Saturday, February 24, 2024
Homeಮನರಂಜನೆಹಿರಿಯ ನಟಿ ಹೇಮಾಚೌಧರಿ ಆರೋಗ್ಯ ಗಂಭೀರ

ಹಿರಿಯ ನಟಿ ಹೇಮಾಚೌಧರಿ ಆರೋಗ್ಯ ಗಂಭೀರ

ಬೆಂಗಳೂರು,ಡಿ.20- ಖ್ಯಾತ ಹಿರಿಯ ಚಿತ್ರನಟಿ ಲೀಲಾವತಿ ಅವರನ್ನು ಕಳೆದುಕೊಂಡ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಟಿ ಹೇಮಾ ಚೌಧರಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಬ್ರೈನ್ ಹ್ಯಾಮರೇಜ್‍ನಿಂದ ಬಳಲುತ್ತಿರುವ ಹೇಮಾಚೌಧರಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಎರಡು ದಿನಗಳ ಹಿಂದೆ ಬ್ರೈನ್ ಹ್ಯಾಮರೇಜ್‍ಗೆ ಒಳಗಾಗಿದ್ದ ನಟಿಗೆ ಚಿಕಿತ್ಸೆ ನೀಡಲಾಗುತ್ತಿದ್ದರೂ ಅವರು ಸ್ಪಂದಿಸುತ್ತಿಲ್ಲ ಎಂದು ಬ್ಯಾಪ್ಟಿಸ್ಟ್ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಐರ್‍ಲ್ಯಾಂಡ್‍ನಲ್ಲಿ ನೆಲೆಸಿರುವ ಹೇಮಾ ಚೌಧರಿ ಅವರ ಮಗನ ಬರುವಿಕೆಗಾಗಿ ಕಾಯುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ನಟಿ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಮಾಡಿದ ನಾಲ್ವರನ್ನು ಪತ್ತೆ ಹಚ್ಚಿದ ಪೋಲೀಸರು

ಲೀಲಾವತಿ ಪುಣ್ಯ ತಿಥಿಯಲ್ಲಿ ಆರೋಗ್ಯವಾಗಿರೋ ರೀತಿ ಕಂಡು ಬಂದಿದ್ದ ನಟಿ ಹೇಮಾ ಚೌಧರಿ ಅವರು ದಿಢೀರ್ ಬ್ರೈನ್ ಹ್ಯಾಮರೇಜ್‍ಗೆ ಒಳಗಾಗಿದ್ದರು. ಲೀಲಾವತಿ ಪುಣ್ಯತಿಥಿ ದಿನದಲ್ಲಿ ಪಾಲ್ಗೊಂಡಿದ್ದ ಅವರು ಲೀಲಾವತಿ ಪುತ್ರ ವಿನೋದ್ ರಾಜ್ ಗೆ ಸಾಂತ್ವನ ಹೇಳಿ ತೆರಳಿದ್ದರು.

RELATED ARTICLES

Latest News