ಅಗರ್ತಲಾ, ಡಿ 28 (ಪಿಟಿಐ) ತ್ರಿಪುರಾದ ಬಿಜೆಪಿ ಶಾಸಕ ಸೂರಜಿತ್ ದತ್ತಾ ದೀರ್ಘಕಾಲದ ಅನಾರೋಗ್ಯದ ನಂತರ ತಡರಾತ್ರಿ ಕೋಲ್ಕತ್ತಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಎಪ್ಪತ್ತು ವರ್ಷದ ದತ್ತಾ ಅವರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಬಹು ಕಾಯಿಲೆಗಳಿಂದ ಬಳಲುತ್ತಿದ್ದ ರಾಮನಗರ ಶಾಸಕರು ಉಸಿರಾಟದ ತೊಂದರೆಯಿಂದ ಅಗರ್ತಲಾ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಉತ್ತಮ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ವರ್ಗಾಯಿಸಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಕೋವಿಡ್ ಹಗರಣದ ಪಾಲು ಕೇಂದ್ರಕ್ಕೆ ಹೋಗಿದೆಯೇ..? : ಸಚಿವ ಪ್ರಿಯಾಂಕ್ ಖರ್ಗೆ
ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ತಮ್ಮ ಫೇಸ್‍ಬುಕ್ ಪೋಸ್ಟ್‍ನಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ, ಹಿರಿಯ ರಾಜಕಾರಣಿ ಮತ್ತು ಹಾಲಿ ಬಿಜೆಪಿ ಶಾಸಕ ಸೂರಜಿತ್ ದತ್ತಾ ರಾಜ್ಯದ ಹೊರಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ನಿಧನದಿಂದ ನನಗೆ ದುಃಖ ಮತ್ತು ನೋವಾಗಿದೆ ಎಂದು ಹೇಳಿದ್ದಾರೆ. ತ್ರಿಪುರಾ ಸರ್ಕಾರ ಇಂದು ಒಂದು ದಿನದ ಶೋಕಾಚರಣೆಯನ್ನು ಘೋಷಿಸಿತು.
ದತ್ತಾ ಮೊದಲು 1988 ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಸ್ರ್ಪಧಿಸಿ ಗೆದ್ದರು, ಸುೀಧಿರ್ ರಂಜನ್ ಮಜುಂದಾರ್ ನೇತೃತ್ವದ ಕಾಂಗ್ರೆಸ್-ಟಿಯುಜೆಎಸ್ ಸರ್ಕಾರದಲ್ಲಿ ಸಚಿವರಾಗಿದ್ದರು.