Thursday, May 2, 2024
Homeರಾಜ್ಯಬೈಜೂಸ್ ಸಂಸ್ಥಾಪಕ ರವೀಂದ್ರನ್ ವಿರುದ್ಧ ED ಲುಕೌಟ್ ನೋಟಿಸ್ ವಿಸ್ತರಣೆ

ಬೈಜೂಸ್ ಸಂಸ್ಥಾಪಕ ರವೀಂದ್ರನ್ ವಿರುದ್ಧ ED ಲುಕೌಟ್ ನೋಟಿಸ್ ವಿಸ್ತರಣೆ

ನವದೆಹಲಿ, ಫೆ.22- ವಿದೇಶಿ ವಿನಿಮಯ ನಿರ್ವಹಣೆಗೆ ಸಂಬಂಧಿಸಿದಂತೆ ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ ವಿರುದ್ಧ ಜಾರಿ ನಿರ್ದೇಶನಾಲಯ ಹೊರಡಿಸಿದ್ದ ಲುಕೌಟ್ ನೋಟಿಸ್ ವಿಸ್ತರಿಸಲಾಗಿದೆ. ಫೆಮಾ ಕಾಯ್ದೆಯನ್ವಯ ಇಡಿ ಕೋರಿಕೆ ಮೇರೆಗೆ ಬೈಜೂಸ್ ರವೀಂದ್ರನ್ ಅವರ ಲುಕೌಟ್ ನೊಟೀಸ್ ಸುತ್ತೋಲೆಯನ್ನು ಜಾರಿ ನಿರ್ದೇಶನಾಲಯ ನವೀಕರಿಸಿದೆ ಎಂದು ತಿಳಿದುಬಂದಿದೆ.

ಬೈಜೂಸ್ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ನಡೆಸುತ್ತಿದೆ. 9632 ಕೋಟಿ ರೂ.ಗಳಷ್ಟು ಖಜಾನೆಗೆ ನಷ್ಟ ಉಂಟುಮಾಡಿ ಭಾರತದ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದೆ ಎಂದು ಹಣಕಾಸು ಅಪರಾಧಗಳ ತನಿಖಾ ಸಂಸ್ಥೆ ಆರೋಪ ಮಾಡಿದೆ. ಬೈಜು ರವೀಂದ್ರನ್ ಅವರು ಭಾರತದ ಹೊರಗೆ ಮಾಡಿರುವ ಹೂಡಿಕೆ, ಮುಂಗಡ ಹಣ ರವಾನೆ, ಆಮದು ದಾಖಲೆಗಳನ್ನು ಸಲ್ಲಿಸಲು ವಿಫಲ, ರಫ್ತಿನ ಆದಾಯವನ್ನು ತಡವಾಗಿ ಸಲ್ಲಿಸುವ ಮೂಲಕ (ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ) ನಿಬಂಧನೆಗಳ ಉಲ್ಲಂಘನೆ, ಭಾರತದ ಹೊರಗೆ ಕಂಪೆನಿ ಮಾಡಿರುವ ಹಣದ ದಾಖಲೆ ಸಲ್ಲಿಸಲು ವಿಫಲ ಮತ್ತು ಕಂಪೆನಿ ಸ್ವೀಕರಿಸಿದ ಎಫ್‍ಡಿಐ ಷೇರುಗಳನ್ನು ಹಂಚಿಕೆ ಮಾಡಲು ವಿಫಲವಾಗಿರುವುದೂ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿವೆ.

ವಿಧಾನಸಭೆ ಕಲಾಪ ವೀಕ್ಷಿಸಿದ ಬೀದಿಬದಿ ವ್ಯಾಪಾರಿಗಳು

ಫೆಮಾ ದೂರಿನ ಆಧಾರದ ಮೇಲೆ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ಮತ್ತು ಬೈಜು ರವೀಂದ್ರನ್ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದು, ನಿಬಂಧನೆಗಳ ಉಲ್ಲಂಘನೆ ಮತ್ತು 9362 ಕೋಟಿ ರೂ. ಮೊತ್ತಕ್ಕೆ ವಿವರ ಕೇಳಿದೆ. 2011 ರಿಂದ 2023ರ ವರೆಗೆ ಕಂಪೆನಿಯು 28 ಸಾವಿರ ಕೋಟಿ ರೂ.ನಷ್ಟು ವಿದೇಶಿ ನೇರ ಹೂಡಿಕೆ ಪಡೆದಿದೆ ಎಂದು ಇಡಿ ನಡೆಸಿದ ದಾಳಿ ಸಂದರ್ಭದಲ್ಲಿ ತಿಳಿದುಬಂದಿದೆ.

ಸಾಗರೋತ್ತರ ನೇರ ಹೂಡಿಕೆ ಹೆಸರಿನಲ್ಲಿ ಕಂಪೆನಿಯು ಇದೇ ಅವಧಿಯಲ್ಲಿ ವಿದೇಶಿ ನ್ಯಾಯವ್ಯಾಪ್ತಿಗಳಿಗೆ 9754 ಕೋಟಿ ರೂ. ರವಾನೆ ಮಾಡಿದೆ ಎಂದು ಹೇಳಿಕೊಂಡಿದೆ. 2011ರಲ್ಲಿ ಸ್ಥಾಪಿತವಾದ ಕೋಚಿಂಗ್ ಸಂಸ್ಥೆಯಾದ ಬೈಜೂಸ್ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರಿ ಉತ್ಕರ್ಷಕ್ಕೆ ಸಾಕ್ಷಿಯಾಯಿತು. ಇದು ಆಕಾಶ್ ಎಜುಕೇಷನಲ್ ಸರ್ವೀಸ್‍ಅನ್ನು ಕೂಡ ಹೊಂದಿದ್ದು, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗಳ ಕೋರ್ಸ್‍ಗಳಿಗೆ ತರಬೇತಿ ನೀಡುತ್ತಿದೆ.

ಸಿಬ್ಬಂದಿಗೆ ವೇತನ ಕೊಡಲು ಬೈಜೂಸ್ ರವೀಂದ್ರನ್ ಬೆಂಗಳೂರಿನ ಮನೆಯನ್ನೇ ನೂರು ಕೋಟಿ ರೂ.ಗಳಿಗೆ ಅಡವಿಟ್ಟಿದ್ದರು. ಆರ್ಥಿಕ ಸಂಕಷ್ಟದಿಂದಾಗಿ ಉದ್ಯೋಗಿಗಳಿಗೆ ಸಂಬಳ ನೀಡಲಾಗದ ಸ್ಥಿತಿಗೆ ಬೈಜೂಸ್ ತಲುಪಿತ್ತು. ಮನೆಯನ್ನು ಅಡವಿಟ್ಟು ಹಣ ಸಂಗ್ರಹಿಸಿ ಉದ್ಯೋಗಿಗಳಿಗೆ ನವೆಂಬರ್ ತಿಂಗಳ ವೇತನವನ್ನು ಅವರು ನೀಡಿದ್ದರು. ರವೀಂದ್ರನ್ ಅವರ ಕುಟುಂಬವು ಬೆಂಗಳೂರಿನಲ್ಲಿ ಎರಡು ಮನೆಗಳನ್ನು ಹೊಂದಿದ್ದು ಮತ್ತು ಬೆಲೆಬಾಳುವ ಗೆಟೆಡ್ ಸಮುದಾಯ ಎಫ್ಸಿಲಾನ್‍ನಲ್ಲಿ ನಿರ್ಮಾಣ ಹಂತದಲ್ಲಿರುವ ವಿಲ್ಲಾ ಇದೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ : ಕಾರ್ಮಿಕ ಸಾವು

ಇದನ್ನು ಅಡವಿಟ್ಟು ಬೈಜು ರವೀಂದ್ರನ್ ನೂರು ಕೋಟಿ ರೂ. ಸಾಲ ಪಡೆದಿದ್ದಾರೆ. ಅವರ ಮಾತೃ ಸಂಸ್ಥೆಯಾದ ಥಿಂಕ್ ಅಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ 15 ಸಾವಿರ ಉದ್ಯೋಗಿಗಳಿಗೆ ಸಂಬಳ ಪಾವತಿಸಲು ಸ್ಟಾರ್ಟಪ್‍ನಲ್ಲಿರುವ ಹಣ ಬಳಸಿಕೊಂಡಿದ್ದು, ಕಡಿಮೆಯಾದ ಮೊತ್ತಕ್ಕೆ ಈ ಹಣ ಬಳಕೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.

RELATED ARTICLES

Latest News