Monday, February 26, 2024
Homeರಾಷ್ಟ್ರೀಯಕಾಲುವೆಗೆ ಕಾರು ಉರುಳಿ ಬಿದ್ದು ನಾಲ್ವರ ಸಾವು

ಕಾಲುವೆಗೆ ಕಾರು ಉರುಳಿ ಬಿದ್ದು ನಾಲ್ವರ ಸಾವು

ಆಗ್ರಾ,ಜ.20- ತಡರಾತ್ರಿ ವೇಗವಾಗಿ ಬಂದ ಕಾರೊಂದು ಕಾಲುವೆಗೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಆಗ್ರಾದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆ ಸಮಾರಂಭ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ಕಾರಿನಲ್ಲಿ ಆರು ಮಂದಿ ಇದ್ದರು ಅವರ ಕಾರು ನಗರದ ತಾಜ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಡಿಗ್ನರ್ ರಸ್ತೆ ಬದಿಯ ಕಾಲುವೆ ಉರುಳಿಬಿದ್ದು ಈ ದುರ್ಘಟನೆ ನಡೆದಿದೆ.

ಆ್ಯಂಟಿ ಬಯೋಟಿಕ್ ಬಳಕೆಗೆ ಕಡ್ಡಾಯವಾಗಿ ಕಾರಣ ತಿಳಿಸಲು ವೈದ್ಯರಿಗೆ ಸೂಚನೆ

ಕಾರಿನಲ್ಲಿದ್ದ ಆರು ಮಂದಿ ಪ್ರಯಾಣಿಕರಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ಆಗ್ರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಉಪ ಆಯುಕ್ತ (ಡಿಸಿಪಿ, ನಗರ) ಸೂರಜ್ ಕುಮಾರ್ ರೈ ಸುದ್ದಿಗಾರರಿಗೆ ತಿಳಿಸಿದರು.

RELATED ARTICLES

Latest News