Friday, May 3, 2024
Homeರಾಷ್ಟ್ರೀಯಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ

ಭ್ರಷ್ಟಾಚಾರ ತನಿಖೆಗೆ ಸಿಬಿಐಗೆ ಸಾಮಾನ್ಯ ಅನುಮತಿ ನೀಡಿದ ಮಿಜೋರಾಂ

ಐಜ್ವಾಲï, ಡಿ 29 (ಪಿಟಿಐ) ರಾಜ್ಯದಲ್ಲಿನ ಅಪರಾಧಗಳ ತನಿಖೆಗೆ ಮಿಜೋರಾಂ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಸಾಮಾನ್ಯ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರವು ಗೆಜೆಟ್ ಅಧಿಸೂಚನೆಯಲ್ಲಿ, ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ, 1946 ರ ಸೆಕ್ಷನ್ 6 ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ, ಮಿಜೋರಾಂ ಸರ್ಕಾರವು ಈ ಆದೇಶ ಹೊರಡಿಸಿದೆ.

ಮಿಜೋರಾಂ ರಾಜ್ಯದಲ್ಲಿನ ಅಪರಾಧಗಳ ಸಿಬಿಐ ತನಿಖೆಗೆ ಮಿಜೋರಾಂ ಸರ್ಕಾರವು ಒಪ್ಪಿಗೆ ನೀಡಿದೆ. ನಮ್ಮ ಸರ್ಕಾರವು ನಮ್ಮ ನಾಗರಿಕರ ಕಲ್ಯಾಣಕ್ಕಾಗಿ ಭ್ರಷ್ಟಾಚಾರವನ್ನು ತೊಡೆದುಹಾಕಲು ದೃಢಸಂಕಲ್ಪ ಹೊಂದಿದೆ ಎಂದು ಸಿಎಂ ಲಾಲ್ದುಹೋಮ ಅವರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕತಾರ್‌ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತದ ಮಾಜಿ ನೌಕಾಪಡೆ ಸಿಬ್ಬಂದಿಗಳಿಗೆ ಶಿಕ್ಷೆ ಕಡಿತ

ಡಿಸೆಂಬರ್ 8 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ, ಲಾಲ್ದುಹೋಮ ಅವರು ತಮ್ಮ ಜೋರಾಮ್ ಪೀಪಲ್ಸ ಮೂವ್ಮೆಂಟ್ ಸರ್ಕಾರವು ಭ್ರಷ್ಟಾಚಾರ ವಿರೋ ಕ್ರಮಗಳಿಗೆ ಆದ್ಯತೆ ನೀಡಲಿದೆ ಮತ್ತು ರಾಜ್ಯದಲ್ಲಿನ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಸಿಬಿಐ ಅನ್ನು ಆಹ್ವಾನಿಸುತ್ತದೆ ಎಂದು ಘೋಷಿಸಿದರು.

ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ಡಿಎಸ್‍ಪಿಇ) ಕಾಯಿದೆ, 1946 ರ ಪ್ರಕಾರ, ಸಿಬಿಐ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ತನಿಖೆ ನಡೆಸಲು ರಾಜ್ಯ ಸರ್ಕಾರದ ಒಪ್ಪಿಗೆಯನ್ನು ಪಡೆಯಬೇಕು.

RELATED ARTICLES

Latest News