Saturday, December 14, 2024
Homeಜಿಲ್ಲಾ ಸುದ್ದಿಗಳು | District News4 ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದ ನವದಂಪತಿ ಆತಹತ್ಯೆ

4 ತಿಂಗಳ ಹಿಂದೆಯಷ್ಟೇ ಪ್ರೀತಿಸಿ ವಿವಾಹವಾಗಿದ್ದ ನವದಂಪತಿ ಆತಹತ್ಯೆ

ವಿಜಯಪುರ, ಮೇ 15- ಪ್ರೀತಿಸಿ ವಿವಾಹವಾಗಿದ್ದ ನವ ದಂಪತಿ ಆತಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಿಜಯಪುರ ಹೊರಭಾಗದ ಸಿದ್ದೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದ ಮನೋಜ್ ಕುಮಾರ್ ಪೋಳ (30) ಹಾಗೂ ರಾಖಿ (23) ಮೃತರಾದ ನವವಿವಾಹಿತರು.

ನಾಲ್ಕು ತಿಂಗಳ ಹಿಂದೆಯಷ್ಟೇ ಇವರಿಗೆ ವಿವಾಹವಾಗಿದ್ದು, ಅನ್ಯೋನ್ಯವಾಗಿದ್ದರು ಎನ್ನಲಾಗಿದೆ.ಮನೋಜ್ ಕುಮಾರ್ ಅವರ ತಾಯಿ ಭಾರತಿ ಅವರು ಮಗಳನ್ನು ನೋಡಲು ಊರಿಗೆ ತೆರಳಿದ್ದರು.ಹಾಗಾಗಿ ಮನೋಜ್ ಕುಮಾರ್ ಹಾಗೂ ರಾಖಿ ಇಬ್ಬರೇ ಮನೆಯಲ್ಲಿದ್ದರು. ರಾತ್ರಿ ಊಟ ಮಾಡಿದ ಬಳಿಕ ಇಬರಿಬ್ಬರೂ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ಊರಿನಿಂದ ಮನೆಗೆ ಬಂದ ಭಾರತಿ ಅವರು ಬಾಗಿಲು ತೆರೆದಿರುವುದು ಗಮನಿಸಿ ಒಳಗೆ ಹೋದಾಗಲೇ ಮಗ-ಸೊಸೆ ಆತಹತ್ಯೆ ಮಾಡಿಕೊಂಡಿರುವುದು ಕಂಡು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.ಆತ್ಯಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಸುದ್ದಿ ತಿಳಿದು ಜಲನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News