Monday, October 7, 2024
Homeರಾಜ್ಯ2023ರಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ 68518 ಅಪರಾಧ ಪ್ರಕರಣಗಳು ದಾಖಲು

2023ರಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ 68518 ಅಪರಾಧ ಪ್ರಕರಣಗಳು ದಾಖಲು

ಬೆಂಗಳೂರು, ಜ.03- ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2022ರಲ್ಲಿ ಒಟ್ಟಾರೆ 46187 ಪ್ರಕರಣಗಳು ದಾಖಲಾದರೆ 2023ನೇ ಸಾಲಿನಲ್ಲಿ 68518 ಅಪರಾಧ ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ಅಪರಾಧ ಪ್ರಕರಣಗಳು ಹೆಚ್ಚಾಗಿವೆ.

ಸಾರ್ವಜನಿಕ ನಿರ್ಭೀತಿ ಮತ್ತು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸುವ ಬಗ್ಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸಲಾಗಿದೆ. ಅಲ್ಲದೆ, ಕಂಟ್ರೋಲ್ ರೂಂ 112ಕ್ಕೆ ಬರುವ ಕರೆಗಳನ್ನು ಸಹ ದೂರುಗಳನ್ನಾಗಿ ಪರಿವರ್ತಿಸಿ ಪ್ರಕರಣ ದಾಖಲು ಮಾಡಿಕೊಂಡರೆ, ಇ-ಎಫ್‍ಐಆರ್ ವ್ಯವಸ್ಥೆಯನ್ನು ಸಾರ್ವಜನಿಕರಿಗೆ ರೂಪಿಸಲಾಗಿರುವುದರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿ ದಾಖಲಾಗಲು ಕಾರಣವಾಗಿವೆ.

ಮಾದಕ ವಸ್ತುಗಳ ವಿರುದ್ಧ ಕ್ರಮ: ನಗರಾದ್ಯಂತ ನಿಷೇಧಿತ ಮಾದಕ ವಸ್ತುಗಳನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಸಾಲಿನಲ್ಲಿ 3433 ಪ್ರಕರಣಗಳನ್ನು ದಾಖಲಿಸಿ 103.21 ಕೋಟಿ ರೂ. ಮೌಲ್ಯದ 5387 ಕೆಜಿ ನಿಷೇತ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು 4399 ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಪೈಕಿ 99 ವಿದೇಶಿ ಪ್ರಜೆಗಳು ಒಳಗೊಂಡಿರುತ್ತಾರೆ.

ಆಸ್ತಿ ಜಪ್ತಿ: ಸಿಸಿಬಿ ಪೊಲೀಸರು ಪಿಟ್ ಎನ್‍ಡಿಪಿಎಸ್ ಕಾಯ್ದೆಯಡಿಯಲ್ಲಿ ಆರೋಪಿಯೊಬ್ಬನ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಮಾದಕ ವಸ್ತುಗಳ ಮಾರಾಟ ಜಾಲದಲ್ಲಿ ತೊಡಗಿದ್ದ ಮತ್ತೊಬ್ಬ ಆರೋಪಿಯ ಆಸ್ತಿ ಜಪ್ತಿಗೆ ಕ್ರಮ ವಹಿಸಲಾಗಿದೆ. ಕಳೆದ ಸಾಲಿನಲ್ಲಿ ಒಟ್ಟು 111 ಕೋಟಿ ರೂ. ಮೌಲ್ಯದ 6425 ಕೆಜಿ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ.

ವಿದೇಶಿಯರ ಗಡಿಪಾರು: ನಗರದಲ್ಲಿ ವಾಸವಾಗಿದ್ದುಕೊಂಡು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದ ವಿದೇಶಿಯರ ವಿರುದ್ಧ 92 ಪ್ರಕರಣಗಳನ್ನು ದಾಖಲಿಸಿ 126 ಮಂದಿಯನ್ನು ಬಂಧಿಸಿ, 247 ವಿದೇಶಿಯರನ್ನು ಗಡಿಪಾರು ಮಾಡಲಾಗಿರುತ್ತದೆ.

ರಾಮಮಂದಿರಕ್ಕೆ ಬಿಗಿ ಭದ್ರತೆಗೆ ವಿಶೇಷ ಪೊಲೀಸ್ ಪಡೆ ನಿಯೋಜನೆ

ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣ: ಮಟ್ಕ-83 ಪ್ರಕರಣ 149 ಮಂದಿ ಬಂಧನ, ಜೂಜು- 231 ಪ್ರಕರಣ 2593 ಮಂದಿ ಬಂಧನ. ಕ್ರಿಕೆಟ್ ಬೆಟ್ಟಿಂಗ್- 147 ಪ್ರಕರಣದಲ್ಲಿ 229 ಬಂಧನ. ಆನ್‍ಲೈನ್ ಬೆಟ್ಟಿಂಗ್-1 ಪ್ರಕರಣ ಒಬ್ಬನ ಬಂಧನ, ಇತರೆ ಬೆಟ್ಟಿಂಗ್-19 ಪ್ರಕರಣ 44 ಮಂದಿ ಬಂಧನ, ಲಿಕ್ಕರ್-193 ಪ್ರಕರಣ 197 ಮಂದಿ ಬಂಧನ ಸೇರಿದಂತೆ ಅನಧಿಕೃತ ಕ್ಲಬ್‍ಗಳು, ಕಾಪಿರೇಟ್ ಕಾಯ್ದೆ, ಕೋಪ್ಟ ಕಾಯ್ದೆ, ಎನ್‍ಡಿಪಿಎಸ್ ಪ್ರಕರಣಗಳು ಸೇರಿದಂತೆ ಒಟ್ಟಾರೆ 5994 ಪ್ರಕರಣಗಳಲ್ಲಿ 9414 ಮಂದಿಯನ್ನು ಬಂಧಿಸಲಾಗಿದೆ.

45 ಆರೋಪಿಗಳ ಗಡಿಪಾರು:
ಮುಂಜಾಗ್ರತ ಕ್ರಮದ ಅಡಿಯಲ್ಲಿ ಒಟ್ಟು 4799 ಪಿಎಆರ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಮುಚ್ಚಳಿಕೆ ಉಲ್ಲಂಘನೆ ಮಾಡಿದ 30 ವ್ಯಕ್ತಿಗಳ ವಿರುದ್ಧ ಬಾಂಡ್ ಮೌಲ್ಯದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 10 ಮಂದಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು, 45 ಆರೋಪಿಗಳನ್ನು ಗಡಿಪಾರು ಮಾಡಲಾಗಿರುತ್ತದೆ.

ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆ:
ನ್ಯಾಯಾಲಯದಲ್ಲಿ ಎಲ್‍ಪಿಆರ್ ಪ್ರಕರಣಗಳಿದ್ದು, ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ 99 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಸಾಲಿನಲ್ಲಿ 77 ಆರೋಪಿಗಳನ್ನು ಪತ್ತೆ ಮಾಡಿ 174ಎ ಐಪಿಸಿ ಅಡಿಯಲ್ಲಿ ಹಾಗೂ 212 ಆರೋಪಿಗಳನ್ನು ಪತ್ತೆ ಮಾಡಿ 229ಎ ಐಪಿಸಿ ಪ್ರಕರಣದಲ್ಲಿ ಬಂಧಿಸಿ ಕಾನೂನು ಕ್ರಮ ಜರುಗಿಸ ಲಾಗಿದೆ.

ರೌಡಿಗಳ ವಿರುದ್ಧ ಕ್ರಮ:
ಮುಂಜಾಗ್ರತ ಕ್ರಮದ ಅಡಿಯಲ್ಲಿ ರೌಡಿಗಳ ವಿರುದ್ಧ ಒಟ್ಟು 4020 ಪಿಎಆರ್ ಪ್ರಕರಣಗಳನ್ನು ದಾಖಲಿಸಿ 229ಎ ಐಪಿಸಿ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, 14 ಮಂದಿ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಜರುಗಿಸಲಾಗುತ್ತದೆ. ತಲೆಮರೆಸಿಕೊಂಡಿರುವ ರೌಡಿಗಳ ಪೈಕಿ 324 ರೌಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗಿದೆ.

ಶಿಕ್ಷೆಗಳ ವಿವರ:
ಒಟ್ಟಾರೆ 21428 ಪ್ರಕರಣಗಳು ವಿಚಾರಣೆ ಪೂರೈಸಿ 15229 ಪ್ರಕರಣಗಳು ಶಿಕ್ಷೆಗೆ ನ್ಯಾಯಾಲಯವು ಆದೇಶಿಸಿರುತ್ತದೆ. 48 ಪ್ರಕರಣಗಳಲ್ಲಿ 65 ಜನ ಆರೋಪಿಗಳಿಗೆ 14 ವರ್ಷ ಜೀವಾವ ಶಿಕ್ಷೆ ವಿಧಿಸಲಾಗಿದೆ.
11 ಪ್ರಕರಣಗಳಲ್ಲಿ 21 ಆರೋಪಿಗಳಿಗೆ 10ರಿಂದ 14 ವರ್ಷ ಶಿಕ್ಷೆ, 18 ಪ್ರಕರಣಗಳಲ್ಲಿ 19 ಮಂದಿಗೆ 7ರಿಂದ 10 ವರ್ಷ ಶಿಕ್ಷೆ, 28 ಪ್ರಕರಣಗಳಲ್ಲಿ 30 ಮಂದಿಗೆ 3ರಿಂದ 7 ವರ್ಷ ಶಿಕ್ಷೆ, 56 ಪ್ರಕರಣಗಳಲ್ಲಿ 68 ಮಂದಿಗೆ 1ರಿಂದ 3 ವರ್ಷ ಶಿಕ್ಷೆ, 41 ಪ್ರಕರಣಗಳಲ್ಲಿ 46 ಮಂದಿಗೆ ಒಂದು ವರ್ಷಕ್ಕಿಂತ ಕೆಳಪಟ್ಟು ಶಿಕ್ಷೆ ವಿಧಿಸಲಾಗಿದೆ.
15026 ಪ್ರಕರಣಗಳಲ್ಲಿ 16817 ಆರೋಪಿಗಳಿಗೆ ದಂಡ ಶುಲ್ಕ ವಿಧಿಸಲಾಗಿದೆ. ಕಳೆದ ಸಾಲಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಚುನಾವಣಾ ಬಂದೋಬಸ್ತ್, ಎಲ್ಲಾ ಧರ್ಮಗಳ ಹಬ್ಬಗಳು, ರಾಷ್ಟ್ರೀಯ ಹಬ್ಬಗಳು, ಜಾತ್ರೆ ಮತ್ತು ಮೆರವಣಿಗೆ, ಪಂಜಾಗಳನ್ನು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿರುತ್ತದೆ.

ಎನ್‍ಡಿಪಿಎಸ್ ಪ್ರಕರಣಗಳು:
ವಿವಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಏ. 09ರಂದು ನೈಜೀರಿಯಾ ದೇಶದ ಇಬ್ಬರು ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ ಸುಮಾರು 7 ಕೋಟಿ ಮೊತ್ತದ 2 ಕೆಜಿ 997 ಗ್ರಾಂ ತೂಕದ ಕೊಕೈನ್, ಎಂಡಿಎಂಎ ಮತ್ತು ಎಕ್ಸ್‍ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಸಿಬಿ ಪೊಲೀಸರು ಜೂನ್ 22ರಂದು ಮೂವರು ಅಂತರ್ ರಾಜ್ಯ ಡ್ರಗ್ ಪೆಡ್ಲರ್‍ಗಳನ್ನು ಬಂಧಿಸಿ ಸುಮಾರು 11.44 ಕೋಟಿ ರೂ. ಮೌಲ್ಯದ 1438 ಕೆಜಿ ತೂಕದ ಮಾದಕ ವಸ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ನ. 5ರಂದು ಸಿಸಿಬಿ ಪೊಲೀಸರು ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೈಜೀರಿಯಾ ದೇಶದ ಪ್ರಜೆಯನ್ನು ಬಂಧಿಸಿ ಸುಮಾರು 10 ಕೋಟಿ ರೂ. ಬೆಲೆ ಬಾಳುವ ಎಂಡಿಎಂಎ, ಸೋಡಿಯಂ ಹೈಡ್ರಾಕ್ಸೈಡ್, ಹೈಡ್ರೋಕ್ಲೋರಿಕ್ ಆಸಿಡ್ ಮತ್ತು ಅಸೆಟಾಲ್‍ನ್ನು ವಶಪಡಿಸಿಕೊಂಡಿದ್ದಾರೆ.

ಇತರೆ ಪ್ರಕರಣಗಳು:
ಸಾಹಿತಿಗಳಿಗೆ ಬೆದರಿಕೆ ಹಾಕಿರುವ ಪ್ರಕರಣವನ್ನು ಬೇಧಿಸಿ ಆರೋಪಿಗಳನ್ನು ಬಂಧಿಸಲಾಗಿದೆ, ಹೆಣ್ಣು ಭ್ರೂಣಲಿಂಗ ಪತ್ತೆ ಮಾಡಿ ಗರ್ಭಪಾತ ಮಾಡುತ್ತಿದ್ದ ಜಾಲವನ್ನು ಭೇದಿಸಿ ವೈದ್ಯರು, ಸಹಚರರು, ಏಜೆಂಟ್‍ಗಳು ಹಾಗೂ ಲ್ಯಾಬ್ ಟೆಕ್ನಿಷಿಯನ್ ರನ್ನು ಬಂಸುವಲ್ಲಿ ಬೈಯ್ಯಪ್ಪನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿಸಿಬಿ ಪೊಲೀಸರು ಮಕ್ಕಳ ಮಾರಾಟ ಜಾಲವನ್ನು ಪತ್ತೆ ಮಾಡಿ ಮಕ್ಕಳ ಕಳ್ಳ ಸಾಗಣೆ ಮಾಡುತ್ತಿದ್ದ ಅಂತರ್ ರಾಜ್ಯ ಜಾಲವನ್ನು ಭೇದಿಸಿ ತಮಿಳು ನಾಡು ಮೂಲದ ಮಹಿಳೆ ಸೇರಿದಂತೆ ಒಟ್ಟು 8 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯ ಮೂಗು ಕತ್ತರಿಸಿದ ದುಷ್ಕರ್ಮಿ

ಬ್ಯಾಂಕ್ ಖಾತೆ ತೆರೆದು ಸಾಮಾಜಿಕ ಜಾಲತಾಣಗಳಾದ ವಾಟ್ಸ್‍ಪ್ ಮತ್ತು ಟೆಲಿಗ್ರಾಂ ಆಪ್‍ಗಳ ಮೂಲಕ ಹಣವನ್ನು ಹೂಡಿಕೆ ಮಾಡಿಸಿ ಜನರಿಗೆ ಕೋಟ್ಯಾಂತರ ರೂ. ವಂಚಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು ದೇಶಾದ್ಯಂತ 5013 ಮಂದಿಯಿಂದ ಸುಮಾರು 854 ಕೋಟಿ ರೂ. ಹಣವನ್ನು ವಂಚನೆ ಮಾಡಿದ್ದು, ಆರು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಲೋಕಸ್ಪಂದನ/ ಕ್ಯೂಆರ್ ಕೋಡ್: ಠಾಣಾ ಮಟ್ಟದಲ್ಲಿ ಪೊಲೀಸ್ ಸೇವೆಯಲ್ಲಿ ಲೋಪದೋಷವನ್ನು ಗುರುತಿಸಲು, ಭ್ರಷ್ಟಾಚಾರ ತಡೆಗಟ್ಟಲು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಲೋಕಸ್ಪಂದನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಸೈಬರ್ ಅಪರಾಧ ಪ್ರಕರಣಗಳ ಜಾಗೃತಿ: ಸೈಬರ್ ಅಪರಾಧ ಪ್ರಕರಣಗಳ ಜಾಗೃತಿ ಕುರಿತಂತೆ ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸೈಬರ್ ಟಿಪ್ ಆಫ್ ದಿ ಡೇ ಹಾಗೂ ಪಾತಾಳ ಗರಡಿ ಮುಂತಾದ ಕಾರ್ಯಕ್ರಮವನ್ನು ನಡೆಸಲಾಗಿದೆ.

RELATED ARTICLES

Latest News