Saturday, July 27, 2024
Homeರಾಷ್ಟ್ರೀಯಜಮ್ಮು-ಕಾಶೀರದಲ್ಲಿ ಮತದಾನ ಪ್ರಮಾಣ ಏರಿಕೆ 370ನೇ ವಿಧಿ ರದ್ದತಿಯ ಫಲಿತಾಂಶಕ್ಕೆ ಸಾಕ್ಷಿ : ಶಾ

ಜಮ್ಮು-ಕಾಶೀರದಲ್ಲಿ ಮತದಾನ ಪ್ರಮಾಣ ಏರಿಕೆ 370ನೇ ವಿಧಿ ರದ್ದತಿಯ ಫಲಿತಾಂಶಕ್ಕೆ ಸಾಕ್ಷಿ : ಶಾ

ನವದೆಹಲಿ, ಮೇ 14- 370ನೇ ವಿಧಿಯನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರಮೋದಿ ಸರ್ಕಾರದ ನಿರ್ಧಾರವು, ಜಮ್ಮು ಕಾಶೀರದಲ್ಲಿ ಶೇಕಡಾವಾರು ಮತದಾನದಲ್ಲಿ ಫಲಿತಾಂಶವನ್ನು ತೋರಿಸುತ್ತಿದೆ. ಪ್ರಜಾಪ್ರಭುತ್ವದ ಮೇಲೆ ಜನರ ನಂಬಿಕೆಯನ್ನು ಹೆಚ್ಚಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

4ನೇ ಹಂತದ ಸಾರ್ವತ್ರಿಕ ಚುನಾವಣೆಯ ಮತದಾನ ನಡೆದ ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಶೇಕಡಾ 38ರಷ್ಟು ಮತದಾನವಾದ ಒಂದು ದಿನದ ನಂತರ ಗೃಹ ಸಚಿವರು ಇಂದು ಈ ಹೇಳಿಕೆ ನೀಡಿದ್ದಾರೆ.

ಶ್ರೀನಗರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಶೇ.14.43, 2014ರಲ್ಲಿ ಶೇ.25.86, 2009ರಲ್ಲಿ ಶೇ.25.55 ಮತ್ತು 2004ರಲ್ಲಿ 18.57 ಶೇಕಡಾ ಮತದಾನವಾಗಿದೆ.

ಮೋದಿ ಸರ್ಕಾರದ 370ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವು ಮತದಾನದ ಶೇಕಡಾವಾರು ಫಲಿತಾಂಶಗಳನ್ನು ಹೆಚ್ಚಿಸಿದೆ. ಇದು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಹೆಚ್ಚಿಸಿದೆ ಮತ್ತು ಅದರ ಬೇರುಗಳು ಜಮು ಮತ್ತು ಕಾಶೀರದಲ್ಲಿ ಆಳವಾಗಿವೆ ಎಂದಿದ್ದಾರೆ.

ಮತದಾನದ ಶೇಕಡಾವಾರು ಹೆಚ್ಚಳದ ಮೂಲಕ ಜಮು ಮತ್ತು ಕಾಶೀರದ ಜನರು ಆರ್ಟಿಕಲ್‌ 370 ನಿಬಂಧನೆಗಳ ರದ್ದತಿಯನ್ನು ವಿರೋಧಿಸಿದವರಿಗೆ ತಕ್ಕ ಉತ್ತರ ನೀಡಲಾಗಿದೆ ಎಂದು ಹೇಳಿದ್ದಾರೆ.

ಮೋದಿ ಸರ್ಕಾರವು 2019ರಲ್ಲಿ ಜಮು ಮತ್ತು ಕಾಶೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ರದ್ದುಗೊಳಿಸಿತು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.

RELATED ARTICLES

Latest News