Thursday, November 21, 2024
Homeಅಂತಾರಾಷ್ಟ್ರೀಯ | Internationalತಾಲಿಬಾನ್ ಆಡಳಿತ ಅಫ್ಘಾನಿಸ್ತಾನದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿದೆಯಂತೆ..!

ತಾಲಿಬಾನ್ ಆಡಳಿತ ಅಫ್ಘಾನಿಸ್ತಾನದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿದೆಯಂತೆ..!

Afghanistan sees 30 pc drop in Criminal Cases: Interior Ministry

ಕಾಬೂಲ್,ಆ.29- ಅಫ್ಘಾನಿಸ್ತಾನದಲ್ಲಿ ಅಪರಾಧ ಪ್ರಮಾಣವು ಶೇ.30ರಷ್ಟು ಕಡಿಮೆಯಾಗಿದೆ ಎಂದು ತಾಲಿಬಾನ್ ಸರ್ಕಾರದ ಆತಂಕರಿಕ ಸಚಿವಾಲಯವು ಮಾಹಿತಿ ನೀಡಿದೆ.

ಸದಾ ರಕ್ತದೋಕುಳಿ ನೋಡುತ್ತಿದ್ದ ದೇಶದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎನ್ನುವ ಹೇಳಿಕೆಯು ಅಚ್ಚರಿಯನ್ನುಂಟುಮಾಡುತ್ತಿದೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಳ್ಳುವಾಗ ಸಾಕಷ್ಟು ಸಾವುಗಳಿಗೆ ಸಾಕ್ಷಿಯಾಗಿತ್ತು.

ದೇಶಾದ್ಯಂತ ಅಪರಾಧ ಪ್ರಮಾಣವು 30 ಪ್ರತಿಶತದಷ್ಟು ಕಡಿಮೆಯಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಗಮನಾರ್ಹವಾಗಿ ಸುಧಾರಿಸಿದೆ. ಸದಾ ರಕ್ತದೋಕುಳಿ ನೋಡುತ್ತಿದ್ದ ದೇಶದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎನ್ನುವ ಹೇಳಿಕೆಯು ಅಚ್ಚರಿಯನ್ನುಂಟುಮಾಡುತ್ತಿದೆ.

ಕಾಬೂಲ್ನಲ್ಲಿ ವಾರ್ಷಿಕ ವರದಿಯನ್ನು ಮಂಡಿಸಿದ ಉಪ ಆಂತರಿಕ ಸಚಿವ ಮೊಹಮದ್ ನಬಿ ಒಮರಿ, ದೇಶದ ಭದ್ರತಾ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ. ಹೆಚ್ಚಿದ ಭದ್ರತಾ ವ್ಯವಸ್ಥೆಗಳಿಂದಾಗಿ, ನಾಗರಿಕರು ಸುರಕ್ಷಿತವಾಗಿರಲು ಮತ್ತು ಪ್ರಾಂತ್ಯಗಳ ನಡುವೆ ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿದೆ.

ತಾಲಿಬಾನ್ ನಾಯಕ ಮುಲ್ಲಾ ಹಿಬತುಲ್ಲಾ ಅಖುಂದ್ಜಾದಾ ಅವರ ಆದೇಶಗಳು ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಅನುಗುಣವಾಗಿ ಸಚಿವಾಲಯದ ಚಟುವಟಿಕೆಗಳು ಈಗ ವ್ಯವಸ್ಥಿತವಾಗಿ ದೇಶವನ್ನು ಆಳುತ್ತಿವೆ ಎಂದು ಒಮರಿ ಹೇಳಿದರು.

ರಾಷ್ಟ್ರೀಯ ಭದ್ರತಾ ಪಡೆಗಳ ಅವಿರತ ಪ್ರಯತ್ನಕ್ಕೆ ದೇಶಾದ್ಯಂತ ಅಪರಾಧ ಪ್ರಮಾಣ ಶೇ.30ರಷ್ಟು ಕಡಿಮೆಯಾಗಿದೆ ಎಂದು ಸಚಿವರು ಹೇಳಿದರು. ಭದ್ರತೆಯನ್ನು ಮತ್ತಷ್ಟು ಬಲಪಡಿಸಲು, ರಾಷ್ಟ್ರೀಯ ಪೊಲೀಸ್ ತರಬೇತಿ ಕೇಂದ್ರಗಳನ್ನು ವತ್ತಿಪರಗೊಳಿಸಲು ಮತ್ತು ಸಜ್ಜುಗೊಳಿಸಲು ಸಚಿವಾಲಯವು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಪಹರಣ ಘಟನೆಗಳನ್ನು ಪರಿಹರಿಸಲು ಭದ್ರತಾ ಪಡೆಗಳು ನಡೆಸಿದ 250 ಕಾರ್ಯಾಚರಣೆಗಳಲ್ಲಿ 34 ಅಪಹರಣಕಾರರು ಸಾವನ್ನಪ್ಪಿದ್ದಾರೆ ಮತ್ತು 76 ಮಂದಿಯನ್ನು ಬಂಧಿಸಲಾಗಿದೆ ಎಂದು ಒಮರಿ ಮಾಹಿತಿ ನೀಡಿದರು.

ಕಳೆದ ವರ್ಷ, ಅಧಿಕಾರಿಗಳು 3,643 ಟನ್ ಡ್ರಗ್ಸ್ ವಶಪಡಿಸಿಕೊಂಡರು, 790 ಔಷಧ ಉತ್ಪಾದನೆ ಮತ್ತು ಸಂಸ್ಕರಣಾ ಸೌಲಭ್ಯಗಳನ್ನು ನಾಶಪಡಿಸಿದರು ಮತ್ತು 10,564 ಶಂಕಿತರನ್ನು ಬಂಧಿಸಿದ್ದಾರೆ ಎಂದು ಸಚಿವರು ಹೇಳಿದರು. ಹೆಚ್ಚುವರಿಯಾಗಿ, 27,891 ಮಾದಕ ವ್ಯಸನಿಗಳನ್ನು ಚಿಕಿತ್ಸಾ ಕೇಂದ್ರಗಳಿಗೆ ಕಳುಹಿಸಲಾಗಿದೆ ಮತ್ತು 17,651 ಹೆಕ್ಟೇರ್ ಭೂಮಿಯಿಂದ ಅಫೀಮು ಕಷಿಯನ್ನು ತೆಗೆದುಹಾಕಲಾಗಿದೆ.

1.95 ಮಿಲಿಯನ್ ಡಾಲರ್, 845,000 ಯುರೋಗಳು, 4.83 ಮಿಲಿಯನ್ ಸೌದಿ ರಿಯಾಲ್ಗಳು ಮತ್ತು 100,000 ದಿರ್ಹಮ್ಗಳು ಸೇರಿದಂತೆ ದೊಡ್ಡ ಪ್ರಮಾಣದ ವಿದೇಶಿ ಕರೆನ್ಸಿಯನ್ನು ವಿವಿಧ ವಿಮಾನ ನಿಲ್ದಾಣಗಳಿಂದ ವಶಪಡಿಸಿಕೊಳ್ಳಲಾಗಿದೆ ಹಾಗೂ ಅದನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದವರನ್ನು ಕಂಬಿ ಹಿಂದೆ ಹಾಕಲಾಗಿದೆ.

ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿಯೂ ಪ್ರಗತಿ ಸಾಧಿಸಲಾಗಿದೆ ಎಂದು ಅವರು ಹೇಳಿದರು. ಇದು ಪಾಸ್ಪೋರ್ಟ್ಗಳು ಮತ್ತು ಸಂಚಾರ ದಾಖಲೆಗಳನ್ನು ನೀಡುವುದು, ನೈಸರ್ಗಿಕ ವಿಕೋಪ ಸಂತ್ರಸ್ತರಿಗೆ ಸಹಾಯ ಮಾಡುವುದು, ಅಪರಾಧವನ್ನು ಕಡಿಮೆ ಮಾಡುವುದು ಮತ್ತು ಶಸಾ್ತ್ರಸ್ತ್ರಗಳು ಮತ್ತು ವಾಹನಗಳನ್ನು ಸಾಗಿಸುವುದನ್ನು ನಿಯಂತ್ರಿಸುವುದು ಇದರಲ್ಲಿ ಸೇರಿದೆಯಂತೆ.

RELATED ARTICLES

Latest News