Wednesday, April 29, 2026
Homeರಾಜ್ಯಸಿಇಟಿ ಪರೀಕ್ಷೆಯ ಕೀ ಉತ್ತರ ಪ್ರಕಟ

ಸಿಇಟಿ ಪರೀಕ್ಷೆಯ ಕೀ ಉತ್ತರ ಪ್ರಕಟ

CET exam key answer published

ಬೆಂಗಳೂರು,ಏ.27- ಕಳೆದ ವಾರ ನಡೆದಿದ್ದ ಪ್ರಸಕ್ತ ಸಾಲಿನ ಸಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ( ಕೆಇಎ) ಕೆಇಎ (ಏಇಂ) ತನ್ನ ವೆಬ್‌‍ಸೈಟ್‌‍ನಲ್ಲಿ ಪ್ರಕಟಿಸಿದೆ. ಕೀ ಉತ್ತರಗಳಿಗೆ ಆಕ್ಷೇಪಣೆಗಳು ಏನಾದರೂ ಇದ್ದರೆ ಏ.30ರೊಳಗೆ ಸಲ್ಲಿಸಬೇಕು.

ಇದಕ್ಕೆ ಆನ್‌ಲೈನ್‌ ಲಿಂಕ್‌ ಕೂಡ ಬಿಡುಗಡೆ ಮಾಡಿದ್ದು, ಆಕ್ಷೇಪಣೆಗಳ ಜೊತೆಗೆ ಪ್ರಶ್ನೆ ಸಂಖ್ಯೆ, ವರ್ಷನ್‌ ಕೋಡ್‌ ಇತ್ಯಾದಿ ಮಾಹಿತಿಯನ್ನು ನಿಖರವಾಗಿ ದಾಖಲಿಸಬೇಕು ಎಂದು ಕೆಇಎ ತಿಳಿಸಿದೆ. ಅಪೂರ್ಣ ಮಾಹಿತಿಯ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ. ಈ ವಿಚಾರದಲ್ಲಿ ವಿಷಯ ತಜ್ಞರು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕೆಇಎ ಮಾಹಿತಿ ನೀಡಿದೆ.

ಅಭ್ಯರ್ಥಿಗಳು kamataka.gov.in 305 KCET 2026 ಉತ್ತರ ಕೀ ಪಿಡಿಎಫ್‌ ಅನ್ನು ಪಡೆಯಬಹುದು ಅಲ್ಲದೆ, ಅವರು ಏಪ್ರಿಲ್‌ 30 ರವರೆಗೆ ಕೆಸಿಇಟಿ 2026 ಉತ್ತರ ಕೀಗೆ ಆಕ್ಷೇಪಣೆ ಸಲ್ಲಿಸಬಹುದು.

ಕೆಸಿಇಟಿ 2026 ಫಲಿತಾಂಶವನ್ನು ಮೇ 2026 ರಲ್ಲಿ ಘೋಷಿಸಲಾಗುತ್ತದೆ. ಪ್ರಾಧಿಕಾರವು ಏಪ್ರಿಲ್‌ 23 ಮತ್ತು 24 ರಂದು ಪರೀಕ್ಷೆಯನ್ನು ನಡೆಸಿತ್ತು. ಆದರೆ ಕನ್ನಡ ಪರೀಕ್ಷೆಯು ಏಪ್ರಿಲ್‌ 22 ರಂದು ನಡೆದಿತ್ತು.

RELATED ARTICLES

Latest News