Friday, November 22, 2024
Homeರಾಷ್ಟ್ರೀಯ | Nationalದೆಹಲಿಯಿಂದ ಟೊರೊಂಟೊ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ

ದೆಹಲಿಯಿಂದ ಟೊರೊಂಟೊ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್‌ ಬೆದರಿಕೆ

ನವದೆಹಲಿ, ಜೂನ್‌ 5 – ಕೆನಡಾದ ಟೊರೊಂಟೊ ತೆರಳುತ್ತಿದ್ದ ವಿಮಾನಕ್ಕೆ ಬಾಂಬ್‌ ಇಡಲಾಗಿದೆ ಎಂಬ ಇಮೇಲ್‌ ಬಂದ ಹಿನ್ನಲೆಯಲ್ಲಿ ಕಳೆದ ರಾತ್ರಿ ಇಲ್ಲಿನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲ ಕಾಲ ಆತಂಕ ಶುರುವಾಗಿತ್ತು.

ದೆಹಲಿ ಇಂಟರ್‌ನ್ಯಾಶನಲ್‌‍ ಏರ್‌ಪೋರ್ಟ್‌ ಲಿಮಿಟೆಡ್‌ ಕಚೇರಿಗೆ ಮಂಗಳವಾರ ರಾತ್ರಿ 10.50 ಕ್ಕೆ ದೆಹಲಿ-ಟೊರೊಂಟೊ ಏರ್‌ ಕೆನಡಾ ವಿಮಾನದಲ್ಲಿ ಬಾಂಬ್‌ ಇಡಲಾಗಿದೆ ಎಂದು ಇಮೇಲ್‌ ಬಂದಿದೆ ಎಂದು ಹಿರಿಯ ಪೊಲೀಸ್‌‍ ಅಧಿಕಾರಿಗಳು ತಿಳಿಸಿದ್ದಾರೆ.

ನಂತರ ಏರ್‌ ಕೆನಡಾ ವಿಮಾನ ವನ್ನು ಸಂಪೂರ್ಣವಾಗಿ ತಪಾಸಣೆ ನಡೆಸಲಾಯಿತು ಮತ್ತು ಅನುಮಾನಾಸ್ಪದ ಏನೂ ಕಂಡುಬಂದಿಲ್ಲ ಎಂದು ಹೇಳಿದರು ಬೆದರಿಕೆ ಸುಳ್ಳು ಎಂದು ತಿಳಿದುಬಂದು ಮಧ್ಯರಾತ್ರಿ ವಿಮಾನ ಕೆನಡಾಗೆ ತೆರಳಿದೆ.ಘಟನೆ ಕುರಿತಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

RELATED ARTICLES

Latest News