Saturday, May 2, 2026
Homeರಾಜ್ಯಅಮೆರಿಕ 250ನೇ ಸ್ವಾತಂತ್ರ್ಯ ದಿನಾಚರಣೆ : ಡಾಲರ್‌ನಲ್ಲಿ ಟ್ರಂಪ್‌ ಸಹಿ

ಅಮೆರಿಕ 250ನೇ ಸ್ವಾತಂತ್ರ್ಯ ದಿನಾಚರಣೆ : ಡಾಲರ್‌ನಲ್ಲಿ ಟ್ರಂಪ್‌ ಸಹಿ

America's 250th Independence Day: Trump's signature on the dollar

ವಾಷಿಂಗ್ಟನ್‌,ಮಾ.27- ಅಮೆರಿಕ 250 ನೇ ಸ್ವಾತಂತ್ರ್ಯದಿನಾಚರಣೆ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಸಹಿ ಇರುವ ಅಮೆರಿಕದ ಕರೆನ್ಸಿಶೀಘ್ರದಲೇ ಕಾಣಿಸಿಕೊಳ್ಳಲಿದೆ. ಕಳೆದ 1861 ರಲ್ಲಿ ಡಾಲರ್‌ ಬಿಲ್‌ಗಳನ್ನು ಪರಿಚಯಿಸಿದ ನಂತರ ಹಾಲಿ ಅಧ್ಯಕ್ಷರಿಗೆ ಇದು ಮೊದಲನೆಯದು.

ಅಮೆರಿಕ ಖಜಾನೆ ತೆಗೆದುಕೊಂಡ ಈ ನಿರ್ಧಾರವು ಈ ವರ್ಷ ಅಮೆರಿಕದ ಸ್ವಾತಂತ್ರ್ಯದ 250 ನೇ ವಾರ್ಷಿಕೋತ್ಸವದ ಆಚರಣೆಯೊಂದಿಗೆ ಹೊಂದಿಕೆಯಾಗುತ್ತದೆ.ಅಮೆರಿಕದ 250 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ, ಅಧ್ಯಕ್ಷ ಡೊನಾಲ್ಡ್ ಜೆ ಟ್ರಂಪ್‌ ಅವರ ಸಹಿ (ಖಜಾನೆ) ಕಾರ್ಯದರ್ಶಿ ಸ್ಕಾಟ್‌ ಬೆಸೆಂಟ್‌ ಅವರ ಸಹಿಯೊಂದಿಗೆ ಶೀಘ್ರದಲ್ಲೇ ಯುಎಸ್‌‍ ಕರೆನ್ಸಿಯಲ್ಲಿ ಕಾಣಿಸಿಕೊಳ್ಳಲಿದೆ.

ಇದು ಇತಿಹಾಸದಲ್ಲಿ ಮೊದಲನೆ ಮತ್ತು ನಮ ಮಹಾನ್‌ ರಾಷ್ಟ್ರಕ್ಕೆ ಸಮರ್ಪಣೆಯನ್ನು ಸಂಕೇತಿಸುತ್ತದೆ ಎಂದು ಅಮೆರಿಕ ಕಜಾನೆ ಖಜಾಂಚಿ ಬ್ರಾಂಡನ್‌ ಬೀಚ್‌ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ, ಅಮೆರಿಕದ ಸ್ವಾತಂತ್ರ್ಯದ 250 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸಿದ್ದತೆ ನಡೆದಿದೆ ಇದರ ನಡುವೆ ಟ್ರಂಪ್‌ ಅವರ ಚಿತ್ರವನ್ನು ಹೊಂದಿರುವ 24-ಕ್ಯಾರೆಟ್‌ ಚಿನ್ನದ ಸರಣಾರ್ಥ ನಾಣ್ಯದ ಅಂತಿಮ ವಿನ್ಯಾಸವನ್ನು ಫೆಡರಲ್‌ ಕಲಾ ಆಯೋಗವು ಅನುಮೋದಿಸಿದೆ.

ಟ್ರಂಪ್‌ ಮುಷ್ಟಿ ಹಿಡಿದು ರೆಸಲ್ಯೂಟ್‌ ಮೇಜಿನ ಮೇಲೆ ಒರಗಿರುವುದನ್ನು ಚಿತ್ರಿಸುವ 24 ಕ್ಯಾರೆಟ್‌ ಚಿನ್ನದ ನಾಣ್ಯವು ಜೀವಂತ ಅಧ್ಯಕ್ಷರು ನಾಣ್ಯದ ಮೇಲೆ ಕಾಣಿಸಿಕೊಂಡಿರುವುದು ಎರಡನೇ ಬಾರಿಯಾಗಿದೆ.

ಅಧ್ಯಕ್ಷ ಟ್ರಂಪ್‌ ಅವರ ನಾಯಕತ್ವದಲ್ಲಿ, ನಾವು ಅಭೂತಪೂರ್ವ ಆರ್ಥಿಕ ಬೆಳವಣಿಗೆ, ಶಾಶ್ವತ ಡಾಲರ್‌ ಪ್ರಾಬಲ್ಯ ಮತ್ತು ಹಣಕಾಸಿನ ಶಕ್ತಿ ಮತ್ತು ಸ್ಥಿರತೆಯತ್ತ ಸಾಗುತ್ತಿದ್ದೇವೆ ಎಂದು ಬೆಸೆಂಟ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಮ್ಮ ಮಹಾನ್‌ ದೇಶ ಮತ್ತು ಅಧ್ಯಕ್ಷ ಡೊನಾಲ್‌್ಡ ಜೆ ಟ್ರಂಪ್‌ ಅವರ ಐತಿಹಾಸಿಕ ಸಾಧನೆಗಳನ್ನು ಗುರುತಿಸಲು ಅವರ ಹೆಸರನ್ನು ಹೊಂದಿರುವ ಯುಎಸ್‌‍ ಡಾಲರ್‌ ಗಿಂತ ಹೆಚ್ಚು ಶಕ್ತಿಶಾಲಿ ಮಾರ್ಗವಿಲ್ಲ, ಮತ್ತು ಈ ಐತಿಹಾಸಿಕ ಕರೆನ್ಸಿಯನ್ನು ಅರ್ಧಶತಮಾನೋತ್ಸವದಲ್ಲಿ ಬಿಡುಗಡೆ ಮಾಡುವುದು ಸೂಕ್ತವಾಗಿದೆ ಎಂದು ಅವರು ಹೇಳಿದರು.

ಅಮೆರಿಕದ ಸುವರ್ಣಯುಗದ ಆರ್ಥಿಕ ಪುನರುಜ್ಜೀವನದ ಶಿಲ್ಪಿಯಾಗಿ ಇತಿಹಾಸದಲ್ಲಿ ಅಧ್ಯಕ್ಷರ ಗುರುತು ನಿರಾಕರಿಸಲಾಗದು ಎಂದು ಖಜಾಂಚಿ ಬೀಚ್‌ ಹೇಳಿದರು, ಅಮೆರಿಕನ್‌ ಕರೆನ್ಸಿ ಟಂಪ್‌ ಅವರ ಸಹಿಯನ್ನು ಮುದ್ರಿಸುವುದು ಸೂಕ್ತ ಮಾತ್ರವಲ್ಲ, ಅರ್ಹವಾಗಿದೆ ಎಂದು ಹೇಳಿದರು.

RELATED ARTICLES

Latest News