Sunday, April 14, 2024
Homeರಾಷ್ಟ್ರೀಯಅನಂತ್ ಅಂಬಾನಿ ಮದುವೆಗೆ, ಬಿಲ್‍ಗೇಟ್ಸ್, ಜುಕರ್ಬರ್ಗ್ ಸೇರಿದಂತೆ ಜಾಗತಿಕ ಉದ್ಯಮಿಗಳಿಗೆ ಆಹ್ವಾನ

ಅನಂತ್ ಅಂಬಾನಿ ಮದುವೆಗೆ, ಬಿಲ್‍ಗೇಟ್ಸ್, ಜುಕರ್ಬರ್ಗ್ ಸೇರಿದಂತೆ ಜಾಗತಿಕ ಉದ್ಯಮಿಗಳಿಗೆ ಆಹ್ವಾನ

ಮುಂಬೈ, ಫೆ.22- ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಕಾ ಮರ್ಚೆಂಟ್ ಅವರ ವಿವಾಹ ಜು.12ರಂದು ನಿಗದಿಯಾಗಿದ್ದು, ಇದಕ್ಕೂ ಮುನ್ನ ಗುಜರಾತ್‍ನ ಜಾಮ್‍ನಗರದಲ್ಲಿ ನಡೆಯಲಿರುವ ವಿವಾಹಪೂರ್ವ ಉತ್ಸವದಲ್ಲಿ ಜಾಗತಿಕ ಮಟ್ಟದ ಉದ್ಯಮಿಗಳು ಭಾಗಿಯಾಗುತ್ತಿದ್ದಾರೆ.

ಮಾ.1ರಿಂದ 3ರ ವರೆಗೆ ನಡೆಯಲಿರುವ ಈ ಉತ್ಸವಕ್ಕೆ ಈಗಾಗಲೇ ಸ್ವತಃ ಮುಖೇಶ್ ಅಂಬಾನಿ ಅವರೇ ಮುತುವರ್ಜಿ ವಹಿಸಿ ಜಾಗತಿಕ ಉದ್ಯಮಿಗಳನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಈಗಾಗಲೇ ಕಳೆದ ಜನವರಿಯಲ್ಲಿ ನಡೆದಿದ್ದ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿತ್ತು. ಇದು ಎಲ್ಲರನ್ನೂ ಆಕರ್ಷಿಸಿತ್ತು. ಪ್ರಸ್ತುತ ವಿವಾಹಕ್ಕೆ ಮುನ್ನ ನಡೆಯಲಿರುವ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಫೋಟೋಶೂಟ್‍ಗಾಗಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬೈಜೂಸ್ ಸಂಸ್ಥಾಪಕ ರವೀಂದ್ರನ್ ವಿರುದ್ಧ ED ಲುಕೌಟ್ ನೋಟಿಸ್ ವಿಸ್ತರಣೆ

ಈ ಬಗ್ಗೆ ರಿಲಾಯನ್ಸ್ ಫೌಂಡೇಷನ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಬರುವ ಕೆಲವು ಅತಿಥಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದಕ್ಕೆ ಪ್ರೀತಿ ಮತ್ತು ಪರಂಪರೆಯ ಎಳೆಗಳು ಎಂಬ ಶೀರ್ಷಿಕೆ ಕೂಡ ನೀಡಲಾಗಿದೆ. ಇದರಲ್ಲಿ ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಕೂಡ ಟಿಬಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ವಧು-ವರರ ವಸ್ತ್ರ ತಯಾರಿಕೆಗಾಗಿ ಈಗಾಗಲೇ ಗುಜರಾತ್‍ನ ಕಚ್ಛ್ ಮತ್ತು ಲಾಲ್ಪುರದಿಂದ ನುರಿತ ಮಹಿಳಾ ಕುಶಲಕರ್ಮಿಗಳನ್ನು ನಿಯೋಜಿಸಿದೆ.

ಈ ಉತ್ಸವದಲ್ಲಿ ಭಾಗಿಯಾಗುವ ಉದ್ಯಮಿಗಳ ಪಟ್ಟಿ ಹೀಗಿದೆ:
ಮೆಟಾ ಸಿಇಒ- ಮಾರ್ಕ್ ಜುಕರ್ಬರ್ಗ್
ಮೋರ್ಗಾನ್ ಸ್ಟಾನ್ಲಿ ಸಿಇಒ- ಟೆಡ್ ಪಿಕ್
ಮೈಕ್ರೋಸಾಫ್ಟ್ ಸಂಸ್ಥಾಪಕ- ಬಿಲ್‍ಗೇಟ್ಸ
ಡಿಸ್ನಿ ಸಿಇಒ- ಬಾಬ್ ಇಗರ್
ಬ್ಲ್ಯಾಕ್ರಾಕ್ ಸಿಇಒ- ಲ್ಯಾರಿ ಫಿಂಕ್
ಅಡ್ನಾಕ್ ಸಿಇಒ- ಸುಲ್ತಾನ್ ಅಹ್ಮದ್ ಅಲ್ ಜಾಬರ್
ಇಎಲ್ ರಾಥ್ಸ್ ಚೈಲ್ಡ ಅಧ್ಯಕ್ಷ- ಲಿನ್ ಫಾರೆಸ್ಟರ್ ಡಿ ರಾಥ್ಸ್ ಚೈಲ್ಡ
ಬ್ಯಾಂಕ್ ಆಫ್ ಅಮೆರಿಕಾ ಅಧ್ಯಕ್ಷ- ಬ್ರಿಯಾನ್ ಥಾಮಸ್ ಮೊಯ್ನಿಹಾನ್
ಬ್ಲಾಕ್‍ಸ್ಟೋನ್ ಅಧ್ಯಕ್ಷ- ಸ್ಟೀಫನ್ ಶ್ವಾಜ್ರ್ಮನ್
ಕತಾರ್ ಪ್ರೀಮಿಯರ್- ಮೊಹಮ್ಮದ್ ಬಿನ್ ಅಬ್ದುಲ್ ರೆಹ್ಮಾನ್ ಬಿನ್ ಜಾಸಿಮ್ ಅಲ್ ಥಾನಿ
ಅಡೋಬ್ ಸಿಇಒ- ಶಾಂತನು ನಾರಾಯಣ್
ಲೂಪಾ ಸಿಸ್ಟಮ್ಸ ಸಿಇಒ- ಜೇಮ್ಸ ಮುರ್ಡೋಕ್
ಹಿಲ್‍ಹೌಸ್ ಕ್ಯಾಪಿಟಲ್ ಸಂಸ್ಥಾಪಕ- ಜಾಗ್ ಲೀ
ಬಿಪಿ ಮುಖ್ಯ ಕಾರ್ಯನಿರ್ವಾಹಕ- ಮುರ್ರೆ ಆಚಿನ್ ಕ್ಲೋಸ್
ಎಕ್ಸಾರ್ ಸಿಇಒ- ಜಾನ್ ಎಲ್ಕಾನ್
ಬ್ರೂಕ್‍ಫೀಲ್ಡ ಅಸೆಟ್ ಮ್ಯಾನೇಜ್‍ಮೆಂಟ್ ಸಿಇಒ- ಬ್ರೂಸ್ ಫ್ಲಾಟ್

RELATED ARTICLES

Latest News