Friday, May 17, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-02-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-02-2024)

ನಿತ್ಯ ನೀತಿ : ನಾವು ನಮ್ಮ ಕೋಪವನ್ನು ಪ್ರದರ್ಶಿಸುವುದು ತಪ್ಪಲ್ಲ. ಅದೂ ಕೂಡ ಒಂದು ಉತ್ತಮ ಗುಣವೇ. ಆದರೆ ಅದು ಯಾವ ಕಾರಣಕ್ಕೂ ಕ್ರೌರ್ಯಕ್ಕೆ ತಿರುಗದಂತೆ ಎಚ್ಚರ ವಹಿಸಬೇಕು. ಕೋಪ ಯಾವತ್ತೂ ನಮ್ಮ ನಿಯಂತ್ರಣದಲ್ಲಿರಬೇಕು. ಅದು ನಮ್ಮಲ್ಲಿ ಪಶ್ಚಾತ್ತಾಪವನ್ನುಂಟು ಮಾಡಬಾರದು.

ಪಂಚಾಂಗ ಭಾನುವಾರ 04-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಹೇಮಂತ ಋತು / ಪುಷ್ಯ ಮಾಸ / ಕೃಷ್ಣ ಪಕ್ಷ / ತಿಥಿ: ನವಮಿ / ನಕ್ಷತ್ರ: ವಿಶಾಖಾ / ಯೋಗ: ವೃದ್ಧಿ / ಕರಣ: ವಣಿಜ್

ಸೂರ್ಯೋದಯ : ಬೆ.06.46
ಸೂರ್ಯಾಸ್ತ : 06.22
ರಾಹುಕಾಲ : 4.30-6.00
ಯಮಗಂಡ ಕಾಲ : 12.00-1.30
ಗುಳಿಕ ಕಾಲ : 3.00-4.30

ರಾಶಿ ಭವಿಷ್ಯ
ಮೇಷ
: ವ್ಯವಹಾರ ವಿಸ್ತರಣೆಯಿಂದ ಲಾಭ ಸಿಗಲಿದೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ.
ವೃಷಭ: ಯಾವುದೇ ವಿಚಾರವಾದರೂ ತೀರ್ಮಾನ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಚರ್ಚಿಸಿ.
ಮಿಥುನ: ಉದಾರ ಮನೋಭಾವದಿಂದಾಗಿ ನೆರೆಹೊರೆಯವರ ಗಮನ ಸೆಳೆಯುವಿರಿ.

ಕಟಕ: ಮುಖ್ಯ ಕೆಲಸವೊಂದಕ್ಕೆ ಸಲಹೆ ಪಡೆಯಲು ಗಣ್ಯ ವ್ಯಕ್ತಿಯನ್ನು ಸಂಪರ್ಕಿಸುವಿರಿ.
ಸಿಂಹ: ನೂತನ ಯೋಜನೆ ಪ್ರಾರಂಭಿಸಲು ಹಣಕಾಸಿನ ಕೊರತೆ ಇರುವುದಿಲ್ಲ.
ಕನ್ಯಾ: ಪೂರ್ವ ನಿಯೋಜಿತ ಕೆಲಸಗಳು ಉತ್ತಮವಾಗಿ ನಡೆಯುವುದರಿಂದನೆಮ್ಮದಿ ಸಿಗಲಿದೆ.

ತುಲಾ: ಹಿರಿಯರ ಮಾತಿ ನಂತೆ ನಡೆದುಕೊಳ್ಳುವುದರಿಂದ ಶುಭ ಫಲ ಸಿಗಲಿದೆ.
ವೃಶ್ಚಿಕ: ಮಕ್ಕಳ ಬಗ್ಗೆ ಜವಾಬ್ದಾರಿ ವಹಿಸಿ. ಮಕ್ಕಳಿಗೆ ವಸ್ತುಗಳನ್ನು ಖರೀದಿಸುವಿರಿ.
ಧನುಸ್ಸು: ಸಣ್ಣಪುಟ್ಟ ಅಡಚಣೆಗಳು ಕೆಲಸ-ಕಾರ್ಯ ಗಳಿಗೆ ಅಡ್ಡಿಯನ್ನುಂಟುಮಾಡಲಿವೆ.

ಮಕರ: ಹೂವು, ಹಣ್ಣು, ತರಕಾರಿ, ಹಾಲಿನ ವ್ಯಾಪಾರಿಗಳಿಗೆ ಅಧಿಕ ಲಾಭ ಸಿಗಲಿದೆ.
ಕುಂಭ: ಮೇಲಧಿಕಾರಿಗಳಿಂದ ಯಾವುದೇ ವಿಷಯವನ್ನು ಮುಚ್ಚಿಡುವ ಪ್ರಯತ್ನ ಮಾಡದಿರಿ.
ಮೀನ: ದೇವರ ದಯೆಯಿಂದ ಎಲ್ಲ ಕಾರ್ಯಗಳೂ ನಿರ್ವಿಘ್ನವಾಗಿ ನೆರವೇರುವುವು.

RELATED ARTICLES

Latest News