ನಿಂದ ರಾಜಕಾರಣಿಯಾಗಿ ಹೊರಹೊಮಿದ ಬಾಲೆನ್‌‍, ಮಧೇಶ್‌ ಪ್ರದೇಶದಿಂದ ಪ್ರಧಾನಿಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಇಂದು ಮಧ್ಯಾಹ್ನ 12.34ಕ್ಕೆ ರಾಷ್ಟ್ರಪತಿ ಭವನ ಶೀತಲ್‌ ನಿವಾಸ್‌‍ ನಲ್ಲಿ ಪ್ರಮಾಣವಚನ ಸ್ವೀಕಾರಿಸಿದ್ದಾರೆ.
ರಾಷ್ಟ್ರಪತಿ ಪೌಡೆಲ್‌ ಅವರು ಪದಗ್ರಹಣ ಹಾಗೂ ಗೌಪ್ಯತಾ ಪ್ರಮಾಣವಚನ ಬೋಧಿಸಲಿದ್ದಾರೆ ಎಂದು ರಾಷ್ಟ್ರಪತಿ ಮಾಧ್ಯಮ ಸಲಹೆಗಾರ ಕಿರಣ್‌ ಪೋಖರೆಲ್‌ ತಿಳಿಸಿದ್ದಾರೆ.

ಪ್ರಮಾಣವಚನ ಸಮಾರಂಭದಲ್ಲಿ ಹಿಂದೂ ಹಾಗೂ ಬೌದ್ಧ ಧಾರ್ಮಿಕ ಪರಂಪರೆಗಳ ಸಂಯೋಜನೆ ಕಾಣಿಸಿಕೊಳ್ಳಲಿದೆ. ಏಳು ಬ್ರಾಹಣರಿಂದ ಶಂಖನಾದ, 108 ಹಿಂದೂ ವಟುಗಳಿಂದ ವೇದಮಂತ್ರ ಪಠಣ (ಸ್ವಸ್ತಿ ಬಚನ್‌) ಹಾಗೂ 107 ಲಾಮಾಗಳಿಂದ ಬೌದ್ಧ ಧರ್ಮಗ್ರಂಥ ಪಠಣ (ಮಂಗಳ ಬಚನ್‌) ಸೇರಿದಂತೆ ವಿಶೇಷ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ಬಾಲೆನ್‌ 15 ರಿಂದ 18 ಸಚಿವರನ್ನು ಒಳಗೊಂಡ ಸಣ್ಣ ಸಚಿವ ಸಂಪುಟ ರಚಿಸುವ ಸಾಧ್ಯತೆ ಇದೆ. ಕಳೆದ ವರ್ಷ ನಡೆದ ಜನರೇಶನ್‌-ಜೆನ್‌ಜಿ ಪ್ರತಿಭಟನೆಗಳ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪಾರಂಪರಿಕ ರಾಜಕೀಯ ಪಕ್ಷಗಳನ್ನು ಹಿಂದಿಕ್ಕಿ ಬಾಲೆನ್‌ ಹಾಗೂ ಅವರ ಆರ್‌ಎಸ್‌‍ಪಿ ಪಕ್ಷ ಭಾರೀ ಗೆಲುವು ಸಾಧಿಸಿ, ಸರ್ಕಾರ ರಚಿಸುವ ಅವಕಾಶ ಪಡೆದುಕೊಂಡಿದೆ.

275 ಸದಸ್ಯರ ಪ್ರತಿನಿಧಿ ಸಭೆಯಲ್ಲಿ ಆರ್‌ಎಸ್‌‍ಪಿ 182 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಸಾಧಿಸಿದೆ. ಈ ಸಭೆಯಲ್ಲಿ 165 ಸದಸ್ಯರು ನೇರ ಮತದಾನದ ಮೂಲಕ ಹಾಗೂ 110 ಸದಸ್ಯರು ಅನುಪಾತಾತಕ ಮತದಾನದ ಮೂಲಕ ಆಯ್ಕೆಯಾಗುತ್ತಾರೆ.

ನಿನ್ನೆ ನೂತನವಾಗಿ ಆಯ್ಕೆಯಾದ ಎಲ್ಲ ಸದಸ್ಯರೂ ಪ್ರಮಾಣವಚನ ಸ್ವೀಕರಿಸಿದ್ದರು. ಕಠಂಡು ಮಾಜಿ ಮೇಯರ್‌ ಆಗಿದ್ದ ಬಾಲೆನ್‌, ಝಾಪಾ 5 ಕ್ಷೇತ್ರದಲ್ಲಿ ನಾಲ್ಕು ಬಾರಿ ಪ್ರಧಾನಿಯಾಗಿದ್ದ ಕೆ.ಪಿ. ಶರ್ಮಾ ಒಲಿ ಅವರನ್ನು ಭಾರೀ ಮತಾಂತರದಿಂದ ಸೋಲಿಸಿದ್ದಾರೆ.

RELATED ARTICLES

Latest News