ಬೆಂಗಳೂರು,ಆ.6- 2013ರ ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಪತ್ನಿಯ ಆಸ್ತಿ ಉಲ್ಲೇಖ ಮಾಡದೆ ತಪ್ಪು ಮಾಹಿತಿ ನೀಡುತ್ತೀರಿ. ನಂತರ 2018ರಲ್ಲಿ ಅದರ ಮಾರುಕಟ್ಟೆ ಮೌಲ್ಯ ರೂ 25 ಲಕ್ಷ ಎಂದು ನಮೂದಿಸಿದ್ದೀರಿ. 5 ವರ್ಷಗಳಾದ ಮೇಲೆ ದಿಢೀರನೆ ಆಸ್ತಿ ಹೊಂದಿರುವ ಬಗ್ಗೆ ಜ್ಞಾನೋದಯವಾಯಿತಾ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನೆ ಎಸೆದಿದ್ದಾರೆ.
ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಿದ್ದರಾಮಯ್ಯ ಅವರಿಗೆ ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿರುವ ಆಶೋಕ್ ಅವರು, ಹಗರಣ ಬೆಳಕಿಗೆ ಬಂದ ಮೇಲೆ 63 ಕೋಟಿ ಕೊಡಿ ಸೈಟು ಬಿಟ್ಟುಕೊಡುತ್ತೇನೆ ಎಂದು ಹೇಳುತ್ತೀರಿ. 2018ರಲ್ಲಿ ರೂ 25 ಲಕ್ಷ ಇದ್ದ ಆಸ್ತಿ ಮೌಲ್ಯ, 2024ರಲ್ಲಿ ರೂ 63 ಕೋಟಿ ಆಗಲು ಹೇಗೆ ಸಾಧ್ಯ? ಇದೇನಾದರೂ ರಾಹುಲ್ ಗಾಂಧಿ ಅವರ ಆಲೂಗಡ್ಡೆ ಹಾಕಿ ಚಿನ್ನ ತೆಗೆಯುವ ಯೋಜನೆಯ ಭಾಗವಾ? ಎಂದು ವ್ಯಂಗ್ಯವಾಡಿದ್ದಾರೆ.
50:50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಕೊಡುವುದು ಬೇಡ ಎಂದು ನಗರಾಭಿವೃದ್ಧಿ ಇಲಾಖೆ ಆದೇಶವಿದ್ದರೂ ಅದನ್ನ ಉಲ್ಲಂಸಿ ಮೂಡಾ ಅಧ್ಯಕ್ಷ ಮರಿಗೌಡ ಅವರು ಹಗರಣದ ಬಾಗಿಲನ್ನು ತೆಗೆದಿದ್ದು ಏಕೆ? ಇದರ ಹಿಂದೆ ಯಾವ ಪ್ರಭಾವಿ ಶಕ್ತಿ ಕೆಲಸ ಮಾಡುತ್ತಿತ್ತು? ಉತ್ತರ_ ಕೊಡಿ_ಸಿದ್ದರಾಮಯ್ಯ ಎಂದು ಆಗ್ರಹಿಸಿದ್ದಾರೆ.
ಆತಹತ್ಯೆಗೆ ಶರಣಾದ ವಾಲೀಕಿ ಅಭಿವೃದ್ಧಿ ನಿಗಮದ ಪ್ರಾಮಾಣಿಕ ದಲಿತ ಅಧಿಕಾರಿ ಚಂದ್ರಶೇಖರನ್ ಅವರು ತಮ ಡೆತ್ ನೋಟ್ ನಲ್ಲಿ ಸಚಿವ ನಾಗೇಂದ್ರ ಅವರ ಮೌಖಿಕ ಆದೇಶದಂತೆ ಅವ್ಯವಹಾರ ನಡೆದಿದೆ ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದರೂ, ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸವರಾಜ ದದ್ದಲ್ ಹೆಸರನ್ನು ನಮೂದಿಸಿಲ್ಲದಿರುವುದು ಎಸ್‌ಐಟಿ ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ ಎಂದು ಸರ್ಕಾರದ ವಿರುದ್ದ ವಾಗ್ದಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ದದ್ದಲ್ ಅವರ ಹೆಸರನ್ನು ನಮೂದಿಸಿದರೆ ಅವರು ತಮ ಹೆಸರು ಬಾಯಿ ಬಿಡುತ್ತಾರೆ ಎಂಬ ಭಯವೇ? ಅಥವಾ ಈ ಹಗರಣವನ್ನ ಶಾಶ್ವತವಾಗಿ ಮುಚ್ಚಿಹಾಕುವ ಹುನ್ನಾರವೇ? ಎಂದು ಆಶೋಕ್ ಪ್ರಶ್ನೆ ಮಾಡಿದ್ದಾರೆ.