ನವದೆಹಲಿ, ಸೆ 30 (ಪಿಟಿಐ)- ಚುನಾವಣಾ ಬಾಂಡ್‍ಗಳನ್ನು ಕಾನೂನುಬದ್ಧ ಲಂಚ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಬಣ್ಣಿಸಿದ್ದಾರೆ.ಬಾಂಡ್‍ಗಳ ಹೊಸ ಭಾಗವು ಅಕ್ಟೋಬರ್ 4 ರಂದು ತೆರೆಯಲಿದ್ದು, ಇದು ಬಿಜೆಪಿಗೆ ಚಿನ್ನದ ಸುಗ್ಗಿಯಾಗಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಅಕ್ಟೋಬರ್ 4 ರಿಂದ 10 ದಿನಗಳವರೆಗೆ ಮಾರಾಟಕ್ಕೆ ತೆರೆಯುವ ಚುನಾವಣಾ ಬಾಂಡ್‍ಗಳ 28 ನೇ ಕಂತಿನ ವಿತರಣೆಯನ್ನು ಸರ್ಕಾರ ನಿನ್ನೆ ಅನುಮೋದಿಸಿದೆ.ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ತೆಲಂಗಾಣ ಮತ್ತು ಮಿಜೋರಾಂ ವಿಧಾನಸಭೆ ಚುನಾವಣೆಗೆ ಮುನ್ನ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ರಾಜ್ಯಗಳ ಚುನಾವಣಾ ದಿನಾಂಕಗಳು ಶೀಘ್ರದಲ್ಲೇ ಘೋಷಣೆಯಾಗುವ ಸಾಧ್ಯತೆಯಿದೆ ಎಂದು ಚಿದಂಬರಂ ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
BIG NEWS : ದೆಹಲಿಯಲ್ಲಿ ಐಸಿಸ್ ಶಂಕಿತ ಉಗ್ರರು, ರಕ್ತದೋಕುಳಿಗೆ ಪ್ಲಾನ್..!
ಅಕ್ಟೋಬರ್ 4 ರಂದು ಚುನಾವಣಾ ಬಾಂಡ್‍ಗಳ 28 ನೇ ಕಂತಿನ ತೆರೆಯುವಿಕೆ ಬಿಜೆಪಿಗೆ ಸುವರ್ಣ ಸುಗ್ಗಿಯಾಗಲಿದೆ. ಹಿಂದಿನ ದಾಖಲೆಗಳ ಪ್ರಕಾರ, ಅನಾಮಧೇಯರೆಂದು ಕರೆಯಲ್ಪಡುವವರಿಂದ ಶೇ. 90ರಷ್ಟು ದೇಣಿಗೆ ಬಿಜೆಪಿಗೆ ಹೋಗುತ್ತದೆ.
ರಾಜಕೀಯ ನಿಧಿಗೆ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನೀಡುವ ನಗದು ದೇಣಿಗೆಗೆ ಪರ್ಯಾಯವಾಗಿ ಚುನಾವಣಾ ಬಾಂಡ್‍ಗಳನ್ನು ತೆರೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.