Homeಜಿಲ್ಲಾ ಸುದ್ದಿಗಳುಮೈಸೂರು : ಕಾಂಪೌಂಡ್‌ ಬಳಿ ಮೂತ್ರ ವಿಸರ್ಜನೆ ತಪ್ಪಿಸಲು ಪಾಲಿಕೆಯಿಂದ 'ಮಿರರ್ ಪ್ಲಾನ್'

ಮೈಸೂರು : ಕಾಂಪೌಂಡ್‌ ಬಳಿ ಮೂತ್ರ ವಿಸರ್ಜನೆ ತಪ್ಪಿಸಲು ಪಾಲಿಕೆಯಿಂದ ‘ಮಿರರ್ ಪ್ಲಾನ್’

Mysuru Civic Body Installs Mirrors on Roadsides to Stop Public Urination

ಮೈಸೂರು,ಮೇ 7- ಕಾಂಪೌಂಡ್‌ ಬಳಿ ಮೂತ್ರ ವಿಸರ್ಜನೆ ಮಾಡುವುದನ್ನು ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್‌ಪ್ಲಾನ್‌ ಮಾಡಿದ್ದು, ಪ್ರಾಯೋಗಿಕವಾಗಿ ಕೇಂದ್ರ ಬಸ್‌‍ ನಿಲ್ದಾಣ ಮುಂಭಾಗದ ಕಾಂಪೌಂಡ್‌ಗೆ ರಿಫ್ಲೆಕ್ಷನ್‌ ಕನ್ನಡಿ ಅಳವಡಿಸಿದೆ.

80 ಮೀಟರ್‌ ಕಾಂಪೌಂಡ್‌ಗೆ ಸ್ಟೈನ್‌ಲೆಸ್‌‍ ಸ್ಟೀಲ್‌ ರಿಫ್ಲೆಕ್ಷನ್‌ ಅಳವಡಿಸಿದ್ದು, ಇದರಲ್ಲಿ ಕನ್ನಡಿಯ ಮಾದರಿಯಲ್ಲಿ ಪ್ರತಿಬಿಂಬ ಕಾಣುವಂತೆ ಮಾಡಲಾಗಿದೆ.ಸ್ಟೈನ್‌ಲೆಸ್‌‍ ಸ್ಟೀಲ್‌ ಗೋಡೆಯ ಮುಂದೆ ನಿಂತರ ಸಂಪೂರ್ಣ ಚಿತ್ರಣ ಹಿಂಬದಿ ಇರುವವರಿಗೆ ಕಾಣುವಂತೆ ಮಾಡಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಮೂತ್ರವಿಸರ್ಜನೆ ಮಾಡಿ ನೈರ್ಮಲ್ಯ ಕೆಡಿಸುತ್ತಿದ್ದುದನ್ನು ತಡೆಯಲು ಈ ಮಾಸ್ಟರ್‌ಪ್ಲ್ಯಾನ್‌ ರೂಪಿಸಲಾಗಿದೆ.

ಈ ಕನ್ನಡಿಯ ಸುತ್ತ ಎಲ್‌ಇಡಿ ಲೈಟ್‌ ಕೂಡಾ ಇದ್ದು, ಇದು ಸಂಜೆ ವೇಳೆ ಸ್ಟ್ರೀಟ್‌ ಲೈಟ್‌ ಆನ್‌ ಆಗುತ್ತಿದ್ದಂತೆ ಇದೂ ಕೂಡ ಆನ್‌ ಆಗಲಿದೆ. ಸುಮಾರು 9.5 ಲಕ್ಷ ರೂ. ವೆಚ್ಚದಲ್ಲಿ ಸ್ಟೈನ್‌ಲೆಸ್‌‍ ಸ್ಟೀಲ್‌ ರಿಫ್ಲೆಕ್ಷನ್‌ ಅನ್ನು ನಿರ್ಮಾಣ ಮಾಡಲಾಗಿದ್ದು, ಪ್ರಾಯೋಗಿಕವಾಗಿ ಕೇಂದ್ರ ಬಸ್‌‍ ನಿಲ್ದಾಣದ ಬಳಿ ಅಳವಡಿಸಲಾಗಿದೆ.ನಗರಪಾಲಿಕೆಯ ವಿನೂತನ ಪ್ರಯೋಗಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

RELATED ARTICLES
spot_img

Latest News