Tuesday, May 28, 2024
Homeರಾಜ್ಯಮೇಲ್ಮನೆಯಲ್ಲಿ ಚಿನ್ನ ಲೇಪಿತ ಬ್ಯಾಡ್ಜ್ ಕುರಿತು ಚರ್ಚೆ

ಮೇಲ್ಮನೆಯಲ್ಲಿ ಚಿನ್ನ ಲೇಪಿತ ಬ್ಯಾಡ್ಜ್ ಕುರಿತು ಚರ್ಚೆ

ಬೆಂಗಳೂರು,ಫೆ.22- ವಿಧಾನಪರಿಷತ್ ಸದಸ್ಯರಿಗೆ ಚಿನ್ನದ ಲೇಪವಿರುವ ಬ್ಯಾಡ್ಜ್ ನೀಡಿರುವುದರ ಕುರಿತು ಪರಿಷತ್‍ನಲ್ಲಿ ತುಸು ಕಾಲ ಸ್ವಾರಸ್ಯಕರ ಚರ್ಚೆ ನಡೆಯಿತು. ಕಲಾಪದ ಮಧ್ಯೆ ಜೆಡಿಎಸ್‍ನ ಟಿ.ಎ.ಶರವಣ, ಸಭಾಪತಿಯವರಿಗೆ ನಿಮಗೆ ನಾನು ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ. ಏಕೆಂದರೆ ನಿವೃತ್ತಿಯಾಗಲಿರುವ ಪರಿಷತ್ ಸದಸ್ಯರಿಗೆ ಉಪಹಾರಕೂಟ, ಇಂದು ಫೋಟೋ ಸೆಷನ್ ಕಲ್ಪಿಸಿದ್ದಾರೆ. ಜೊತೆಗೆ ನಮ್ಮೆಲ್ಲರಿಗೂ ಗಂಡಭೇರುಂಡ ಇರುವ ಚಿನ್ನದ ಲೇಪವಿರುವ ಬ್ಯಾಡ್ಜ್ ಕೊಟ್ಟಿದ್ದೀರಿ. ಇದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ ಎಂದರು.

ರಾಜ್ಯಸಭೆ ಚುನಾವಣೆ : ಅಮಿತ್ ಷಾ ಜೊತೆ ಕುಮಾರಸ್ವಾಮಿ ಮಾತುಕತೆ

ಚಿನ್ನದ ಲೇಪನವಿರುವ ಬ್ಯಾಡ್ಜ್‍ನ್ನು ಎಲ್ಲ ಸದಸ್ಯರಿಗೂ ಕೊಟ್ಟಿರುವುದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದಾಗ, ಸಭಾಪತಿ ಹೊರಟ್ಟಿ ಅವರು, ನನಗೆ ಎಲ್ಲರೂ ಕೇಳುತ್ತಿದ್ದಾರೆ ನೀವೇ ಮಾಡಿಸಿಕೊಡಿ ಎಂದು ಕಾಲೆಳೆದರು. ಅದಕ್ಕೆ ಶರವಣ ಅವರು ನಾನು ಬೆಳ್ಳಿಯಲ್ಲಿ ಹಾಕಿ ಚಿನ್ನದ ಲೇಪ ಹಾಕಿಸಿಕೊಡುತ್ತೇನೆ ಎಂದರು. ಆಗ ಹೊರಟ್ಟಿ ಮಧ್ಯಾಹ್ನ ನನ್ನ ಕಚೇರಿಗೆ ಬಾ ನಿನಗೆ ಒಂದು ಕೆಲಸ ಕೊಡಬೇಕಾಗಿದೆ ಎಂದು ಹೇಳಿದರು.

RELATED ARTICLES

Latest News