Monday, October 7, 2024
Homeರಾಜ್ಯಕಾಫಿ ನಾಡಿನಲ್ಲಿ ದತ್ತ ಜಯಂತಿಗೆ ಚಾಲನೆ

ಕಾಫಿ ನಾಡಿನಲ್ಲಿ ದತ್ತ ಜಯಂತಿಗೆ ಚಾಲನೆ

ಚಿಕ್ಕಮಗಳೂರು, ಡಿ.24- ಅನುಸೂಯ ಜಯಂತಿ ಆಚರಣೆಯೊಂದಿಗೆ ಇಂದಿನಿಂದ ನಡೆಯುವ ಮೂರು ದಿನಗಳ ದತ್ತ ಜಯಂತಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಚಿಕ್ಕಮಗಳೂರು ನಗರದಲ್ಲಿ ಸಂಕೀರ್ತನ ಯಾತ್ರೆ ನಡೆಯಿತು.

ನಗರದ ಬೋಳ ರಾಮೇಶ್ವರ ದೇವಾಲಯದ ಆವರಣದಿಂದ ಆರಂಭವಾದ ಸಂಕೀರ್ತನ ಯಾತ್ರೆ ಐಜಿ ರಸ್ತೆಯಲ್ಲಿ ಸಾಗಿ ರತ್ನಗಿರಿ ರಸ್ತೆಯ ಮೂಲಕ ಪಾಲಿಟೆಕ್ನಿಕ್ ತಲುಪಿ ಅಲ್ಲಿಂದ ಮಹಿಳೆಯರು ವಿವಿಧ ವಾಹನಗಳಲ್ಲಿ ದತ್ತ ಪೀಠಕ್ಕೆ ತೆರಳಿದರು. ಸಂಕೀರ್ತನಾ ಯಾತ್ರೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದಕ್ಷಿಣ ಭಾರತದ ಮಾತೃ ಶಕ್ತಿ ಸಂಯೋಜಿಕೆ ಶುಭ, ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ, ಮಾಜಿ ಸಚಿವ ಸಿ ಟಿ ರವಿ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.

ಮಹಿಳೆಯರು ಕೊರಳಿಗೆ ಕೇಸರಿ ಶಲ್ಯ ಧರಿಸಿಕೊಂಡು ಅನುಸೂಯ ದೇವಿಯ ಚಿತ್ರಪಟ ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದರು. ವಿವಿಧ ಮಹಿಳಾ ಭಜನಾ ಮಂಡಳಿಗಳಿಂದ ಭಜನೆ ಆಡುತ್ತಾ ದತ್ತಾತ್ರೇಯ ನಾಮಸ್ಮರಣೆಯೊಂದಿಗೆ ಹೆಜ್ಜೆ ಹಾಕಿದರು. ಮೆರವಣಿಗೆಯಲ್ಲಿ ಶ್ರಿ ದತ್ತಾತ್ರೇಯರ ಅಡ್ಡಯನ್ನ ಒತ್ತು ದತ್ತಪೀಠಕ್ಕೆ ತೆರಳಲಾಯಿತು. ಸಂಕೀರ್ತನ ಯಾತ್ರೆ ತೆರಳುವ ಎಲ್ಲ ಮಾರ್ಗಗಳಲ್ಲಿಯೂ ಬಿಗಿ ಪೊಲೀಸ್ ಬಂದೂಬಸ್ತ್ ಏರ್ಪಡಿಸಲಾಗಿತ್ತು.

ವಿವಿಧ ವಾಹನಗಳಲ್ಲಿ ತೆರಳಿದ ಮಹಿಳೆಯರು ದತ್ತ ಪೀಠದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ಬ್ಯಾರಿಕೆಟ್ ಮುಖಾಂತರ ಸರತಿ ಸಾಲಿನಲ್ಲಿ ನಿಂತು ಗುಹೆ ಪ್ರವೇಶಿಸಿ ದತ್ತಪಾದಿಕೆಗಳ ದರ್ಶನ ಪಡೆದರು. ಬಂದಂತಹ ಮಹಿಳೆಯರಿಗೆ ಮಹಿಳಾ ಮೂರ್ತಿದಾವತಿಯಿಂದ ಹಸಿರು ಬಳೆ ಹಾಗೂ ಅರಿಶಿಣ ಕುಂಕುಮಗಳನ್ನು ನೀಡಲಾಯಿತು ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ನಾನು ದೇಶದ್ರೋಹಿನೋ, ಪ್ರೇಮಿನೋ ಅನ್ನೋದನ್ನ ತಾಯಿ ತೀರ್ಮಾನ ಮಾಡುತ್ತಾಳೆ : ಪ್ರತಾಪ್ ಸಿಂಹ

ದತ್ತ ಗುಹೆಯ ಹೊರಬಾಗದ ಆವರಣದಲ್ಲಿ ಜಿಲ್ಲಾಡಳಿತ ನಿರ್ಮಿಸಿರುವ ತಾತ್ಕಾಲಿಕ ಶೆಡ್‍ನಲ್ಲಿ ಶ್ರೀ ದತ್ತಾತ್ರೇಯ ಚಿತ್ರಪಟವನ್ನು ಇಟ್ಟು ಪೂಜೆ ಹಾಗೂ ಗಣ ಹೋಮ, ಅನುಸೂಯ ಹೋಮ ಇತ್ಯಾದಿ ಧಾರ್ಮಿಕ ಕಾರ್ಯಗಳು ನಡೆದವು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅವರ ನೇತೃತ್ವದಲ್ಲಿ ಬಿಗಿ ಪೆಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ಮಾತನಾಡಿ, ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ನ್ಯಾಯಾಲಯದ ಆದೇಶದಂತೆ ಅರ್ಚಕರ ನೇಮಕಗೊಳಿಸಲಾಗಿದೆ. ನಮ್ಮ ಬೇಡಿಕೆ ಸಂಪೂರ್ಣ ದತ್ತ ಗುಹೆ ಹಿಂದುಗಳದ್ದೇ ಆಗಬೇಕು ಎಂಬುದಾಗಿದೆ. ಗುಹೆಯಲ್ಲಿರುವ ಹಸಿರು ಹೊದಿಕೆಗಳನ್ನ ತೆರುವು ಮಾಡಬೇಕು. ಪೀಠದಲ್ಲಿ ಹಿಂದೂ ಧಾರ್ಮಿಕ ಆಚರಣೆಗೆ ಮುಕ್ತ ಅವಕಾಶವನ್ನು ಸರ್ಕಾರ ಕೊಡಬೇಕು ಮತ್ತು ಸಂಪೂರ್ಣ ಪೀಠ ಹಿಂದುಗಳದ್ದಾಗಿರಬೇಕು ಶಾಶ್ವತ ಹಿಂದೂ ಅರ್ಚಕರ ನೇಮಕ ಹಾಗೂ ಗೋರಿಗಳ ಸ್ಥಳಾಂತರ ಬೇಡಿಕೆಗಳು ಈಡೇರಬೇಕಿದೆ ಎಂದರು.

ನಾಳೆ ಚಿಕ್ಕಮಗಳೂರು ನಗರದಲ್ಲಿ ಶೋಭಾ ಯಾತ್ರೆ ನಡೆಯಲಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಟಿ. ರಾಜಶೇಖರ್ ತಿಳಿಸಿದ್ದಾರೆ. ನಾಡಿದ್ದು ಮಂಗಳವಾರ ದತ್ತಪೀಠದಲ್ಲಿ ಮೂರನೇ ದಿನದ ದತ್ತ ಜಯಂತಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಈ ವರ್ಷದ ದತ್ತ ಜಯಂತಿ ಮುಕ್ತಾಯಗೊಳ್ಳಲಿದೆ.

RELATED ARTICLES

Latest News