Thursday, May 2, 2024
Homeರಾಜ್ಯಒಂದೇ ಸ್ವತ್ತಿಗೆ 22 ಬ್ಯಾಂಕುಗಳಲ್ಲಿ ಸಾಲ ಪಡೆದ ಕುಟುಂಬ

ಒಂದೇ ಸ್ವತ್ತಿಗೆ 22 ಬ್ಯಾಂಕುಗಳಲ್ಲಿ ಸಾಲ ಪಡೆದ ಕುಟುಂಬ

ಬೆಂಗಳೂರು,ಏ.19- ಒಂದೇ ಸ್ವತ್ತಿಗೆ ವಿವಿಧ ರೀತಿಯ ನಕಲಿ ದಾಖಲೆ ಸೃಷ್ಟಿಸಿ ಸುಮಾರು 22 ಬ್ಯಾಂಕ್ಗಳಿಗೆ 10 ಕೋಟಿ ರೂ. ವಂಚಿಸಿರುವ ಒಂದೇ ಕುಟುಂಬದ ಐದು ವ್ಯಕ್ತಿಗಳು ಸೇರಿದಂತೆ ಆರು ಮಂದಿಯನ್ನು ಬಂಸುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.ಈ ವಂಚನೆ ಪ್ರಕರಣದಲ್ಲಿ ನಾಗೇಶ್ ಭಾರದ್ವಾಜ್, ಈತನ ಪತ್ನಿ ಸುಮಾ, ಮೂವರು ಸಂಬಂಕರಾದ ಶೋಭಾ, ಈಕೆಯ ಪತಿ ಶೇಷಗಿರಿ, ಭಾವಮೈದುನ ಸತೀಶ್ ಹಾಗೂ ಸ್ನೇಹಿತೆ ವೇದಾಳನ್ನು ಬಂಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಯನಗರ ಮೂರನೇ ಬ್ಲಾಕ್ನಲ್ಲಿರುವ ಕೋ ಆಪರೇಟಿವ್ ಬ್ಯಾಂಕೊಂದರ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಈ ವಂಚಕರನ್ನು ಬಂಸಲಾಗಿದೆ.ತಮ್ಮ ಬ್ಯಾಂಕ್ನಲ್ಲಿ ಖಾತೆದಾರರಾಗಿರುವ ಪತಿ, ಪತ್ನಿಯರು ಬೇಗೂರು ಗ್ರಾಮದಲ್ಲಿರುವ 2,100 ಅಡಿ ಉದ್ದಳತೆಯ ಜಾಗದಲ್ಲಿ ಕಟ್ಟಡ ಇರುವುದಾಗಿ ಅದನ್ನು ಅಡಮಾನವಾಗಿಟ್ಟುಕೊಂಡು ಕಂತು ಸಾಲ ಮತ್ತು ಯಂತ್ರೋಪಕರಣ ಸಾಲವೆಂದು 1.30 ಕೋಟಿ ರೂ. ಸಾಲ ನೀಡುವಂತೆ ಮನವಿ ಮಾಡಿಕೊಂಡಿದ್ದರು.

ಆದರೆ ಕಟ್ಟಡಕ್ಕೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆದಿರುವುದರ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಕಳೆದ 2022 ರ ಡಿಸೆಂಬರ್ನಲ್ಲಿ ಜಯನಗರ ಪೊಲೀಸರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ವಂಚಕ ಮಹಿಳೆಯ ಪತಿಯನ್ನು ಮಾರ್ಚ್ 2024 ರಲ್ಲಿ ಬಂಧಿಸಿ ವಿಚಾರಣೆಗೊಳಪಡಿಸಿ ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿತ್ತು. ಆತನನ್ನು ಸುದೀರ್ಘ ವಿಚಾರಣೆ ನಡೆಸಿದಾಗ ಈ ಕೃತ್ಯದಲ್ಲಿ ಆತನ ಪತ್ನಿ, ಪತ್ನಿಯ ತಮ್ಮ, ಅಕ್ಕ, ಭಾವ ಹಾಗೂ ಸ್ನೇಹಿತೆ ಇರುವುದಾಗಿ ತಿಳಿಸಿದ್ದಾನೆ.

ನಾವೆಲ್ಲಾ ನಮ್ಮ ಹೆಸರಿನಲ್ಲಿದ್ದ ಕಟ್ಟಡಕ್ಕೆ ವಿವಿಧ ಸರ್ವೆ ನಂಬರ್, ಸೈಟ್ ನಂಬರ್ಗಳನ್ನು ನಮೂದಿಸುವುದರ ಜೊತೆಗೆ ಸೈಟ್ ಉದ್ದಳತೆಯಲ್ಲೂ ಬದಲಾವಣೆ ಮಾಡಿ ನಕಲಿ ಡೀಡ್ ಮುಖಾಂತರ ರಿಜಿಸ್ಟರ್ ಮಾಡಿಸಿಕೊಂಡು ವಿವಿಧ ಬ್ಯಾಂಕುಗಳಿಗೆ ವಂಚಿಸಿರುವುದಾಗಿ ಬಾಯಿ ಬಿಟ್ಟಿದ್ದಾನೆ.

ಇದೇ ರೀತಿ ಆರೋಪಿಗಳು ಕಂತು ಸಾಲ ಮತ್ತು ಯಂತ್ರೋಪಕರಣದ ಸಾಲವೆಂದು ನಗರದ ವಿವಿಧ 22 ಬ್ಯಾಂಕುಗಳಿಂದ ಸುಮಾರು 10 ಕೋಟಿ ರೂ. ಸಾಲ ಪಡೆದು ವಂಚಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಆರೋಪಿ ನೀಡಿದ ಮಾಹಿತಿ ಮೇರೆಗೆ ಆತನ ಪತ್ನಿ ಸೇರಿದಂತೆ ಐದು ಮಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಎಲ್ಲರನ್ನೂ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದರು.

ವಿವಿಧ ಬ್ಯಾಂಕುಗಳಿಗೆ 10 ಕೋಟಿ ರೂ. ವಂಚಿಸಿರುವ ವಂಚಕರನ್ನು ಬಂಸುವಲ್ಲಿ ಯಶಸ್ವಿಯಾಗಿರುವ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬರಮಪ್ಪ ಜಗಲಾಸರ್, ಎಸಿಪಿ ನಾರಾಯಣ ಸ್ವಾಮಿ, ಜಯನಗರ ಇನ್ಸ್ಪೆಕ್ಟರ್ ಮತ್ತವರ ತಂಡ ಕಾರ್ಯಕ್ಕೆ ಆಯುಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

Latest News