Monday, June 17, 2024
Homeರಾಷ್ಟ್ರೀಯಅತಿಹೆಚ್ಚು ಮತಗಳ ಅಂತರದಿಂದ ಗೆದ್ದು ಹೊಸ ದಾಖಲೆ ಬರೆದ ಇಂದೋರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಅತಿಹೆಚ್ಚು ಮತಗಳ ಅಂತರದಿಂದ ಗೆದ್ದು ಹೊಸ ದಾಖಲೆ ಬರೆದ ಇಂದೋರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ

ಇಂದೋರ್‌,ಜೂನ್‌.5- ದೇಶದಲ್ಲಿ ನಡೆದ ಲೋಕಸಭೆ ಚುನಾವಣೆಯ ಜನಾದೇಶ ಪ್ರಕಟಗೊಂಡಿದ್ದು ಅತಿಹೆಚ್ಚು ಮತಗಳ ಅಂತರದಿಂದ ಗೆದ್ದು ಹೊಸ ದಾಖಲೆ ಬರೆದ ಸಾಲಿನಲ್ಲಿ ಮಧ್ಯಪ್ರದೇಶದ ಇಂದೋರ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಶಂಕರ್‌ ಲಲ್ವಾನಿ ಮೊದಲ ಸಾಲಿನಲ್ಲಿದ್ದಾರೆ.ಶಂಕರ್‌ ಲಲ್ವಾನಿ ಅವರು ತಮ ಸಮೀಪ ಪ್ರತಿಸ್ಫರ್ಧಿ 11,75,092 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ.

ಶಂಕರ್‌ ಲಲ್ವಾನಿ ವಿರುದ್ಧ ಸ್ಪರ್ಧಿಸಿದ್ದ ಎಲ್ಲ 13 ಅಭ್ಯರ್ಥಿಗಳು ಇಂದೋರ್‌ನಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಇನ್ನು ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ವಿದಿಶಾ ಲೋಕಸಭಾ ಕ್ಷೇತ್ರದಲ್ಲಿ 821408 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇವರು ಕಾಂಗ್ರೆಸ್‌‍ನ ಪ್ರತಾಪ್‌ ಭಾನು ಶರ್ಮಾ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ ದಾಖಲೆ ಅಂತರದ ಗೆಲುವಿನಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ನವಸಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ. ಪಾಟೀಲ ಅವರು 7,73,551 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಗಂಧಿನಗರದಿಂದ ಅಮಿತ್‌ ಶಾ ಕೂಡ 7,44.716ಮತಗಳ ಅಂತರದಿಂದ ಗೆದ್ದು 4 ನೇ ಸ್ಥಾನದಲ್ಲಿದ್ದಾರೆ

RELATED ARTICLES

Latest News