Saturday, October 5, 2024
Homeರಾಷ್ಟ್ರೀಯ | Nationalಆಂಧ್ರ ವಿಧಾನಸಭೆ ಅಧಿವೇಶನ ಆರಂಭ, ಮೊದಲ ಬಾರಿಗೆ ಸದನ ಪ್ರವೇಶಿಸಿದ ಪವನ್‌ ಕಲ್ಯಾಣ್

ಆಂಧ್ರ ವಿಧಾನಸಭೆ ಅಧಿವೇಶನ ಆರಂಭ, ಮೊದಲ ಬಾರಿಗೆ ಸದನ ಪ್ರವೇಶಿಸಿದ ಪವನ್‌ ಕಲ್ಯಾಣ್

ಅಮರಾವತಿ, ಜೂ 21 (ಪಿಟಿಐ) ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ 16ನೇ ಆಂಧ್ರಪ್ರದೇಶ ವಿಧಾನಸಭೆಯ ಚೊಚ್ಚಲ ಅಧಿವೇಶನ ಇಂದಿನಿಂದ ಆರಂಭವಾಗಿದೆ.

ಅಧಿವೇಶನದಲ್ಲಿ ಹೊಸದಾಗಿ ಚುನಾಯಿತ ಶಾಸಕರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯೊಂದಿಗೆ ಆರಂಭವಾಯಿತು. ಹಂಗಾಮಿ ಸ್ಪೀಕರ್‌ ಆಗಿ ಟಿಡಿಪಿ ಶಾಸಕ ಜಿ ಬುಚ್ಚಯ್ಯ ಚೌಧರಿ ಅವರು ಕಲಾಪದ ಅಧ್ಯಕ್ಷತೆ ವಹಿಸಿದ್ದರು.ಅಮರಾವತಿಯ ವೆಲಗಪುಡಿಯಲ್ಲಿರುವ ವಿಧಾನಸಭೆ ಸಭಾಂಗಣದಲ್ಲಿ ಬೆಳಗ್ಗೆ 9:45ಕ್ಕೆ ಅಧಿವೇಶನ ಆರಂಭವಾಯಿತು. ಮುಖ್ಯಮಂತ್ರಿ ಎನ್‌ ಚಂದ್ರಬಾಬು ನಾಯ್ಡು ಎರಡೂವರೆ ವರ್ಷಗಳ ನಂತರ ಅಧಿವೇಶನಕ್ಕೆ ಹಾಜರಾಗಿದ್ದರು.

ನಟ-ರಾಜಕಾರಣಿ ಮತ್ತು ಜನಸೇನಾ ಮುಖ್ಯಸ್ಥ ಪವನ್‌ ಕಲ್ಯಾಣ್‌ ಪಿಠಾಪುರಂ ಶಾಸಕ ಮತ್ತು ಉಪ ಮುಖ್ಯಮಂತ್ರಿಯಾಗಿ ತಮ್ಮ 16 ವರ್ಷಗಳ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ಸದನವನ್ನು ಪ್ರವೇಶಿಸಿದರು. ನೂತನ ಸ್ಪೀಕರ್‌ ಮತ್ತು ಉಪಸಭಾಪತಿ ಆಯ್ಕೆಗೆ ಅಧಿವೇಶನ ಸಾಕ್ಷಿಯಾಗಲಿದೆ.

ಟಿಡಿಪಿ ಮೂಲಗಳ ಪ್ರಕಾರ, ಪಕ್ಷದ ಹಿರಿಯ ನಾಯಕ ಮತ್ತು ನರಸೀಪಟ್ಟಣಂ ಶಾಸಕ ಸಿ ಅಯ್ಯಣ್ಣಪತ್ರುಡು ಅವರು ಸ್ಪೀಕರ್‌ ಆಗಿ ಆಯ್ಕೆಯಾಗುವ ಸಾಧ್ಯತೆಯಿದೆ.ಸಿಎಂ ಹಾಗೂ ಕುಪ್ಪಂ ಶಾಸಕ ಚಂದ್ರಬಾಬು ನಾಯ್ಡು ಅವರು ಮೊದಲು ಪ್ರಮಾಣ ವಚನ ಸ್ವೀಕರಿಸಿದ ನಂತರ ಉಪ ಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ನಾಯ್ಡು ಅವರು ಹಂಗಾಮಿ ಸಭಾಪತಿ ಪೀಠಕ್ಕೆ ತೆರಳಿ ಸಂತಸ ಹಂಚಿಕೊಂಡರು. 2024ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 175 ಸದಸ್ಯ ಬಲದ ಸದನದಲ್ಲಿ 164 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಿದೆ.

RELATED ARTICLES

Latest News