Saturday, May 18, 2024
Homeರಾಷ್ಟ್ರೀಯಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಾಜಿ ಬಾಕ್ಸರ್‌ ಅಖಿಲ್‌ ಕುಮಾರ್‌

ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮಾಜಿ ಬಾಕ್ಸರ್‌ ಅಖಿಲ್‌ ಕುಮಾರ್‌

ನವದೆಹಲಿ,ಮೇ 4- ಕಾಮನ್‌ವೆಲ್ತ್‌‍ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಮಾಜಿ ಬಾಕ್ಸರ್‌ ಅಖಿಲ್‌ ಕುಮಾರ್‌ ಅವರು ಜಜ್ಜರ್‌ವಲಯದ ಸಹಾಯಕ ಕಮಿಷನರ್‌ ಹುದ್ದೆ ಪಡೆದಿದ್ದು ಉದಯೋನ್ಮುಖ ಕ್ರೀಡಾಪಟುಗಳಿಗೆ ಮಾದಕ ದ್ರವ್ಯದ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸಿದ್ದಾರೆ. ಜಜ್ಜರ್‌ನ ಜವಾಹರಲಾಲ್‌ ಬಾಗ್‌ ಸ್ಟೇಡಿಯಂನಲ್ಲಿ ನಡೆದ ಸಂವಾದದಲ್ಲಿ ಪ್ರಸ್ತುತ ಡ್ರಗ್ಸ್ ನಿಂದ ಎದುರಾಗಿರುವ ಬೆದರಿಕೆಯ ವಿರುದ್ಧ ಹೋರಟಕ್ಕೆ ಮುಂದಾಗಿದ್ದಾರೆ ಮತ್ತು ಕ್ರೀಡಾಪಟುಗಳಿಗೆ ತಮ ಆರೋಗ್ಯದ ಬಗ್ಗೆ ಸಲಹೆ ನೀಡಿದ್ದಾರೆ.

2006ರಲ್ಲಿ ಚಿನ್ನ ಗೆದ್ದು 2008ರ ಬೀಜಿಂಗ್‌ ಒಲಿಂಪಿಕ್ಸ್ ನಿಂದ ಕ್ವಾರ್ಟರ್‌ಫೈನಲಿಸ್ಟ್‌ವರೆಗೆ ಬಂದ ಪದಕಗಳಿಸುವುದರಲ್ಲಿ ಕೂದಲೆಳೆ ಅಂತರದಲ್ಲಿ ವಂಚಿತರಾಗಿದ್ದರು ಪ್ರಸ್ತುತ ಅವರು ಬಾಕ್ಸರ್‌ಗಳು ಸೇರಿದಂತೆ 100ಕ್ಕೂ ಹೆಚ್ಚು ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಿದರು.

ಕ್ರೀಡಾಪಟು ಮತ್ತು ರಾಷ್ಟ್ರೀಯ ಡೋಪಿಂಗ್‌ ವಿರೋಧಿ ಏಜೆನ್ಸಿ ಪ್ಯಾನೆಲಿಸ್ಟ್‌ ಆಗಿ, ನಾನು ಈ ಅಪಾಯವನ್ನು ಅರ್ಥಮಾಡಿಕೊಂಡಿದ್ದೇನೆ. ಹಾಗಾಗಿ, ನಾನು ಅವರಿಗೆ ಹೇಗೆ ಅದರಿಂದ ದೂರವರಬೇಕುಎಂಬುದರ ಕುರಿತು ಮೂಲಭೂತ ಸಲಹೆಯನ್ನು ನೀಡಿದ್ದೇನೆ. ಕ್ರೀಡಾಕೂಟದ ಸಂದರ್ಭದಲ್ಲಿ ವಾಡಿಕೆಯಂತೆ ವೈದ್ಯಕೀಯ ತಪಾಸಣೆಯ ಸಮಯದಲ್ಲಿ ವೈದ್ಯಜಾಗೃತರಾಗಿರಬೇಕು, ಅಥ್ಲೀಟ್‌ಗಳಿಗೆ ಯಾವುದೇ ನಿಷೇಧಿತ ಔಷಧವನ್ನು ಶಿಫಾರಸು ಮಾಡಬಾರದು ಎಂದು ತಿಳಿಸಿದರು.

ಡ್ರಗ್‌್ಸನಲ್ಲಿ ಸಿಕ್ಕಿಬಿದ್ದಿರುವ ಯುವಕರು ತಮ್ಮ ವೃತ್ತಿಯನ್ನು ಹಾಳುಮಾಡಿಕೊಳ್ಳುವುದು ಮಾತ್ರವಲ್ಲ, ಪೋಷಕರ ನಿರೀಕ್ಷೆಗಳನ್ನು ಹುಸಿಗೊಳಿಸುತ್ತಿದ್ದಾರೆ. ಇದಲ್ಲದೆ ಕುಡಿತದಿಂದ ಯಾರಿಗೂ ಪ್ರಯೋಜನವಾಗಿಲ್ಲ, ಅದು ಅವನತಿಗೆ ಮಾತ್ರ ಕಾರಣವಾಗುತ್ತದೆ ಎಂದು ಅವರು ಹೇಳಿದರು.

ಮಾದಕ ವ್ಯಸನಕ್ಕೆ ಬೀಳುವ ಮೂಲಕ, ಯುವಕರು ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿದ್ದಾರೆ, ಅವರು ಕುಟುಂಬವನ್ನು ಸಹ ನಾಶಪಡಿಸುತ್ತಿದ್ದಾರೆ ಯುವ ಸಮುದಾಯವನ್ನು ಎಚ್ಚರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಅಖಿಲ್‌‍, ನರೇಶ್‌ ಸಂಧು ಅವರು ಸಂಚಾರ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು ಹರಿಯಾಣ ಡಿಜಿಪಿ ಐಪಿಎಸ್‌‍ ಶತ್ರುಜೀತ್‌ ಕಪೂರ್‌ ಮತ್ತು ಸೋನೆಪತ್‌ ಮತ್ತು ಜಜ್ಜರ್‌ ಪೊಲೀಸ್‌‍ ಆಯುಕ್ತ ಐಪಿಎಸ್‌‍ ಬಿ ಸತೀಶ್‌ ಬಾಲನ್‌ ಅವರು ಈ ಜಾಗೃತಿ ಅಭಿಯಾನವನ್ನು ಭಾಗವಹಿಸಿದ್ದರು.

RELATED ARTICLES

Latest News