Thursday, May 2, 2024
Homeರಾಷ್ಟ್ರೀಯಕೋಲ್ಕತಾಗೆ ಶೀಘ್ರರೈಲು ಸಂಪರ್ಕ : ಸಿಎಂ ಮಾಣಿಕ್ ಸಹಾ

ಕೋಲ್ಕತಾಗೆ ಶೀಘ್ರರೈಲು ಸಂಪರ್ಕ : ಸಿಎಂ ಮಾಣಿಕ್ ಸಹಾ

ಅಗರ್ತಲಾ, ಫೆ.4 : ಅಗರ್ತಲಾದಿಂದ ಬಾಂಗ್ಲಾದೇಶದ ಮೂಲಕ ಕೋಲ್ಕತ್ತಾಗೆ ರೈಲು ಸೇವೆಯನ್ನು ಆರಂಭವಾಗಲಿದೆ ಎಂದು ತ್ರಿಪುರದ ಮುಖ್ಯಮಂತ್ರಿ ಮಾಣಿಕ್ ಸಹಾ ಹೇಳಿದ್ದಾರೆ. ಅಗರ್ತಲಾ ರೈಲು ನಿಲ್ದಾಣದಲ್ಲಿ ನಡೆದ ಅಗರ್ತಲಾ-ದಿಯೋಘರ್ ನಡುವಿನ ಎಕ್ಸ್‍ಪ್ರೆಸ್ ರೈಲಿಗೆ ಹಸಿರು ನಿಶಾನೆ ಅವರು ಮಾತನಾಡಿದರು ರೈಲು ಸಂಪರ್ಕದಿಂದಾಗಿ ರಾಜ್ಯದಲ್ಲಿ ಅಬಿವೃದ್ದಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ ಎಂದು ಮುಖ್ಯಮಂತ್ರಿ ಮಾಣಿಕ್ ಸಹಾ ಹೇಳಿದ್ದಾರೆ.

ಅಗರ್ತಲಾದಿಂದ ಕೋಲ್ಕತ್ತಾಗೆ ಸಂಪರ್ಕ ಕಲ್ಪಿಸುವ ಉದ್ದೇಶಿತ ರೈಲು ನೆರೆ ರಾಷ್ಟ್ರವಾದ ಬಾಂಗ್ಲಾದೇಶದ ಗಂಗಾಸಾಗರ ಮೂಲಕ ಸಂಪರ್ಕವಿದ್ದು ಇದರ ಪ್ರಾಯೋಗಿಕ ಚಾಲನೆಯನ್ನು ಈಗಾಗಲೇ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅವರು ಹೇಳಿದರು.

ಈಶಾನ್ಯ ರಾಜ್ಯಕ್ಕೆ ರಸ್ತೆ ಹೆದ್ದಾರಿ, ರೈಲ್ವೆ, ವಾಯುಮಾರ್ಗ ಒದಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದರು ಮತ್ತು ಅದನ್ನು ಮಾಡಿದ್ದಾರೆ, ಪ್ರಸ್ತುತ ಅಗರ್ತಲಾ ನಿಲ್ದಾಣವನ್ನು ವಿಶ್ವದರ್ಜೆಯನ್ನಾಗಿಸಲು ಕೇಂದ್ರವು 260 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಮತ್ತು ಮೂರು ರೈಲು ನಿಲ್ದಾಣಗಳಾದ ಧರ್ಮನಗರ, ಉದಯಪುರ ಮತ್ತು ಕುಮಾರ್‍ಘಾಟ್ ಅನ್ನು ಅಮೃತ್ ಭಾರತ್ ನಿಲ್ದಾಣಗಳಾಗಿ ಪರಿವರ್ತಿಸಲು 93 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಸಿಎಂ ಹೇಳಿದರು.

ಅಡ್ವಾಣಿಯವರಿಗೆ ಭಾರತರತ್ನ ನೀಡಿರುವುದು ಸ್ವಾಗತಾರ್ಹ : ಸಿಎಂ ಸಿದ್ದರಾಮಯ್ಯ

ಪ್ರಸ್ತುತ, ಸುಮಾರು 18 ಎಕ್ಸ್‍ಪ್ರೆಸ್ ಮತ್ತು ಸ್ಥಳೀಯ ರೈಲುಗಳು ರಾಜ್ಯದ ಜನರಿಗೆ ಸೇವೆಯನ್ನು ಒದಗಿಸುತ್ತಿವೆ, ಇದನ್ನು ನೋಡಿದರೆ ಒಂದು ಕಾಲದಲ್ಲಿ ನಂಬಲಸಾಧ್ಯವಾಗಿತ್ತು. ಎಲ್‍ಹೆಚ್‍ಬಿ ಕೋಚ್‍ಗಳೊಂದಿಗೆ ಅಗರ್ತಲಾ-ದಿಯೋಘರ್ ಎಕ್ಸ್‍ಪ್ರೆಸ್ ರೈಲನ್ನು ಪರಿವರ್ತಿಸಿದ್ದಕ್ಕಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಹಾ ಹೇಳಿದರು.

RELATED ARTICLES

Latest News