Sunday, December 1, 2024
Homeರಾಜ್ಯಸಾಲುಸಾಲು ರಜೆ : ಹಗಲು ದರೋಡೆಗಿಳಿದ ಖಾಸಗಿ ಬಸ್ ಮಾಲೀಕರು, ಇಲ್ಲಿದೆ ಶಾಕಿಂಗ್ ದರಪಟ್ಟಿ

ಸಾಲುಸಾಲು ರಜೆ : ಹಗಲು ದರೋಡೆಗಿಳಿದ ಖಾಸಗಿ ಬಸ್ ಮಾಲೀಕರು, ಇಲ್ಲಿದೆ ಶಾಕಿಂಗ್ ದರಪಟ್ಟಿ

ಬೆಂಗಳೂರು,ಏ.5- ಸಿಗುವ ಸಾಲು ರಜೆಗಳಿಂದಾಗಿ ಊರಿಗೆ ತೆರಳಿ ಯುಗಾದಿ ಹಬ್ಬ ಆಚರಿಸಲು ತೀರ್ಮಾನಿಸಿರುವ ಸಾಮಾನ್ಯ ಜನರಿಗೆ ಖಾಸಗಿ ಬಸ್ ಮಾಲೀಕರು ಟಿಕೆಟ್ ಬೆಲೆ ಏರಿಕೆ ಶಾಕ್ ನೀಡಿದ್ದಾರೆ.

ಭಾನುವಾರ ಮಾಮೂಲು ರಜೆ ಸೋಮವಾರ ಒಂದು ದಿನ ಕೆಲಸ ಮಾಡಿದರೆ ಮಂಗಳವಾರ ಯುಗಾದಿ ರಜೆ ಬುಧವಾರ ಕಳೆದರೆ ರಂಜಾನ್ ಹಬ್ಬ ಹೀಗಾಗಿ ಸಾಲು ಸಾಲು ರಜೆ ಸಿಗುವುದರಿಂದ ಜನ ಊರಿಗೆ ತೆರಳಲು ಪ್ಲಾನ್ ಮಾಡಿಕೊಂಡಿದ್ದಾರೆ. ಇದರ ಜತೆಗೆ ಮಕ್ಕಳ ಎಕ್ಸಾಂ ಮುಗಿದು ಅವರಿಗೂ ರಜೆ ಇರುವುದರಿಂದ ನಾಳೆ ರಾತ್ರಿಯೇ ಕೆಲವರು ಊರಿಗೆ ಹೋಗಲು ತಯಾರಾಗಿದ್ದಾರೆ. ಇನ್ನು ಕೆಲವರು ಸೋಮವಾರ ಮತ್ತು ಬುಧವಾರ ರಜೆ ಹಾಕಿ ಒಂದು ವಾರ ಊರಿನಲ್ಲೇ ಹಬ್ಬ ಮಾಡುತ್ತ ಕಾಲ ಕಳೆಯಲು ನಿರ್ಧರಿಸಿದ್ದಾರೆ.

ಇಂತಹ ಸಮಯವನ್ನೇ ಕಾಯುತ್ತಿದ್ದ ಖಾಸಗಿ ಬಸ್ಗಳ ಮಾಲೀಕರು ಟಿಕೆಟ್ ದರ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದ್ದಾರೆ. ಮಾಮೂಲಿ ಬಸ್ ದರದ ದುಪ್ಪಟ್ಟು ಬೆಲೆ ಏರಿಕೆ ಮಾಡಿರುವ ಖಾಸಗಿ ಬಸ್ ಮಾಲಿಕರು ಎಸಿ ಬಸ್ಗಳಿಗೆ ವಿಮಾನಯಾನಕ್ಕಿಂತಲೂ ದುಬಾರಿ ಬೆಲೆ ನಿಗದಿಪಡಿಸಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಬೆಂಗಳೂರು-ಶಿವಮೊಗ್ಗ:
ಸಾಮಾನ್ಯ ದಿನದದರ
ರೂ.450-ರೂ.600
ಇವತ್ತಿನ ಟಿಕೆಟ್ ದರ
ರೂ.950- ರೂ.1250

ಬೆಂಗಳೂರು- ಹುಬ್ಬಳ್ಳಿ:
ಸಾಮಾನ್ಯ ದರ
ರೂ.600- ರೂ.1000
ಇಂದಿನ ಟಿಕೆಟ್
ರೂ.1200-ರೂ.1600

ಬೆಂಗಳೂರು-ಮಂಗಳೂರು:
ಸಾಮಾನ್ಯ ದಿನದ ದರ
ರೂ.500- ರೂ.1000
ಇಂದಿನ ದರ
ರೂ.1000- ರೂ.1400

ಬೆಂಗಳೂರು-ಕಲಬುರುಗಿ:
ಸಾಮಾನ್ಯ ದಿನದ ದರ
ರೂ.900- ರೂ.1300
ಇಂದಿನ ದರ
ರೂ.1400-ರೂ.1900

ಬೆಂಗಳೂರು-ಮಡಿಕೇರಿ:
ಸಾಮಾನ್ಯ ದಿನದ ದರ
ರೂ.500- ರೂ.600
ಇಂದಿನ ದರ
ರೂ.950- ರೂ.1200

ಬೆಂಗಳೂರು – ಉಡುಪಿ:
ಸಾಮಾನ್ಯ ದಿನದ ದರ
ರೂ.600- ರೂ.950
ಇಂದಿನ ದರ
ರೂ.1700-ರೂ.2200

ಬೆಂಗಳೂರು-ಧಾರವಾಡ:
ಸಾಮಾನ್ಯ ದಿನದ ದರ
ರೂ.650- ರೂ.800
ಇಂದಿನ ದರ
ರೂ.1350-ರೂ.1750

ಬೆಂಗಳೂರು-ಬೆಳಗಾವಿ:
ಸಾಮಾನ್ಯ ದಿನದ ದರ
ರೂ.500 ರೂ.800
ಇಂದಿನ ದರ
ರೂ.1300-ರೂ.1800

ಬೆಂಗಳೂರು – ದಾವಣಗೆರೆ:
ಸಾಮಾನ್ಯ ದಿನದ ದರ
ರೂ.450 ರೂ.600
ಇಂದಿನ ದರ
ರೂ.900-ರೂ.1300

ಬೆಂಗಳೂರು – ಚಿಕ್ಕಮಗಳೂರು:
ಸಾಮಾನ್ಯ ದರ ರೂ.550 -600
ಇಂದಿನದರರೂ.1100-ರೂ.1300

ಬೆಂಗಳೂರು – ಬೀದರ್:
ಸಾಮಾನ್ಯ ದರ ರೂ.850 -1200
ಇಂದಿನದರ ರೂ.1600- 1800

ಬೆಂಗಳೂರು – ರಾಯಚೂರು
ಸಾಮಾನ್ಯ ದರ ರೂ.600 -900
ಇಂದಿನ ದರ
ರೂ.1250-ರೂ.1600

RELATED ARTICLES

Latest News