ವಿಜಯಪುರ, ಡಿ.24- ಬಿಜೆಪಿಯ ಪದಾಧಿಕಾರಿಗಳ ಆಯ್ಕೆ ನನ್ನ ಗಮನಕ್ಕೆ ಬಂದಿಲ್ಲ. ಅದು ಹೇಗೆ ನನ್ನ ಗಮನಕ್ಕೆ ಬರುತ್ತದೆ. ನಾವೇನು ಬಿಜೆಪಿ ಕಾರ್ಯಕರ್ತರೇನು? ನಾವು ದೇಶದ ಕಾರ್ಯಕರ್ತರು ಅಷ್ಟೆ. ಯಡ್ಡಿಯೂರಪ್ಪನವರದ್ದು ಕೆಜೆಪಿ 1, ಇದು ಕೆಜೆಪಿ 2, ಮೊಮ್ಮಗನದು ಕೆಜೆಪಿ 3 ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯ ಘಟಕದ ನೂತನ ಪಟ್ಟಿಗೆ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರ ಜೊತೆ ಮತನಾಡಿದ ಅವರು, ಈ ಪಟ್ಟಿಯ ಆಯುಷ್ಯ 2024ರ ಲೋಕಸಭೆ ಚುನಾವಣೆ. 28 ಸೀಟ್ ತರುತ್ತೇನೆ ಅಂತಾ ಹೇಳಿದ್ದಾರೆ. 28 ರಲ್ಲಿ ಒಂದು ಕಡಿಮೆ ಬಿದ್ದರೂ ಚಿಕ್ಕಮಕ್ಕಳು ಹೇಗೆ ಸಿಗರೇಟ್ ಪ್ಯಾಕ್ ಮನೆ ಮಾಡಿರ್ತಾರೆ ಆ ರೀತಿಯಾಗಿ ಈ ಪಟ್ಟಿ ಹಾಗೆ ಬಿದ್ದು ಹೋಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.
ಈಗ ಕೆಜೆಪಿ 2 ಆಗಿದೆ, ಮುಂದೆ ಅವರ ಮೊಮ್ಮಗ ಬಂದರೆ ಕೆಜೆಪಿ 3 ಆಗುತ್ತದೆ. ಮತ್ತೊಂದೆಡೆ ರಾಜಕೀಯ ನಿವೃತ್ತಿ ಬಗ್ಗೆ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದು, ಈಗಲೇ ನಿವೃತ್ತಿ ಅಲ್ಲ, ಇನ್ನೊಂದು ಎಲೆಕ್ಷನ್ ಇದೆ. 2028ರ ಚುನಾವಣೆ ಬಳಿಕ ನಿರ್ಧಾರ ಮಾಡುವೆ. ಆದರೆ ಯೂ ಟರ್ನ್ ಹೊಡೆದ ಯತ್ನಾಳ್ ಎನ್ನಬೇಡಿ, ಡೈರೆಕ್ಟ್ ಟರ್ನ್ ಎಂದು ಹೇಳಿದರು.
ಈಗ ರಾಜಕೀಯದಲ್ಲಿ ಏನಾಗಿದೆ ಎಂದರೆ ಲಂಪಟರು ಬಹಳ ಇದ್ದಾರೆ. ಅವರೆಲ್ಲ ಹಲ್ಕಾ ಕೆಲಸ ಮಾಡುತ್ತಾರೆ. ಇವತ್ತು ಮËಲ್ಯಾಧಾರಿತ ರಾಜಕಾರಣ ಇಲ್ಲ. ಎಲ್ಲಾ ಕಳ್ಳರು, ಲಫಂಗರು ಹೆಚ್ಚು ಸೇರುತ್ತಿದ್ದಾರೆ. ಒಳ್ಳೆಯವರಿಗೆ ಬ್ಲ್ಯಾಕ್ಮೇಲ್ ಮಾಡುತ್ತಾರೆ. 2024ರ ಚುನಾವಣೆಯ ನಂತರ ಮೇಜರ್ ಆಪರೇಷನ್ ಮಾಡದೇ ಇದ್ದರೆ ಮುಂದಿನ ನಿರ್ಣಯ ನಾನು ಮಾಡುತ್ತೇನೆ ಎಂದು ಹೇಳಿದರು.
ಮತ್ತೊಂದು ವಿವಾದದಲ್ಲಿ ದಯಾನಿಧಿ ಮಾರನ್
ಸಾರ್ವಜನಿಕ ಕೆಲಸ ಮಾಡಲು, ಕ್ರಾಂತಿ ಮಾಡಲು ಅಧಿಕಾರ ಬೇಕಾಗಿಲ್ಲ ಮತ್ತು ಇದು ಕೊನೆಯಲ್ಲ. 2028ಕ್ಕೆ ಮತ್ತೆ ಕ್ಷೇತ್ರ ಮರು ವಿಂಗಡನೆ ಆಗಲಿದೆ. ವಿಜಯಪುರದ ಲೋಕಸಭಾ ಸ್ಥಾನ ಮೂರು ಆಗಲಿದ್ದು, ಲೋಕಸಭೆಯ ಸ್ಥಾನ 900 ಆಗಲಿದೆ. ಕರ್ನಾಟಕ ವಿಧಾನಸಭೆ 290 ಸ್ಥಾನಕ್ಕೆ ಏರಿಕೆ ಆಗಲಿದೆ. ಆಗ ಏನೇನು ಆಗುತ್ತದೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.
ನಾನು ಸಿಎಂ ಆಗುವುದಿದ್ದರೆ ಯಾರು ತಪ್ಪಿಸಲು ಸಾಧ್ಯವಿಲ್ಲ. ಆಗಲಿಲ್ಲ ಅಂದರೆ ನನಗೇನು ಹತಾಶೆ ಇಲ್ಲ. ಸಿಎಂ ಅದವರು ಎಲ್ಲಿದ್ದಾರೆ ಈಗ? ಮಾಜಿ ಮುಖ್ಯಮಂತ್ರಿಗಳನ್ನು ಯಾರಾದ್ರೂ ಕೇಳ್ತಾರಾ? ಅವರಿಗೆ 100 ಜನರ ಕೂಡಿಸಲು ಹೇಳಿ. ಹಣಕೊಟ್ಟು ಕೊಟ್ಟು ತಮ್ಮ ಜಿಲ್ಲೆಯಲ್ಲಿ ಜನರನ್ನು ಕೂಡಿಸುವ ಪರಿಸ್ಥಿತಿ ಬಂದಿದೆ ಎಂದರು. ನನ್ನ ಮಗನನ್ನು ಉದ್ಧಾರ ಮಾಡದೇ ಇದ್ದರೆ ನಾವು ಲೋಕಸಭೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಅವರು ಹಾಳಾಗಿ ಹೋಗಲಿ ಅಂತಾ ಕೊಟ್ಟು ಬಿಟ್ಟಿದ್ದಾರೆ. ಕಳ್ಳರ ಕೈಯಲ್ಲಿ ಬೀಗ ಕೊಟ್ಟಿದ್ದಾರೆ. ಆ ಬೀಗ 2024ರವರೆಗೆ ಮಾತ್ರ. 28 ಸೀಟ್ ಬರಲಿಲ್ಲ ಅಂದರೆ ಬೀಗ ಕಸಿದುಕೊಳ್ಳುತ್ತಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿ ಪದಾಕಾರಿಗಳ ನೇಮಕಾತಿ ಪಟ್ಟಿ ಬಿಡುಗಡೆಯಾಗಿದ್ದು ಪದಾಕಾರಿಗಳ ಪಟ್ಟಿಯಲ್ಲಿ 14ಕ್ಕೂ ಹೆಚ್ಚು ಆಪ್ತರಿಗೆ ಸ್ಥಾನ ನೀಡಲಾಗಿದೆ. ಹಾಗೂ ಮೂವರು ವಿಜಯೇಂದ್ರ ಆಪ್ತರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ. ಶಾಸಕ ಯತ್ನಾಳ್ ಕಡು ವಿರೋಧಿ ನಿರಾಣಿಗೆ ರಾಜ್ಯ ಉಪಾಧ್ಯಕ್ಷ ಸ್ಥಾನ ಹಾಗೂ ಯತ್ನಾಳ್ ಮತ್ತೋರ್ವ ರಾಜಕೀಯ ವಿರೋಧಿ ನಡಹಳ್ಳಿಗೂ ಸ್ಥಾನ ನೀಡಲಾಗಿದೆ. ಎ.ಎಸ್.ಪಾಟೀಲ್ ನಡಹಳ್ಳಿಗೆ ರೈತ ಮೋರ್ಚಾ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದೆ. 17 ವಲಸಿಗರ ಪೈಕಿ ಭೈರತಿ ಬಸವರಾಜ್‍ಗೆ ಮಾತ್ರ ಕುರುಬ ಸಮುದಾಯದ ಕೋಟಾದಡಿ ಸ್ಥಾನ ನೀಡಲಾಗಿದೆ.