Homeಜಿಲ್ಲಾ ಸುದ್ದಿಗಳುಪ್ರೀತಿಸಿದ ಯುವಕನಿಗಾಗಿ ಕ್ರಿಶ್ಚಿಯನ್‌ ಧರ್ಮದಿಂದ ಹಿಂದೂ ಧರ್ಮಕ್ಕೆ ಯುವತಿ ಘರ್‌ವಾಪ್ಸಿ

ಪ್ರೀತಿಸಿದ ಯುವಕನಿಗಾಗಿ ಕ್ರಿಶ್ಚಿಯನ್‌ ಧರ್ಮದಿಂದ ಹಿಂದೂ ಧರ್ಮಕ್ಕೆ ಯುವತಿ ಘರ್‌ವಾಪ್ಸಿ

Woman converts to Hinduism from Christianity in Bhadravathi ahead of wedding

ಶಿವಮೊಗ್ಗ,ಮೇ.16- ಭವಿಷ್ಯದ ಬಗ್ಗೆ ಚಿಂತಿಸಿ ಪ್ರೀತಿಸಿದ ಯುವಕನಿಗಾಗಿ ಕ್ರಿಶ್ಚಿಯನ್‌ ಧರ್ಮದ ಯುವತಿಯೊಬ್ಬಳು ಹಿಂದೂ ಧರ್ಮಕ್ಕೆ ಮತ್ತೆ ವಾಪಸ್‌‍ಆದ ಘಟನೆ ಇಲ್ಲಿ ನಡೆದಿದೆ. ಮೂಲತಃ ಹಿಂದೂ ಧರ್ಮಕ್ಕೆ ಸೇರಿದ್ದ ಹನುಮಂತನಗರದ ಸಿಗೇಬಾಗಿಯ ಕುಟುಂಬವೊಂದು ಈ ಹಿಂದೆ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿತ್ತು.

ಆದರೆ, ಯುವತಿ ಭದ್ರಾವತಿ ತಾಲೂಕಿನ ಅಂತರಗಂಗೆಯ ಎಂ.ಶಿವಕುಮಾರ್‌ ಎಂಬುವವರನ್ನು ಪ್ರೀತಿಸುತ್ತಿದ್ದರು. ಈ ಕಾರಣ ಹಿಂದೂ ಧರ್ಮದ ಸಂಪ್ರದಾಯದಂತೆ ಮದುವೆಯಾಗಲು ಅಪೇಕ್ಷೆ ಪಟ್ಟು ಯುವತಿ ವಾಪಾಸ್‌‍ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಯುವತಿಯನ್ನು ಪುನಃ ಹಿಂದೂ ಧರ್ಮಕ್ಕೆ ಕರೆ ತರುವಲ್ಲಿ ಭದ್ರಾವತಿಯ ವಿಶ್ವ ಹಿಂದೂ ಪರಿಷತ್‌ ಪ್ರಮುಖ ಪಾತ್ರ ವಹಿಸಿದೆ.

ಇಲ್ಲಿನ ಜನ್ನಾಪುರ ಮಹಾಗಣಪತಿ ದೇವಾಲಯದಲ್ಲಿ ನಡೆದ ಧಾರ್ಮಿಕ ಕಾರ್ಯದಲ್ಲಿ ಯುವತಿಯ ಮತಾಂತರ ಆಗಿದೆ.ಮುಂದಿನ ಮೇ 24ರಂದು ವಿಶ್ವ ಹಿಂದೂ ಪರಿಷತ್‌ ಆಯೋಜಿಸಿರುವ ಸಾಮೂಹಿಕ ವಿವಾಹದಲ್ಲಿ ಹಿಂದೂ ಸಂಪ್ರಾದಾಯದಂತೆ ಯುವತಿಯ ವಿವಾಹ ನೆರವೇರಲಿದೆ. ಮತಾಂತರಗೊಂಡ ಬೆನ್ನಲ್ಲೇ ಆರೋಗ್ಯಕರ ಪ್ರಿಯಾ ಎನ್ನುವ ಅವರ ಹೆಸರನ್ನು ಪ್ರಿಯಾ ಎಂದು ಬದಲಾಯಿಸಲಾಗಿದೆ.

ಪ್ರಿಯಾ ಹೇಳಿದ್ದೇನು?
ನಾವು ರೋಮನ್‌ ಕ್ಯಾಥೋಲಿಕ್‌ ಸಮುದಾಯಕ್ಕೆ ಸೇರಿದವರು. ನಾನು ಮತ್ತು ಶಿವಕುಮಾರ್‌ 5 ವರ್ಷದಿಂದ ಸ್ನೇಹಿತರಾಗಿದ್ದೆವು. 2 ವರ್ಷದಿಂದ ಪ್ರೀತಿಸುತ್ತಿದ್ದೆವು. ಹಾಗಾಗಿ ಮದುವೆಯಾಗಲು ಬೇರೆ-ಬೇರೆ ಧರ್ಮ ಇದ್ದರೆ ಸರಿಯಾಗಲ್ಲ. ಭವಿಷ್ಯದಲ್ಲಿ ತೊಂದರೆ ಆಗುತ್ತದೆ. ಈ ಹಿನ್ನೆಲೆಯಲ್ಲಿ ಮತಾಂತರದ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪ್ರಿಯ ತಿಳಿಸಿದ್ದಾರೆ.

ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದಾರೆ. ನಾನು ಇಷ್ಟಪಟ್ಟು ಈ ಧರ್ಮಕ್ಕೆ ವಾಪಸ್‌‍ ಬಂದಿದ್ದೇನೆ ಎಂದು ಹೇಳಿದ್ದಾರೆ.ಈ ಕುರಿತು ಆಕೆಯ ಪ್ರಿಯಕರ ಶಿವಕುಮಾರ್‌ ಮಾತನಾಡಿದ್ದು, ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಮತಾಂತರ ಆಗಿದೆ. ಪ್ರಿಯಾ ನನಗೋಸ್ಕರ ಮತ್ತೆ ಹಿಂದೂ ಧರ್ಮಕ್ಕೆ ಬಂದಿದ್ದಾಳೆ. ಬಹಳ ಖುಷಿಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News