Thursday, September 19, 2024
Homeಮನರಂಜನೆರಜನಿಯದ ಕೂಲಿ ಚಿತ್ರದಲ್ಲಿ ಅಮೀರ್‌ಖಾನ್!

ರಜನಿಯದ ಕೂಲಿ ಚಿತ್ರದಲ್ಲಿ ಅಮೀರ್‌ಖಾನ್!

Aamir Khan may reunite with Rajinikanth after 30 years with a cameo in Coolie

ನವದೆಹಲಿ,ಆ.29- ಬರೊಬ್ಬರಿ 30 ವರ್ಷಗಳ ನಂತರ ಇಬ್ಬರು ದಿಗ್ಗಜ ನಟರಾದ ಸ್ಟೈಲ್‌ಕಿಂಗ್‌ ರಜನಿಕಾಂತ್‌ ಹಾಗೂ ಅಮೀರ್‌ಖಾನ್‌ ಒಟ್ಟಿಗೆ ನಟಿಸುತ್ತಿದ್ದಾರೆ.1995ರಲ್ಲಿ ಅಮೀರ್‌ ಮತ್ತು ರಜನಿಕಾಂತ್‌ ಅವರು ಆತಂಕ್‌ ಹೀ ಆತಂಕ್‌ ಸಿನಿಮಾದಲ್ಲಿ ಒಟ್ಟಾಗಿ ನಟಿಸಿ ಗಮನ ಸೆಳೆದಿದ್ದರು.

ಇದೀಗ 30 ವರ್ಷಗಳ ನಂತರ ಮತ್ತೆ ಈ ಜೋಡಿ ಒಟ್ಟಾಗಿ ಪರದೆ ಮೇಲೆ ಕಾಣಿಸಿಕೊಳ್ಳಲು ಸಿದ್ದರಾಗುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಜೋಡಿ ಮತ್ತೊಮೆ ಲೋಕೇಶ್‌ ಕನಕರಾಜ್‌ ಅವರ ನಿರ್ಮಾಣದ ಆಕ್ಷನ್‌ -ಥ್ರಿಲ್ಲರ್‌ ಕೂಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕೂಲಿ ಚಿತ್ರದಲ್ಲಿ ಅಮೀರ್‌ ಖಾನ್‌ ಅವರು ಪ್ರಮುಖ ಪಾತ್ರದ ಬದಲು ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.
ಕೂಲಿ ನಂತರ ಭವಿಷ್ಯದ ಯೋಜನೆಯಲ್ಲಿ ಅಮೀರ್‌ ಅವರನ್ನು ನಿರ್ದೇಶಿಸುವ ಮೂಲಕ ಲೋಕೇಶ್‌ ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದಾಗ್ಯೂ, ಈ ವರದಿಗಳ ಬಗ್ಗೆ ನಿರ್ಮಾಪಕರು ಅಥವಾ ನಟರಿಂದ ಯಾವುದೇ ಅಧಿಕತ ಮಾಹಿತಿ ಹೊರಬಿದ್ದಿಲ್ಲ.

ತಮಿಳು ಚಿತ್ರರಂಗದ ಖ್ಯಾತ ನಟರಾಗಿರುವ ರಜನಿ ಅವರು ಬಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದು ಉತ್ತರ ಭಾರತದಲ್ಲೂ ಅಪಾರ ಪ್ರಮಾಣದ ಅಭಿಮಾನಿ ಸಮೂಹ ಹೊಂದಿದ್ದಾರೆ.

ಸದ್ಯ ರಜನಿಕಾಂತ್‌ ಕೂಲಿ ಚಿತ್ರೀಕರಣದಲ್ಲಿ ವೈಜಾಗ್‌ ನಲ್ಲಿದ್ದಾರೆ. ಅವರಲ್ಲದೆ, ಚಿತ್ರದಲ್ಲಿ ಶ್ರುತಿ ಹಾಸನ್‌‍, ಉಪೇಂದ್ರ, ಸತ್ಯರಾಜ್‌‍, ಸೌಬಿನ್‌ ಶಾಹಿರ್‌ ಮತ್ತು ಮಹೇಂದ್ರನ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ.

RELATED ARTICLES

Latest News