ಮಧುಗಿರಿ,ಏ.28- ಕುಡಿದ ಮತ್ತಿನಲ್ಲಿ ಅಣ್ಣನ ಮೇಲೆ ಸೈಜುಗಲ್ಲು ಹಾಕಿ ತಮನೇ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ನೆಟ್ರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಂಗರಾಜ (36) ಕೊಲೆಯಾದ ವ್ಯಕ್ತಿ.
ನಿನ್ನೆ ಮಧ್ಯಾಹ್ನ ಕಂಠಪೂರ್ತಿ ಕುಡಿದು ಬಂದ ಗಂಗರಾಜ ಸಹೋದರ ನರಸಿಂಹಮೂರ್ತಿ ವಿನಾಕಾರಣ ಅಣ್ಣನ ಮೇಲೆ ಜಗಳ ತೆಗೆದಿದ್ದಾನೆ.ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಗಂಗರಾಜು ಮೇಲೆ ಸೈಜುಗಲ್ಲು ಎತ್ತಿಹಾಕಿದ್ದಾನೆ.
ಎದೆ ಭಾಗಕ್ಕೆ ಗಂಭೀರವಾದ ಏಟು ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿ ಬಿದ್ದಿದ್ದು, ಅಕ್ರಮ ಮದ್ಯ ಮಾರಾಟದಿಂದ ಗ್ರಾಮಗಳಲ್ಲಿ ಗಲಾಟೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಕೊಡಿಗೇನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
