Friday, May 24, 2024
Homeರಾಜಕೀಯಕಾಂಗ್ರೆಸ್‌ಗೆ ಸದ್ಯದಲ್ಲೇ 'ಖಾಲಿ ಚೊಂಬು' ಗ್ಯಾರಂಟಿ

ಕಾಂಗ್ರೆಸ್‌ಗೆ ಸದ್ಯದಲ್ಲೇ ‘ಖಾಲಿ ಚೊಂಬು’ ಗ್ಯಾರಂಟಿ

ಬೆಂಗಳೂರು,ಏ.19- ದೇಶದಲ್ಲಿ ಕಾಣದ ಕೈ ಸ್ಥಿತಿ ತಲುಪುತ್ತಿರುವ ನಿಮಗೆ ಕೆಲವೇ ದಿನಗಳಲ್ಲಿ ಜನರೇ ನೀಡಲಿದ್ದಾರೆ ಖಾಲಿ ಚೊಂಬು ಎಂದು ಬಿಜೆಪಿ ರಾಜ್ಯ ಸರ್ಕಾರದ ವಿರುದ್ದ ತೀವ್ರ ವಾಗ್ದಳಿ ನಡೆಸಿದೆ.

ಈ ಕುರಿತು ತನ್ನ ಆಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸರ್ಕಾರದ ಜಾಹೀರಾತಿನ ವಿರುದ್ದ ಬೆಂಕಿಕಾರಿರುವ ಬಿಜೆಪಿ, ಕಾಂಗ್ರಸ್ಸಿಗರೇ, ತಮಿಳುನಾಡಿಗೆ ನೀರು ಬಿಟ್ಟು ಕಾವೇರಿ ಮಾತೆಯ ತುಂಬಿದ ಕೊಡ ಬರಿದು ಮಾಡಿ ಕನ್ನಡಿಗರಿಗೆ ಖಾಲಿ ಚೊಂಬು ಕೊಟ್ಟವರು ನೀವು. ಬೆಳೆ ಒಣಗಿಸಿ ರೈತರಿಗೆ ಚೊಂಬು ಕೊಟ್ಟವರು ನೀವು ಎಂದು ತಿರುಗೇಟು ನೀಡಿದೆ.

ಇದ್ದಬದ್ದ ಹಣವನ್ನೆಲ್ಲ ಖಾಲಿ ಮಾಡಿಕೊಂಡು ಪರಿಶಿಷ್ಟರ/ ಹಿಂದುಳಿದವರ ಕಲ್ಯಾಣಕ್ಕೆ ಮೀಸಲಾದ ಹಣವನ್ನೂ ವರ್ಗಾಯಿಸಿಕೊಂಡು ಶೋಷಿತರಿಗೆ ಚೊಂಬು ಕೊಟ್ಟವರು ನೀವು. ಕುಡಿಯುವ ನೀರೂ ಒದಗಿಸಲಾರದೇ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಅಲೆದಾಡುವ ಸ್ಥಿತಿ ತಂದವರು ನೀವು.

ನಿರುದ್ಯೋಗಿಗಳಿಗೆ ಯುವನಿ ಹೆಸರಲ್ಲಿ ಖಾಲಿ ಚೊಂಬು ಕೊಟ್ಟವರು ನೀವು ಎಂದು
ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ತಿರುಗೇಟು ಕೊಟ್ಟಿದೆ.

RELATED ARTICLES

Latest News